ಮರಣವೇ ಮಹಾನವಮಿ ಆದಾಗ!

0
47

೧೨ನೇ ಶತಮಾನ ಶರಣರಿಂದ ಕಲ್ಯಾಣಕ್ಕೆ ಕಳೆಕಟ್ಟಿದ ಕಾಲ, ಶರಣರು ಮರಣವನ್ನೂ ಕೂಡಾ ಮಹಾನವಮಿಯಾಗಿ ಸ್ವೀಕರಿಸಿದವರು. ಬಸವಣ್ಣನ ನೇತೃತ್ವದ ಅಸಮಾನತೆ ನಿವಾರಣೆಯ ಹೋರಾಟದ ಫಲವಾಗಿ ಶರಣರು ಕಲ್ಯಾಣಕ್ಕೆ ಬಂದದ್ದು ಮತ್ತು ಹೋರಾಟ ಯಶಸ್ವಿಯಾಗಿದ್ದು.

ಆಗ್ರಜನ ಪುತ್ರಿ ಅಂತ್ಯಜನ ಪುತ್ರನ ಕೈ ಹಿಡಿಯುವ ಮೂಲಕ ಸಮಾನತೆಯನ್ನು ಸಾರಿದರು. ಶರಣ ವಿಚಾರ ಮತ್ತು ಆಚಾರವನ್ನು ಆ ಕಾಲಘಟ್ಟದ ಉನ್ನತ ಶ್ರೇಣಿಯವರೆಂಬ ಸಮಾಜ ಅರಗಿಸಿಕೊಳ್ಳದಾಯಿತು. ಆ ಕಾಲಘಟ್ಟದ ಒಂದು ಚಿತ್ರಣವನ್ನೆ ಇಲ್ಲಿ ಬಸವಣ್ಣನವರು ವಚನದ ಮೂಲಕ ನಮಗೆ ತಿಳಿಸುತ್ತಾರೆ.

Contact Your\'s Advertisement; 9902492681

ನಾವು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ,
ನೀವು ಬಂದ ಕಾರ್ಯಕ್ಕೆ ನಾವು ಬಂದೆನಯ್ಯಾ
ನಾವು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ
ಕಲ್ಯಾಣವೆಂಬದು ಪ್ರಣತೆಯಾಯಿತ್ತು.

ನಾನು ತೈಲವಾದೇನು, ನೀವು ಬತ್ತಿಯಾದಿರಿ, ಪ್ರಭುದೇವರು ಜ್ಯೋತಿಯಾದರು. ಪ್ರಣತೆ ಹೊಡೆದಿತ್ತು, ತೈಲಚಲ್ಲಿತ್ತು, ಬತ್ತಿ ಜಾರಿತ್ತಯ್ಯಾ, ಜ್ಯೋತಿ ನಂದಿತ್ತಯ್ಯಾ ನಮ್ಮ ಕೂಡಲ ಸಂಗನ ಶರಣರ ಮನ ನೊಂದಿತ್ತಯ್ಯಾ.

ಈ ವಚನ ನೋಡಿದಾಗ ಕಲ್ಯಾಣದಲ್ಲಿ ಆದ ಕ್ರಾಂತಿ ಆರಂಬ ಮತ್ತು ಅಂತ್ಯದ ಚಿತ್ರಣವನ್ನೆ ಇಲ್ಲಿ ಬಸವಣ್ಣನವರು ನಮಗೆ ಕೊಡುತ್ತಾರೆ. ಒಂದು ವಿಚಾರವು ಹೇಗೆ ಜನಮಾನಸವನ್ನು ಒಗ್ಗೂಡಿಸುತ್ತೆದೆ ಎಂಬುದಕ್ಕೆ ಕಲ್ಯಾಣ ಕ್ರಾಂತಿಯ ಸಂದರ್ಭವೆ ಸಾಕ್ಷಿ. ನಾವು ನೀವು ಬಂದ ಕಾರ್ಯಕ್ಕೆನೆ ಪ್ರಭು ದೇವರು ಬಂದರು. ಆಗ ಕಲ್ಯಾಣವೇ ಪ್ರಣತೆಯಾಗಿ ತಾನು ತೈಲವಾಗಿ, ಇಡೀ ಶರಣ ಸಂಕುಲವೆ ಬತ್ತಿಯಾಗಿ ಪ್ರಭು ದೇವರು ಜ್ಞಾನದ ಜ್ಯೋತಿಯಾದಾಗ ಕಲ್ಯಾಣ ಅಸಮಾನತೆಯನ್ನು ದೂರೀಕರಿಸಿ ಸಮಾನತೆಯನ್ನು ಸಾಧಿಸಿತು.

