ಎಮ್.ಎಸ್.ಐ.ಎಲ್ ಮಧ್ಯದ ಅಂಗಡಿ ಸ್ಥಾಪನೆ ವಿರೋಧಿಸಿ ಡಿಸಿಗೆ ಮನವಿ

0
20

ಕಲಬುರಗಿ: ಇಲ್ಲಿನ ಗ್ರಾಮೀಣ ಭಾಗದ ಕುಸನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕುಸನೂರ ಗ್ರಾಮದ ಪಂಚಾಯತ ಹತ್ತಿರ ಎಮ್.ಎಸ್.ಐ.ಎಲ್ ಮಧ್ಯದ ಅಂಗಡಿ ಸ್ಥಾಪನೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ಜಿಲ್ಲಾದಿಕಾರಿಗಳಿಗೆ ಮನವಿ ಮಾಡಿರುವ ಅವರು, ಕುಸನೂರ ಗ್ರಾಮದಲ್ಲಿ ಎಮ್.ಎಸ್.ಐ.ಎಲ್. ಮಧ್ಯದ ಅಂಗಡಿ ತರೆದಿದ್ದು ಇದು ಕಾನೂನು ಬಾಹಿರವಾಗಿದೆ.

Contact Your\'s Advertisement; 9902492681

ಏಕೆಂದರೆ ಸದರಿ ಎಮ್.ಎಸ್.ಐ.ಎಲ್.(ವೈನಶಾಪ್ ಅಂಗಡಿ) ವಾಣಿಜ್ಯ ಕಟ್ಟಡ ಪ್ರದೇಶದಲ್ಲಿ ಸ್ಥಾಪಿಸಬಹುದು, ಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಗ್ರಾಮ ಪಂಚಾಯತ ಹತ್ತಿರ ಈ ರೀತಿ ಮಧ್ಯದ ಅಂಗಡಿ ತೆರೆದಿರುವುದರಿಂದ ಸಾರ್ವಜನಿಕರಿಗೆ ತುಂಬಾ ಹಾನಿಯಾಗುತ್ತಿದೆ. ಹಾಗೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಆರೋಪಿಸಿದರು.

ಯುವಕರು, ಹಾಗೂ ಮಕ್ಕಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಉಂಟಗುವ ಸಂಭವವಿರುತ್ತದೆ. ಇಲ್ಲಿಂದಲೇ ಮಕ್ಕಳು ತಮ್ಮ ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಎಮ್.ಎಸ್.ಐ.ಎಲ್. ಸ್ಥಾಪಿಸಿರುವುದು ತುಂಬಾ ಅನ್ಯಾಯವಾಗಿದೆ ಎಂದು ಅವರು ಹೇಳಿದರು. ಸದರಿ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಎಮ್.ಎಸ್.ಐ.ಎಲ್. ಮಧ್ಯದ ಅಂಗಡಿ ಸ್ಥಾಪಿಸಿರುವುದನ್ನು ಕೂಡಲೇ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ತಕ್ಷಣ ಆದೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ, ಶರಣು ಹೊಸಮನಿ,ಅಶ್ವಿನ್ ರಂಗದಾಳ, ರವಿ ಬೆಲ್ಲದ, ಗೋಪಾಲ ರೆಡ್ಡಿ , ನಾಗು, ದೀಪಕ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here