ಸುರಪುರ : ನಾಡಹಬ್ಬ ಉತ್ಸವಕ್ಕೆ ಚಾಲನೆ ಶಾಸಕ ರಾಜುಗೌಡ ಚಾಲನೆ

0
20

ಸುರಪುರ: ತಾಲೂಕು ಕನ್ನಡ ಸಾಹಿತ್ಯ ಸಂಘದ ವತಿಯಿಂದ ಅ೭ ರಿಂದ ೧೪ವರೆಗೆ ಆಚರಿಸಲಾಗುವ ೩೫ನೇ ವರ್ಷದ ನಾಡಹಬ್ಬ ಉತ್ಸವಕ್ಕೆ ಗುರುವಾರದಂದು ನಗರದ ವೇಣುಗೋಪಾಲ ದೇವಸ್ಥಾನ ಆವರಣದಿಂದ ಆರಂಭಗೊಂಡ ನಾಡದೇವಿ ಮೆರವಣಿಗೆಗೆ ಕನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ರಾಜುಗೌಡ ಅವರು ನಾಡದೇವಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ನಂತರ ಕನ್ನಡ ಬಾವುಟ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ವೇಣುಗೋಪಾಲ ದೇವಸ್ಥಾನ ಆವರಣದಿಂದ ಗರುಡಾದ್ರಿ ಕಲಾ ಮಂದಿರದವರಿಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ,ಯುವಕರಿಂದ ಕೋಲು ನೃತ್ಯ,ಕುದುರೆ ಕುಣಿತ ಮುಂತಾದ ಜಾನಪದ ಕಲಾ ತಂಡಗಳಿಂದ ಪ್ರದರ್ಶಿಸಿದ ಕಲೆ ಎಲ್ಲರ ಗಮನಸೆಳೆಯಿತು.

Contact Your\'s Advertisement; 9902492681

ಮೆರವಣಿಗೆಯಲ್ಲಿ ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಅಧ್ಯಕ್ಷ ರಾಜಾ ಮುಕುಂದ ನಾಯಕ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಮುಖಂಡರುಗಳಾದ ರಾಜಾ ಹನುಮಪ್ಪ ನಾಯಕ,ರಾಜಾ ಹರ್ಷವರ್ಧನ ನಾಯಕ,ಜಯಲಲಿತಾ ಪಾಟೀಲ್,ಎಸ್.ಎನ್.ಪಾಟೀಲ,ಮರಲಿಂಗಪ್ಪ ಕರ್ನಾಳ,ದೊಡ್ಡ ದೇಸಾಯಿ, ಶಂಕರ ನಾಯಕ, ಶರಣು ನಾಯಕ, ಭೀಮಣ್ಣ ಬೇವಿನಾಳ,ಶ್ರೀನಿವಾಸ ನಾಯಕ ದರಬಾರಿ,ಶರಣು ಭೈರಿಮಡ್ಡಿ,ಪ್ರಕಾಶ ಅಂಗಡಿ,ಮಂಜುನಾಥ ಜಾಲಹಳ್ಳಿ,ಗೃಹ ರಕ್ಷಕದಳದ ಯಲ್ಲಪ್ಪ ಹುಲಿಕಲ್,ಸೋಮರೆಡ್ಡಿ ಮಂಗಿಹಾಳ,ರಾಜಶೇಖರ ದೇಸಾಯಿ,ಮಹೇಶ ಜಾಗೀರದಾರ್,ಮಹಾದೇವಪ್ಪ ಗುತ್ತೇದಾರ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

ಡೊಳ್ಳು ಬಾರಿಸಿದ ಶಾಸಕ ರಾಜುಗೌಡ : ಮೆರವಣಿಗೆಯಲ್ಲಿ ಭಾಗವಹಿಸಿದ್ದ ಡೊಳ್ಳು ತಂಡದವರ ಜೊತೆಗೆ ಶಾಸಕ ರಾಜುಗೌಡರು ಕೂಡಾ ಕೊರಳಿಗೆ ಡೊಳ್ಳು ಹಾಕಿ ಹೆಜ್ಜೆ ಹಾಕುವ ಮೂಲಕ ಸಾಥ ನೀಡಿದರು ಇವರ ಜೊತೆ ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಅವರು ತಾಳ ಹಾಕಿದರೆ ಉದ್ದಿಮೆದಾರರಾದ ಕಿಶೋರಚಂದ ಜೈನ ಅವರು ಡೊಳ್ಳು ಮತ್ತು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯ ಮಾಡಿದ್ದು ವಿಶೇವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here