ಶಹಾಬಾದ : ತಾಲೂಕಿನ ಹೊನಗುಂಟಾ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಗ್ರಾಮಸ್ಥರ ಹಣ ದುರುಪಯೋಗಪಡಿಸಿಕೊಂಡಿದ್ದು, ಅವನನ್ನು ಅಮಾನತು ಮಾಡಿ, ಕೂಡಲೇ ದುರುಪಯೋಗಪಡಿಸಿಕೊಂಡ ಹಣವನ್ನು ವಸೂಲಾತಿ ಮಾಡಿ, ಕ್ರಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಸೋಮವಾರ ಹೊನಗುಂಟಾ ಗ್ರಾಮಸ್ಥರು ಗ್ರಾಪಂ ಪಿಡಿಓ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.
ಹೊನಗುಂಟಾ ಗ್ರಾಪಂ ಬಿಲ್ ಕಲೆಕ್ಟರ್ ಗ್ರಾಮಸ್ಥರ ಹತ್ತಿರ ಆಸ್ತಿ ವರ್ಗಾವಣೆಗೋಸ್ಕರ್ ಸುಮಾರು ಒಬ್ಬರಿಂದ ೫ಸಾವಿರದಿಂದ ೨೦ ಸಾವಿರದವರೆಗೆ ಹಣವನ್ನು ಪಡೆದು, ಅಧಿಕಾರಿಗಳ ಸಹಿಯ ಹಾಗೇ ನಕಲಿ ಸಹಿ ಮಾಡಿ, ಗ್ರಾಪಂಗೆ ಹಣವನ್ನು ಕಟ್ಟದೇ ಮೋಸ ಮಾಡಿದ್ದಾನೆ.ಇದು ಒಬ್ಬರ ಕಥೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜನರ ಹಣವನ್ನು ಪಡೆದುಕೊಂಡು ಮೋಸ ಮಾಡಿರುತ್ತಾನೆ.
ಆದ್ದರಿಂದ ಗ್ರಾಪಂ ಬಿಲ್ ಕಲೆಕ್ಟರ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಮ್ರಮ ತೆಗೆದುಕೊಳ್ಳಬೇಕು.ಅಲ್ಲದೇ ಅವನ್ನನ್ನು ಅಮಾನತು ಮಾಡಿ, ಅವನಿಂದ ದುರುಯೋಗಪಡಿಸಿಕೊಂಡ ಹಣವನ್ನು ವಸೂಲಾತಿ ಮಾಡಬೇಕು.ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೇ ಗ್ರಾಮಸ್ಥರು ಸೇರಿಕೊಂಡು ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶರಣಬಸಪ್ಪ ಹಲಕರ್ಟಿ, ಭಾಗಪ್ಪ ಕೊಡಸಾ, ರಾಯಣ್ಣ ಸುಣಗಾರ,ಮಲ್ಲಮ್ಮ ಭೀಮರಾಯ,ಮಲ್ಲು ಸಾಯಬಣ್ಣ, ರೇವಣಸಿದ್ದ, ದೀಪಣ್ಣ ಶಿವರಾಯ ಕೋಲೆ, ದತ್ತಪ್ಪ, ಚಂದು, ಈಶಪ್ಪ, ಬಾಬಯ ಆಡಿನ್, ದೇವಪ್ಪ, ಪ್ರಕಾಶ, ಶಿವಪ್ಪ, ಸಾಯಬಣ್ಣ ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರು ಪತ್ರಕ್ಕೆ ಸಹಿ ಹಾಕಿದ್ದಾರೆ.