ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿನ ವಿವಿಧ ಸೇವೆಗಳಿಗೆ ಈಗಿರುವ ಮುಂಬಡ್ತಿ ಅವಧಿಯನ್ನು 4 ವರ್ಷಗಳಿಗೆ ಇಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.
ವಿಧಾನಸೌಧಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಯಲ್ಲಿ ಈಗ ವಿವಿಧ ವೃಂದಗಳಲ್ಲಿ ಮುಂಬಡ್ತಿ ಅವಧಿ 8 ವರ್ಷಗಳಿಗೆ ಇದ್ದು, ಸಿಬ್ಬಂದಿಗಳು ಮುಂಬಡ್ತಿ ಪಡೆಯಲು ತುಂಬಾ ದಿನ ಕಾಯಬೇಕಗಿದ್ದು, ಅದನ್ನು 5 ವರ್ಷಗಳಿಗೆ ಇಳಿಸಲಾಗಿತ್ತು. ಈ 5 ವರ್ಷಗಳಿಗೆ ಇರುವ ಅವಧಿಯನ್ನು 4 ವರ್ಷಗಳಿಗೆ ಇಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಪೊಲೀಸ್ ಸಿಬ್ಬಂದಿಯಿಂದ ಹಿಡಿದು ಎಸ್. ಐ ಹಂತದ ವರೆಗೂ ಅನ್ವಯಿಸಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನವರಿಗೆ ನಬಾರ್ಡ್ ಮೂಲಕ ಮರುಹೊಂದಾಣಿಕೆ ಮಾಡುವುದಕ್ಕೆ 1550 ಕೋಟಿ ಮೊತ್ತವನ್ನು ಸರ್ಕಾರದ ವತಿಯಿಂದ ಖಾತ್ರಿಯನ್ನು ನೀಡಲಾಗಿದೆ. ಹಾನ್‍ಗಲ್ ವಿಧಾನಸಭಾ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿರುವುದರಿಂದ ಕೋಡ್ ಆಫ್ ಕಂಡಕ್ಟ್‍ಅನ್ನು ಸಚಿವ ಸಂಪುಟ ಸಭೆಯ ಗಮನಕ್ಕೆ ತರಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಅರ್ಹ ಅಭ್ಯರ್ಥಿಗಳು ಇಲ್ಲದಿರುವುದರಿಂದ ಇಬ್ಬರು ಲೆಕ್ಕಪತ್ರಶಾಖೆಯಲ್ಲಿ ಲೆಕ್ಕಪರಿಶೋಧನಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳ ಸೇವಾ ಅವಧಿಯನ್ನು ಒಂದು ವರ್ಷ ಅವಧಿಗೆ ವಿಸ್ತರಿಸಲಾಗಿದೆ.
ಬೆಂಗಳೂರು ನಗರದಲ್ಲಿ 2020-21 ನೇ ಸಾಲಿನ ಪೋಲೀಸ್ ಆಧುನೀಕರಣ ಯೋಜನೆಯಲ್ಲಿ ಅವಶ್ಯವಿರುವ ಡಿಜಿಟಲ್ ಆಧುನೀಕರನಕ್ಕಾಗಿ ಹಾಗೂ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ 14.65 ಕೋಟಿ ಮಂಜೂರು ಮಾಡಲಾಗಿದೆ. ಇದರಲ್ಲಿ ರೂ 9.00 ಕೋಟಿ ರಾಜ್ಯ ಸರ್ಕಾರದಿಂದ ಹಾಗೂ ಉಳಿದ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು.
