ಕಷ್ಟದಲ್ಲಿದ್ದರೂ ಪರವಾಗಿಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಚಂದ್ರಿಕಾ

0
139

ಶಹಾಬಾದ:ಮನೆಯಲ್ಲಿ ಕಷ್ಟವಿದ್ದರೂ ಪರವಾಗಿಲ್ಲ, ಆ ಕಷ್ಟದಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೇ ಕುಟುಂಬದ ಜತೆಗೆ ಸಮಾಜದ ಏಳ್ಗೆಯೂ ಸಾಧ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪರಮೇಶ್ವರ ಹೇಳಿದರು.

ಅವರು ನಗರದ ಚುನ್ನಾಭಟ್ಟಿಯಲ್ಲಿರುವ ಶ್ರೀ ಸದ್ಗುರು ಸಿದ್ಧಾರೂಡ ಮಹಾಸ್ವಾಮಿಗಳ ಮಠದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ನೂತನ ಸದಸ್ಯೆ ನಿಂಗಮ್ಮ ಚೆಂದಪ್ಪ ಕಟ್ಟಿಮನಿ ಅವರಿಗೆ ಮಾದಿಗ ಸಮಾಜದ ವತಿಯಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಬುನಾದಿ.ಆದ್ದರಿಂದ ಗಂಡು- ಹೆಣ್ಣು ಎನ್ನದೇ ಎಲ್ಲರಿಗೂ ಒಳ್ಳೆಯ ಶಿಕ್ಷಣ ನೀಡಿ ಎಂದು ಹೇಳಿದರು.

Contact Your\'s Advertisement; 9902492681

ದಲಿತ-ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿ, ಮಾದಿಗ ಸಮಾಜದ ಯುವಕರು ಸಂಘಟನಾತ್ಮಕವಾಗಿ ಸಮಾಜದ ಎಲ್ಲರನ್ನು ಒಟ್ಟುಗೂಡಿಸುವ ಕೆಲಸ ಮಾಡಬೇಕು. ಸಮಾಜದ ಬೆಳವಣಿಗೆಗೆ ಸಂಘಟನೆ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗಟ್ಟಾಗಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಸಮಾಜದ ಏಳ್ಗೆಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಸಂಯೋಜಕ ಶ್ಯಾಮ ನಾಟೇಕಾರ ಮಾತನಾಡಿ,ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು. ಶೈಕ್ಷಣಿವಾಗಿ ಮೊದಲು ಬಲಾಢ್ಯರಾಗಬೇಕು. ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮವನ್ನು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಉದ್ಘಾಟಿಸಿದರು.

ಪಿಎಸ್‍ಐ ಗಂಗಮ್ಮ.ಎಮ್.ಜಿನಕೇರಿ, ನಗರಸಭೆಯ ಸದಸ್ಯೆ ಪೀರಮ್ಮ.ಬಿ.ಪಗಲಾಪೂರ, ಸುಧಾ ಅನೀಲ ನಿಕ್ಕಮ್, ಬಹುಮುಖಿ ಸಾಹಿತಿ ನಾಗಪ್ಪ ಬೆಳಮಗಿ, ಕೆಂಚಪ್ಪ. ಎಸ್.ಮದರಕಲ್, ತಿಮ್ಮಣ್ಣ.ಜಿ.ಕುಂಬಾರಹಳ್ಳಿ, ಸರಬಣ್ಣಾ ಸನ್ನತಿ, ಶರಣು.ಬಿ.ಪಗಲಾಪೂರ, ಶರಣು ದೊಡ್ಡಮನಿ, ಭೀಮು ಮುಗುಳನಾಗಾವ,ಬಸವರಾಜ ಜವಳಿ,ಪ್ರಮೋದ ಮಲ್ಲಾರ್,ಸೋಮಲಿಂಗಪ್ಪ ಎಳಂಡಗೇರಿ, ಇತರರು ಇದ್ದರು.

ದಲಿತ ಮಾದಿಗ ಸಮನವ್ಯ ಸಮಿತಿ ಅಧ್ಯಕ್ಷ ಶಿವರಾಜ ಕೋರೆ ಅಧ್ಯಕ್ಷತೆ ವಹಿಸಿದ್ದರು. ರವಿ ಬೆಳಮಗಿ ನಿರೂಪಿಸಿದರು,ಯಲ್ಲಾಲಿಂಗ ಹಯ್ಯಾಳಕರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here