ಆದರೆ ಈ ವಿಚಾರವನ್ನು ಪುರೋಹಿತಶಾಯಿ ಅರಗಿಸಿಕೊಳ್ಳದ ಕಾರಣಕ್ಕಾಗಿ ಆಡಳಿತದ ಹೊಣೆಹೊತ್ತ ರಾಜಶಾಯಿಯು ಪುರೋಹಿತಶಾಯಿಯ ಕಡೆ ವಾಲಿದ ಪರಿಣಾಮ ಶರಣರಿಗೆ ಎಳೆ ಹೂಟೆ ಶಿಕ್ಷೆ ಯಾಗುತ್ತದೆ, ಬಸವಣ್ಣ ಗಡಿಪಾರು ಆಗುತ್ತಾರೆ, ಪ್ರಭುದೆವರು ಶ್ರೀಶೈಲಕ್ಕೆ ಹೋಗುತ್ತಾರೆ, ಶರಣರೆಲ್ಲಾ ಚಲ್ಲಾಪಿಲ್ಲಿಯಾಗುತ್ತಾರೆ, ಕಲ್ಯಾಣದಲ್ಲಿ ಕತ್ತಲಾಗುತ್ತದೆ. ಅದರ ಪರಿಣಾಮ ನಮ್ಮ ಕೂಡಲ ಸಂಗನ ಶರಣರ ಮನ ನೊಂದಿತು ಅನ್ನುವ ವಿಚಾರವನ್ನು ಬಸವಣ್ಣನವರು ಈ ವಚನದ ಮೂಲಕ ನಮಗೆ ತಿಳಿಸುತ್ತಿದ್ದಾರೆ.

ಮನುಷ್ಯನಿಗೆ ದೈಹಿಕವಾದ ಆಘಾತ ತಡೆದುಕೊಳ್ಳುತ್ತಾನೆ ಆದರೆ ಮಾನಸಿಕವಾದ ಆಘಾತ ಆತನನ್ನು ತಡೆದುಕೊಳ್ಳುವುದು ಬಹಳ ಕಷ್ಟದಾಯಕವಾದದ್ದು. ಅದಕ್ಕೆ ಕಾಲು ಮುರಿದರೆ ಕಟ್ಟ ಬಹುದು ಮನಸ್ಸು ಮುರಿದರೆ ಕಟ್ಟಲು ಸಾಧ್ಯವಾಗದೆಂಬ ಮಾತು ಜನರಾಡುವ ನಾಣ್ಣುಡಿಯು ಸತ್ಯವಾಗಿದೆ.

ಯಾರು ತಮ್ಮ ಇಡೀ ಜೀವವನ್ನೆ ಜನಕಲ್ಯಾಣದ ಚಿಂತನೆಗಾಗಿ ಸವೆಸಿ ತಮ್ಮ ಪ್ರಾಣಾರ್ಪಣೆಮಾಡಿದರೊ ಅವರ ಮನನೊಯಿಸಿದ ದಿನ ಮಹಾನವಮಿದಿನದಂದು. ನಾವು ಆ ಮನನೊಂದ ದಿನವನ್ನು ಸಂಬ್ರಮದ ದಿನವನ್ನಾಗಿ ಆಚರಿಸಬೇಕೊ ಹೇಗೆಯೋ ಅನ್ನುವುದನ್ನು ನಾವು ಆಲೋಚಿಸ ಬೇಕಾಗಿದೆ. ಒಂಬತ್ತು ದಿನ ದೀಪಕ್ಕೆ ಹಾಕಿ, ಸಸಿಯನ್ನು ಸಲುಹಿ ಹತ್ತನೇ ದಿನಕ್ಕೆ ಅದನ್ನು ಕೆರೆಗೊ ಭಾವಿಗೊ ಹಾಕಿಕೊಳೆಯಿಸುವ ವೆವಸ್ಥೆಯನ್ನು ನಾವು ಪರಂಪರೆಯ ಹೆಸರಿನಿಂದ ಮಾಡಿಕೊಳ್ಳುತ್ತ ಬಂದಿದ್ದೇವೆ.

ನಮಗೆ ನಮಗಾಗಿ ತಮ್ಮ ಪ್ರಾಣ ಜ್ಯೋತಿಯನ್ನು ಕಳೆದು ಕೊಂಡವರನ್ನು ನೆನಪನ್ನು ನೆನೆಯುವುದರ ಮೂಲಕವಾದರೂ ಅವರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸ ಬೇಕಲ್ಲವೇ. ಲಿಂಗವಂತರೆಂಬ ನಾವು ಶರಣರನ್ನು ನೆನೆಯುವಕಾರ್ಯ ಮಾಡಬೆಕಲ್ಲವೆ? ಇಲ್ಲದಿದ್ದರೆ ನಾವೇಗೆ ಅವರ ವಾರಾಸುದಾರರಾಗಲು ಸಾಧ್ಯ ಆಲೋಚಿಸಿ ಶರಣ ಬಂಧುಗಳೆ ಶರಣಾರ್ಥಿಗಳು.

ಶಿವಣ್ಣ ಇಜೇರಿ ಶಹಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here