ಅನಧಿಕೃತವಾಗಿ ಕುಡಿಯುವ ನೀರಿನ ಘಟಕಗಳ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ

0
166

ಶಹಾಬಾದ :ನಗರದಲ್ಲಿ ಅನಧಿಕೃತವಾಗಿ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಗರದ ಅಫ್ರೋಜ್ ಇಂಡಸ್ಟ್ರೀಜ್ ಮಾಲೀಕ ಶೇಖಬಾಬು ಉಸ್ಮಾನ ಬೆಂಗಳೂರು ಆಹಾರ ಸುರಕ್ಷಾ ಆಯುಕ್ತರಿಗೆ ಈ ಕುರಿತು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಬಿಐಎಸ್‌ನಿಂದ ಅನುಮತಿ ಪಡೆಯದೆ ಸುಮಾರು ೯ ಕ್ಕೂ ಹೆಚ್ಚು ಅನಧಿಕೃತ ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಬಿಐಎಸ್‌ನಿಂದ ಅನುಮತಿ ಪಡೆಯದೆ ೯ಕ್ಕೂ ಹೆಚ್ಚು ಅನಧಿಕೃತ ಘಟಕಗಳ ಕೆಲವು ಐಎಸ್‌ಐ ಹೆಸರಿನಿಂದ ಜನರಿಗೆ ಸುಳ್ಳು ಹೇಳಿ ನೀರು ಭರ್ತಿ ಮಾಡಲಾಗುತ್ತಿದೆ. ಇಂಥ ಘಟಕಗಳನ್ನು ಶೀಘ್ರ ತಡೆಯಲು ಅಧಿಕಾರಿಗಳು ಮುಂದಾಗುತ್ತಿಲ್ಲ.ಅಲ್ಲದೇ ಕೆಇಬಿ ಅವರು ಅನಧಿಕೃತ ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದಾರೆ.

Contact Your\'s Advertisement; 9902492681

ಅನಧಿಕೃತ ಘಟಕದವರು ಐಎಸ್‌ಐ ಪ್ರಮಾಣ ಪತ್ರ ಇಲ್ಲದೆ ಮಾರಾಟ ಮಾಡುವುದಾಗಲಿ, ಪ್ರದರ್ಶನ ಮಾಡುವುದಾಗಲಿ ಅಥವಾ ಸಾಗಣೆ ಮಾಡುವುದು ಕಂಡುಬಂದಲ್ಲಿ ಅಂಥವರಿಗೆ ಶಿಕ್ಷೆ ವಿಧಿಸಬೇಕು. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಇಂಥ ಜಾಲ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ.

ಕುಡಿಯುವ ನೀರಿನ ಘಟಕಕ್ಕೆ ಲಕ್ಷಾಂತರ ಖರ್ಚು ಮಾಡಿದ್ದೆವೆ.ಅಲ್ಲದೇ ಸರ್ಕಾರದಿಂದ ಎಲ್ಲಾ ಅನುಮತಿ ಪಡೆದುದಲ್ಲದೇ, ಐಎಸ್‌ಐ ಪ್ರಮಾಣ ಪತ್ರ ಪಡೆದುಕೊಂಡಿದ್ದೆವೆ. ವಾರ್ಷಿಕ ಲಕ್ಷಾಂತರ ಹಣ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದೆವೆ.ಇದರಿಂದ ಸರ್ಕಾರದಿಂದ ಅನುಮತಿ ಪಡೆದವರಿಗೆ ತೊಂದರೆಯಾಗುತ್ತಿದೆ.ಆದ್ದರಿಂದ ಅನಧಿಕೃತವಾಗಿ ಕುಡಿಯುವ ನೀರಿನ ಮಾರಾಟ ಹಾಗೂ ಸಾಗಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here