ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ ದೇಶಕ್ಕೆ ಮಾದರಿಯಾಗಬೇಕು: ಎಂ. ಕೆ. ಶ್ರೀಧರ್

0
9

ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯ ನೂತನ ಶಿಕ್ಷಣ ನೀತಿ-೨೦೨೦ ಅನ್ನು ಅನು?ನಗೊಳಿಸಿ, ಇಡೀ ದೇಶದ ವಿವಿಗಳಿಗೆ ಮಾದರಿಯಾಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಹಾಗೂ ಯುಜಿಸಿ ಸದಸ್ಯ ಎಂ. ಕೆ. ಶ್ರೀಧರ್ ಅವರು ತಿಳಿಸಿದರು.

ಮಂಗಳವಾರ ಕಲಬುರಗಿಯ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಗಳ ಜಂಟಿ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಅನು?ನಗೊಳಿಸುವ ಕುರಿತು ಅಕ್ಟೋಬರ್ ೫ ಮತ್ತು ೬ ರಂದು ಎರಡು ದಿನಗಳ ಏರ್ಪಡಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಮಾದರಿ ಪಠ್ಯಕ್ರಮ ರಚಿಸಿ ಅದು ಬೇರೆ ವಿವಿಗಳಿಗೆ ಮಾದರಿಯಾಗಬೇಕು. ಜ್ಞಾನ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ನೀಡುವುದು ನೂತನ ಶಿಕ್ಷಣ ನೀತಿಯ ಪ್ರಮುಖ ಅಂಶವಾಗಿರುವುದರಿಂದ ಅನು?ನಗೊಳಿಸುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸಿ ನಿಲ್ಲಬೇಕಾಗಿದೆ. ಹೀಗಾಗಿ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿ ನೂತನ ಶಿಕ್ಷಣ ನೀತಿಯ ಕುರಿತು ಅರಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕಲಿಕಾ ವಿಧಾನದಲ್ಲಿ ಬದಲಾವಣೆಯಾಗಲಿದ್ದು, ಇದು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ನೂತನ ಶಿಕ್ಷಣ ನೀತಿಯು ಪ್ರಾದೇಶಿಕ ಪ್ರಾಮುಖ್ಯತೆ ಹಾಗೂ ಕೌಶಲ್ಯಕ್ಕನುಗುಣವಾಗಿ ಕಲಿಯುವ ನಿಟ್ಟಿನಲ್ಲಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳನ್ನು ನೀಡಲಿದೆ. ಹೀಗಾಗಿ ನಮ್ಮ ಸಂಸ್ಕೃತಿ ಹಾಗೂ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಸಿಯುಕೆಯಲ್ಲಿ ಸಾಕ? ಮೂಲಸೌಕರ್ಯಗಳು ಲಭ್ಯವಿದ್ದು, ಎಲ್ಲವನ್ನು ಬಳಸಿಕೊಂಡು ನೂತನ ಶಿಕ್ಷಣ ನೀತಿ ಅನು?ನಗೊಳಿಸಲು ಶ್ರಮವಹಿಸಬೇಕು. ನೂತನ ಶಿಕ್ಷಣ ನೀತಿ ಅನು?ನಗೊಳಿಸುವ ಈ ಕಾರ್ಯಾಗಾರ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಬಟ್ಟು ಸತ್ಯನಾರಾಯಣ ಅವರು, ನೂತನ ಶಿಕ್ಷಣ ನೀತಿ ಅನು?ನಗೊಳಿಸುವ ನಿಟ್ಟಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇದು ಶಿಕ್ಷಕರಿಗೆ ಪರೀಕ್ಷೆಯ ಸಮಯವಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಎಲ್ಲರೂ ಕಠಿಣ ಶ್ರಮದಿಂದ ಒಂದು ತಂಡವಾಗಿ ಹೊಸ ಶಿಕ್ಷಣ ನೀತಿ ಅನು?ನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.

ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿ ಹಾಗೂ ಶಿಕ್ಷಕರ ಕೇಂದ್ರೀಕೃತ ನೀತಿಯಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಆತ್ಮವಿಶ್ವಾಸ ಹಾಗೂ ಶಿಕ್ಷಕರಲ್ಲಿ ಹೊಸ ಹುರುಪು ನೀಡಲಿದೆ. ಕಲಿಕಾ ಗುಣಮಟ್ಟದಲ್ಲಿ ಆವಿ?ರಗಳು ಆಗಲಿವೆ. ಹೀಗಾಗಿ ಜ್ಞಾನ ಮತ್ತು ಕೌಶಲ್ಯಾಧರಿತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನು?ನಗೊಳಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಾಗಾರಕ್ಕೆ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ. ಶಿವಪ್ರಸಾದ್ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಗೌರೀಶ ಅವರು ನೂತನ ಶಿಕ್ಷಣ ನೀತಿಯ ಕುರಿತು ಉಪನ್ಯಾಸ ನೀಡುವರು.
ಈ ವೇಳೆ ಸಿಯುಕೆಯ ಕುಲಸಚಿವ ಬಸವರಾಜ ದೋನೂರ್ ಮಾತನಾಡಿದರು. ನೂತನ ಶಿಕ್ಷಣ ನೀತಿ ಕಾರ್ಯಾಗಾರದ ಅಧ್ಯಕ್ಷ ಪ್ರೊ. ಅಳಗ್ವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಪ್ರೊ. ಚನ್ನವೀರ್ ಆರ್. ಎಂ ವಂದಿಸಿದರು. ಸಹಾಯಕ ಪ್ರಾಧ್ಯಾಪಕರು ಅಂಕಿತಾ ಹಾಗೂ ನಿತೀನ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಿಯುಕೆ ವಿವಿಧ ನಿಕಾಯಗಳ ಡೀನ್‌ಗಳು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here