ನನಿ ಮತ್ತು ಸಮುದ್ರದ ನೀರು ಅನವಶ್ಯಕವಾಗಿ ಪೋಲಾಗುವುದನ್ನು ತಡೆಯಲು. ಎಲ್ಲಿ ನದಿ ನೀರು ಮತ್ತು ಸಮುದ್ರದ ನೀರು ಒಟ್ಟಾಗಿ ಸೇರುವುದೋ ಅಲ್ಲಿ ಒಂದು ದೊಡ್ಡ ಕೆರೆ ನಿರ್ಮಾಣ ಮಾಡಲು ಸಂಬಂಧಿಸಿದಂತೆ, ಉತ್ತರ ಕನ್ನಡ ಜಿಲ್ಲೆಯ ಕಾರ್ ಲ್ಯಾಂಡ್ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಗೆ ಒಟ್ಟು ರೂ. 1500 ಕೋಟಿ ಆಯವ್ಯಯ ಇಟ್ಟುಕೊಂಡು ಪ್ರಸ್ತುತ ವರ್ಷಕ್ಕೆ ರೂ.300 ಕೋಟಿ ರೂಗಳ ಮಾಸ್ಟರ್ ಪ್ಲಾನ್‍ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಉಡುಪಿ ಜಿಲ್ಲೆ ಖಾನಾಪುರ ತಾಲ್ಲೂಕು ತಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ದ್ವಿಪದ ರೋಡ್ ಮಾಡಲು 15 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿಂಡ್ ಪವರ್ ಉತ್ಪಾದನೆ ಮಾಡುವ ಸಂಬಂಧ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ 32 ಎಕರೆ ಜಮೀನನ್ನು, 30 ವರ್ಷಗಳ ಅವಧಿಗೆ ರೋಹನ್ ಸೋಲಾರ್ ಅವರಿಗೆ ಲೀಸ್‍ಗೆ ಕೊಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಅರವತ್ತು ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ (60 ವರ್ಷ ಮೇಲ್ಪಟ್ಟವರಿಗೆ ಹಾಗೂ 65 ವರ್ಷಗಳು ಮೇಲ್ಪಟ್ಟವರಿಗೆ ಎರಡು ಹಂತಗಳಲ್ಲಿ ಮಾಸಾಶನ ವಿತರಣೆ) ಮಾಸಾಶನವನ್ನು ರೂ. 600 ರಿಂದ ರೂ. 800 ಹಾಗೂ ರೂ. 1000 ದಿಂದ ರೂ. 1200ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದ್ದು, ಇದಕ್ಕೆ ಸುಮಾರು 207 ಕೋಟಿ ರೂ ಹೆಚ್ಚಾಗಿ ವೆಚ್ಚವಾಗುತ್ತದೆ. ಸುಮಾರು 34 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
ವೃತ್ತಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ, ಸರ್ವಿಸ್ ಕಿಟ್ ನೀಡಲು (ಸೋಪು ಪೌಡರ್ ಮತ್ತು ತಲೆಗೆ ಬಳಸುವ ಎಣ್ಣೆ) ಮೈಸೂರು ಸೋಪ್ ಅಂಡ್ ಡಿಟರ್‍ಜಂಟ್ ಅವರು ಪೂರೈಸಲು 24.8 ಕೋಟಿ ಅನುದಾನ ನೀಡಲಾಗಿದೆ.
ಕರ್ನಾಟಕ ವಿಧಾನ ಪರಿಷತ್ ಹಾಗೂ ಸಭೆಯನ್ನು ಪ್ರೊವರ್ಬ್ ಮಾಡುವ ನಿರ್ಧಾರ ಪಡೆಯಲಾಗಿದೆ. ಮಂಡ್ಯ ಶುಗರ್ ಫ್ಯಾಕ್ಟರಿ ಖಾಸಗೀಕರಣಗೊಳಿಸಬೇಕೆ ಅಥವಾ ಸರ್ಕಾರವೆ ನಿರ್ವಹಿಸಬೇಕೆಂಬುದರ ಬಗ್ಗೆ ಮಾಡಬೇಕೆಂಬುದರ ಕುರಿತು ಕ್ಯಾಬಿನೇಟ್ ಸಬ್ ಕಮಿಟಿ ನೇಮಕ ಮಾಡಲಾಗಿದ್ದು, ಕ್ಯಾಬಿನೇಟ್ ಸಬ್ ಕಮಿಟಿ ವರದಿಯನ್ನು ಬೇಗ ನೀಡಲು ತಿಳಿಸಲಾಗಿದೆ ಎಂದು ತಿಳಿಸಿದರು.