ಹಾಗೆಯೇ ನೆನಪಾದರು ಕಮಲಾ ಹೆಮ್ಮಿಗೆ..!

0
7

ಕಮಲಾ ಹಮ್ಮಿಗೆಯವರು ಬಹು ಆತ್ಮೀಯವರು. ಇವರು ಮೊನ್ನೆ ನನ್ನ ಫೇಸ್‌ಬುಕ್‌ ಬರಹದ ಮೆಚ್ಚುಗೆಯಲ್ಲಿ ‘ಜಾನಪದ ದೇವತೆಗಳ’ ಬಗೆಗೆ ಲೇಖನಗಳನ್ನು ಬರೆಯೋ ಅಂತ ಪ್ರತಿಕ್ರಿಯೆಸಿದರು. ನಾನು ಆಯಿತು ಮೆಡಮ್ ಅಂತ ಪ್ರತಿಕ್ರಿಯೆಸಿದೆ. ಮುಂದೆ ಈ ಬಗೆಗೆ ಅಂದರೆ ಇವರು ಹೇಳಿದಂತೆ ಜಾನಪದ ದೇವತೆಗಳ ಬಗೆಗೆ ಅದರಲ್ಲೂ ‘ಉತ್ತರ ಕರ್ನಾಟಕ’ದ ದೇವತೆಗಳ ಬಗೆಗೆ ಬರೆಯುತ್ತೇನೆ.

ಆಗ ಈ ನಾಲ್ಕು ಸಾಲು ಬರಹ ಕಮಲಾ ಹೆಮ್ಮಿಗೆಯವರ ಬಗೆಗೆ ನೆನಪಾದವು. ಹಾಗೆಯೇ ಗೀಚಿದೆ…

Contact Your\'s Advertisement; 9902492681

ಕಮಲಾ ಹೆಮ್ಮಿಗೆ ಇವರು 1952ರ ನವಂಬರ 20 ರಂದು ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ ಹುಟ್ಟಿದವರು. 1973 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ “ಕನ್ನಡ :ಜಾನಪದ”ವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿಯನ್ನು ಪಡೆದ ಕಮಲಾ ಹೆಮ್ಮಿಗೆಯವರು “. ‘ಸವದತ್ತಿ ಎಲ್ಲಮ್ಮ ಹಾಗು ದೇವದಾಸಿ ಪದ್ಧತಿ”ಯ ಮೇಲೆ ಮಹಾಪ್ರಬಂಧ ರಚಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆವದರು. ಇದಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೋಮಾ ಸಹ ಪಡೆದಿದ್ದಾರೆ ಕಮಲಾ ಹೆಮ್ಮಿಗೆಯವರು. ಇವರು ರಚಿಸಿದ ಸಾಹಿತ್ಯ ಸರ್ವ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿವೆ.

ಅನೇಕಾನೇಕ ಪ್ರಶಸ್ತಿ ಪುರಸ್ಕಾರ ಸಂದಿವೆ. 19991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೆ.ಎಸ್.ಎನ್. ಪ್ರಶಸ್ತಿ ದೊರೆತಿವೆ. 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 2004-2005 ನೆಯ ವರ್ಷದ ಕರ್ನಾಟಕ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ದೊರೆತಿದೆ. ಇದಲ್ಲದೆ ಸಾಹಿತ್ಯಕ್ಕಾಗಿ ಮುದ್ದಣ ಕಾವ್ಯ ಪ್ರಶಸ್ತಿ, ಗೊರೂರು, ರತ್ನಮ್ಮ ಹೆಗ್ಗಡೆ, ಅತ್ತಿಮಬ್ಬೆ ಪ್ರತಿಷ್ಠಾನ, ಚೆನ್ನಶ್ರೀ, ರುಕ್ಮಿಣಿಬಾಯಿ ಪ್ರಶಸ್ತಿ ಹಾಗೂ ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿಗಳು ಲಭಿಸಿವೆ.

ಅಲ್ಲದೇ ಇವರು ಕೆಲ ಕೃತಿಗಳನ್ನು ಸಂಪಾದಿಸಿದ್ದಾರೆ. ಡಾ.ಕಮಲಾ ಹೆಮ್ಮಿಗೆಯವರು ಬೆಂಗಳೂರು, ಧರ್ಮಸ್ಥಳ, ಹುಬ್ಬಳ್ಳಿ,ಬೀದರಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ. ನ್ಯಾಶನಲ್ ಬುಕ್ ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಮುಕ್ತ ಪತ್ರಕರ್ತೆಯಾಗಿಯೂ ಕೆಲಸ ಮಾಡಿದ್ದಾರೆ… ಇವರು ಅಧ್ಯಾಕೊ ಧಿಡೀರೆಂದು ನೆನಪಾದರು. ಹಾಗಾಗಿಯೇ ಧಿಡೀರೆಂದು ಕಿರು ಬರಹ ಬರೆದೆನು.

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here