ಸುರಪುರ: ನಾವು ಜೀವಂತವಾಗಿರುವವರೆಗೂ ಪಿತೃ ಋಣ ತೀರಿಸಬೇಕಾದರೆ ಕಾಲ ಕಾಲಕ್ಕೆ ಶ್ರಾದ್ಧ ಪಕ್ಷಗಳನ್ನು ತಪ್ಪದೇ ಮಾಡಬೇಕು ಶೃತಿ,ಸ್ಮೃತಿ ಹಾಗೂ ಪುರಣಾಗಳಲ್ಲಿ ತಿಳಿಸಿರುವಂತೆ ಶ್ರಾದ್ಧ-ಪಕ್ಷಗಳಂತಹ ವಿಧಿಗಳನ್ನು ತಪ್ಪದೇ ನೆರವೇರಿಸಬೇಕು ಇದರಿಂದ ವಂಶದ ಶ್ರೇಯೋಭಿವೃದ್ಧಿಗೊಳ್ಳುವುದು ಎಂದು ಪುರೋಹಿತರಾದ ಭೀಮಶೇನಾಚಾರ್ಯ ಜೋಷಿ ಮಂಗಳೂರು ಹೇಳಿದರು.
ಬುಧುವಾರದಂದು ತಾಲೂಕಿನ ಶೆಳ್ಳಗಿ ಗ್ರಾಮದ ಮಂಟಪದ ಕೃಷ್ಣಾ ನದಿ ತೀರದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸಂಘದ ವತಿಯಿಂದ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಏರ್ಪಡಿಸಿದ್ದ ಉಚಿತ ಸಾಮೂಹಿಕ ಪಿತೃ ಪಕ್ಷ ಆಚರಣೆ ಕಾರ್ಯಕ್ರಮದ ಪೌರೋಹಿತ್ಯ ಕೈಗೊಂಡು ಅವರು ಮಾತನಾಡಿ ಪ್ರತಿಯೊಬ್ಬ ಮನುಷ್ಯನು ತನ್ನ ಜನನದಿಂದಲೇ ಪಡೆದುಕೊಂಡು ಬಂದಿರುವ ಮೂರು ಋಣಗಳಾದ ದೇವ ಋಣ,ಋಷಿ ಋಣ ಹಾಗೂ ಪಿತೃ ಋಣಗಳಿಂದ ಮುಕ್ತನಾಗಲು ಶ್ರಾದ್ಧಾಚರಣೆಯು ಮುಖ್ಯ ಸಾಧನವಾಗಿದೆ ಎಂದು ಹೇಳಿದ ಅವರು,ಪಿತೃ ಋಣ ತೀರಿಸದೇ ದೇವ ಋಣ ಹಾಗೂ ಋಷಿ ಋಣಗಳು ತೀರುವದಿಲ್ಲ ಎಂದು ಹೇಳಿದ ಅವರು,ಭಾದ್ರಪದ ಮಾಸದ ಪಾಡ್ಯಮಿ ಯಿಂದ ಅಮಾವಾಸ್ಯೆವರೆಗೆ ೧೫ದಿನಗಳ ಕಾಲವನ್ನು ಪಿತೃಪಕ್ಷ ಹಾಗೂ ಪಕ್ಷಮಾಸ ಎಂದು ಕರೆಯುತ್ತಾರೆ ಈ ಅವಧಿಯಲ್ಲಿ ಶ್ರಾದ್ಧಾಧಿಕಾರಿಗಳು ಶ್ರಾದ್ಧ-ಪಕ್ಷಗಳನ್ನು ಕೈಗೊಂಡಲ್ಲಿ ಅವರಿಗೆ ಪಿತೃಗಳು ಜ್ಞಾನ,ಭಕ್ತಿ ಹಾಗೂ ಸಂಪತ್ತು ಮೊದಲಾದವುಗಳನ್ನು ನೀಡುವ ಮೂಲಕ ಆಶೀರ್ವದಿಸುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿನ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಪ್ರ ಬಾಂಧವರು ತಮ್ಮ ಪಿತೃಗಳಿಗೆ ತಿಲ ತರ್ಪಣ ಹಾಗೂ ಪಿಂಡ ಪ್ರದಾನ ಮಾಡುವ ಮೂಲಕ ಪಕ್ಷ ಕಾರ್ಯ ಕೈಗೊಂಡರು,ಹಿರಿಯರಾದ ಮಲ್ಲಾರಾವ ಸಿಂದಗೇರಿ,ರಾಘವೇಂದ್ರಾಚಾರ್ಯ ಹಳ್ಳದ,ಬಲಭೀಮರಾವ ಕುಲಕರ್ಣಿ,ಶ್ಯಾಮರಾವ ಕುಲಕರ್ಣಿ,ವ್ಯಾಸರಾವ ಕುಲಕರ್ಣಿ,ಮಲ್ಲಾರಾವ ಪಟವಾರಿ, ಶ್ರೀನಿವಾಸ ಸಿಂದಗೇರಿ,ವೆಂಕಟೇಶ ಜೋಷಿ ಕುರಿಹಾಳ,ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ,ಲಕ್ಷ್ಮೀಕಾಂತ ಕುಲಕರ್ಣಿ ಅಮ್ಮಾಪುರ,ವೆಂಕಟೇಶ ಜೋಷಿ ರಾಯನಪಾಳ್ಯ,ರಾಘವೇಂದ್ರಾಚಾರ್ಯ ನಾಗರಾಳ,ಶ್ರೀನಿವಾಸ ದೇವಡಿ,ಪ್ರಕಾಶ ಕುಲಕರ್ಣಿ,ದತ್ತು ಕುಲಕರ್ಣಿ ಸೂಗುರು ಸೇರಿದಂತೆ ಅನೇಕರಿದ್ದರು.