ಸುರಪುರ: ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ದೇವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಸಿಕ್ಕಿದ್ದು ಮತ್ತೊಮ್ಮೆ ದೇವಾಪುರ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಪಾರುಪತ್ಯ ಮುಂದುವರೆದಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಬೈಕ್ ಅಪಘಾತದಲ್ಲಿ ಈ ಮೊದಲು ಅಧ್ಯಕ್ಷರಾಗಿದ್ದ ಮಹಿಳೆ ಮೃತಳಾಗಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಅಕ್ಟೋರ್ ೦೮ ರಂದು ನೂತನ ಅಧ್ಯಕ್ಷರ ನೇಮಕ ಚುನಾವಣೆ ದಿನ ನಿಗದಿಪಡಿಸಲಾಗಿತ್ತು.ಅದರಂತೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದರುಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾಣಕ್ಕೆ ಶುಕ್ರವಾರ ಬೆಳಿಗ್ಗೆ ಚುನಾವಣಾ ಪ್ರಕ್ರೀಯೆ ಆರಂಭವಾಗುತ್ತಿದ್ದಂತೆ,ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಯಾಗಿ ಯಲ್ಲಮ್ಮ ಅಮ್ಮಣ್ಣ ಶೆಳ್ಳಗಿ ಹಾಗು ಬಿಜೆಪಿ ಬೆಂಬಲಿತ ಅಭ್ಯಾರ್ಥಿಯಾಗಿ ಶಿಲ್ಪ ರಮೇಶ ಕವಲಿ ತಮ್ಮ ನಾಮಪತ್ರ ಸಲ್ಲಿಸಿದ್ದರು.ಒಟ್ಟು ೨೦ ಸದಸ್ಯ ಬಲದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿ ಯಲ್ಲಮ್ಮ ಅಮ್ಮಣ್ಣ ಶೆಳ್ಳಗಿಯವರಿಗೆ ೧೧ ಮತಗಳು ಬಿದ್ದು ಜಯಗಳಿಸಿದರು,ಬಿಜೆಪಿ ಬೆಂಬಲಿತ ಶಿಲ್ಪಾ ರಮೇಶ ಕವಲಿ ೯ ಮತಗಳು ಪಡೆದು ೨ ಮತಗಳಿಂದ ಪರಾಭವಗೊಂಡರು.ಮದ್ಹ್ಯಾನದ ವೇಳೆಗೆ ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದರು.
ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು.ಜಿದ್ದಾಜಿದ್ದನ ಚುನಾವಣೆಯಾಗಿದ್ದರಿಂದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರು ಗ್ರಾಮದಲ್ಲಿಯೆ ಇದ್ದು ಗಮನಿಸುತ್ತಿದ್ದರು.ನಂತರ ಫಲಿತಾಂಶದ ನಂತರ ನಡೆದ ಸಂಭ್ರಮಾಚರಣೆಯಲ್ಲಿ ಮುಖಂಡರಾದ ರಾಜಾ ರೂಪಕುಮಾರ,ರಾಜಾ ವೇಣುಗೋಪಾಲ ನಾಯಕ,ರಾಜಾ ಸಂತೋಷ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ಮಲ್ಲಣ್ಣ ಸಾಹು ಮುಧೋಳ,ರಾಜಾ ವಿಜಯಕುಮಾರ ನಾಯಕ,ರಾಜಾ ಸುಶಾಂತ ನಾಯಕ,ಮಲ್ಲು ಬಿಲ್ಲವ್,ಚನ್ನಪ್ಪಗೌಡ ಜಕ್ಕನಗವಡರ್,ಮಲ್ಲು ಮುಷ್ಠಳ್ಳಿ,ಬಸನಗೌಡ ಪಾಟೀಲ್,ನಂದನಗೌಡ ಪಾಟೀಲ್,ಬಸ್ಸಣ್ಣ ಬಾಗಲಿ,ದೇವಿಂದ್ರ ಗುತ್ತಿ,ಅಮರೇಶ ಸಾಹುಕಾರ ಅರಳಳ್ಳಿ ಸೇರಿದಂತೆ ಅನೇಕರಿದ್ದರು.
ದಯವಿಟ್ಟು ಬಾಕ್ಸ್ ಮಾಡಿ ಹಾಕಿ: ಅಧ್ಯಕ್ಷ ಸ್ಥಾನಕ್ಕೆ ಮತ ಚಲಾವಣೆಗೆ ಬಂದಿದ್ದ ಸದಸ್ಯೆಯೊಬ್ಬಳು ರಕ್ತದೊತ್ತಡ ಸಮಸ್ಯೆಯಿಂದ ಕುಸಿದು ಬಿದ್ದ ಘಟನೆ ನಡೆಯಿತು.ಮುಷ್ಠಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಚಂದಮ್ಮ ಎನ್ನುವವರು ತಮ್ಮ ಮತ ಚಲಾಯಿಸಿದ ನಂತರ ಕುಸಿದು ಕುಳಿತರು.ಇದರಿಂದ ಕ್ಷಣ ಕಾಲ ಆತಂಕ ಎದುರಾಗಿತ್ತು,ನಂತರ ಅವರಿಗೆ ಚಿಕಿತ್ಸೆ ನೀಡಿದ್ದರಿಂದ ಹುಷಾರಾದರು.ಆದರೆ ನಾನು ಯಾವುದಕ್ಕೆ ಮತ ಹಾಕಿರುವೆ ಗೊತ್ತಿಲ್ಲ ಎಂದಾಗ ಮತ್ತೆ ಮತ ಚಲಾವಣೆಗೆ ಅವಕಾಶ ಕೇಳಿದರು.ಆದರೆ ಅದಕ್ಕೆ ಚುನಾವಣಾಧಿಕಾರಿಗಳು ಅವಕಾಶ ನೀಡಿರಲಿಲ್ಲ,ಇದರಿಂದ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲಿ ಆತಂಕ ಕಂಡುಬಂದಿತ್ತು.ಆದರೆ ಫಲಿತಾಂಶ ಹೊರಬಿದ್ದಾಗ ೧೧ ಮತಗಳು ಬಂದಿದ್ದರಿಂದ ಸರಿಯಾಗಿ ಮತ ಚಲಾಯಿಸಿದ್ದಾಳೆಂದು ಎಲ್ಲರು ನಿರಾಳರಾದರು.