ಕಲಬುರಗಿ: ಮಹಾತ್ಮ ಗೌತಮ ಬುದ್ಧ ಕೇವಲ ಏಷ್ಯಾ ಖಂಡದ ಬೆಳಕಲ್ಲ; ಅವರು ಇಡೀ ವಿಶ್ವದ ಬೆಳಕಾಗಿದ್ದು, ಅವರ ತತ್ವ ಹಾಗೂ ಬೋಧನೆಗಳು ಸರ್ವಕಾಲಿಕವಾಗಿವೆ ಎಂದು ಸಿಕ್ಕಿಂ ನ ಪೂಜ್ಯ ಭಂತೆ ಪಂಕಜಜ್ಯೋತಿ ಯವರು ನುಡಿದರು.
ಅವರು, ಕಲಬುರಗಿಯ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರ ಮನೆಯಲ್ಲಿ ಹಮ್ಮಿಕೊಂಡಿದ್ದ ಧಮ್ಮದೀಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಕುಲದ ಅಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭ್ಯುದಯಕ್ಕೆ ಬುದ್ಧನು ನೀಡಿದ ಕೋಡುಗೆ ಅಪಾರ, ಬುದ್ಧನ ಶಾಂತಿ, ಅಹಿಂಸೆ ಮತ್ತು ಕರುಣೆ ನಮಗೆ ಸದಾ ಪ್ರೇರಣೆಯಾಗಿವೆ.ಅವರ ಪಂಚಶೀಲತತ್ವ ಮತ್ತು ಅಷ್ಟಾಂಗ ಮಾರ್ಗಗಳ ಪಾಲನೆಯಿಂದ ಜಗತ್ತಿನ ಉದ್ಧಾರ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬಾರಾಯ ಅಷ್ಠಗಿ, ಪೂಜ್ಯಭಂತೆ ಯವರು ದೂರದ ಸಿಕ್ಕಂ ರಾಜ್ಯದಿಂದ ನಮ್ಮ ಮನೆಗೆ ಬಂದು ಬುದ್ಧನ ಮತ್ತು ಧಮ್ಮದ ಕುರಿತು ಆಶೀರ್ವಚನ ನೀಡಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮಂಚೆ ಜಗತ ವೃತ್ತದಲ್ಲಿರುವ ಬಾಬಾ ಸಾಹೇಬ ಡಾ.ಬಿ ಆರ್ ಅಂಬೇಡ್ಕರ ರವರ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ನೇಪಾಳದ ಬೌದ್ಧ ಅನುಯಾಯಿ ಭೀಮಕುಮರ್, ಸುಖೇಂದ್ರ ತಾವಡೆ, ರಾಜು ಸಂಕಾ, ಶರಣಬಸಪ್ಪ ವಾಲಿ, ವಿಜಯಕುಮಾರ ಲೆಂಗಟಿ,ಪ್ರಕಾಶ ಅಷ್ಠಗಿ , ಪುರುಷೋತ್ತಮ ಗುಡೂರ್, ರಾಜೇಶ ಹಾಗರಗಿ, ಕಲಬುರಗಿ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಸುಜಾತಾ ಅಂಬಾರಾಯ ಅಷ್ಠಗಿ, ಯಶವಂತರಾಯ್ ಅಷ್ಠಗಿ, ಶಿವ ಅಷ್ಠಗಿ, ವನೀತಾ ವಾಯ್ ಅಷ್ಠಗಿ, ಸುನೀಲ ಕೋಟ್ರೆ, ರಂಜೀತಾ ಎ. ನೂಲಕರ್, ಪ್ರಿಯಾಂಕಾ ಅಷ್ಠಗಿ, ಅಶುತೋಶ, ಅನಿರುದ್ಧ, ಅನುಷ್ಕಾ, ಆರಾಧ್ಯಾ, ಆರುಷ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.