ಶೋಷಿಯಲ್ ಮೀಡಿಯಾ ಬಳಕೆದಾರರಿಗೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

0
236

ಕಲಬುರಗಿ: ಜಿಲ್ಲಾದ್ಯಾಂತ ಎಲ್ಲಾ ಫೇಸಬುಕ್, ವಾಟ್ಸಪ್, ಟ್ವೀಟರ್ ಮತ್ತು ಸೋಷಿಯಲ್ಮಿಡಿಯಾ ನ್ಯೂಜ್ ಚಾನೆಲ್ ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಕಮೆಂಟ್  ಮಾಡುವದು, ಅವಹೇಳನಕಾರಿ, ಅಶ್ಲೀಲಕರವಾಗಿ ಕಮೆಂಟ್ ಮಾಡುವದು ಮತ್ತು ಬೇರೊಬ್ಬರ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ಕಮೆಂಟ್ ಮಾಡುವುದು ಕಂಡುಬಂದರೆ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಸ್ಪಿ ಯಡಾ ಮಾರ್ಟಿನ್  ಮಾರ್ಬನ್ಯಾಂಗ್​ ಎಚ್ಚರಿಕೆ ನೀಡಿದರು.

ಅವರು ಇಲ್ಲಿನ ಪೊಲೀಸ್ ಭವನದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಜನರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಸೋಷಿಯಲ್ಮಿಡಿಯಾಗಳಲ್ಲಿ ಅವಹೇಳನಕಾರಿ, ಅಶ್ಲೀಲಕರವಾಗಿ ಕಮೆಂಟ್ ಮಾಡುವದು ಮತ್ತು ಬೇರೊಬ್ಬರ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ಕಮೆಂಟ್ ಮಾಡುತ್ತಿರುವದು ಕಂಡು ಬಂದಿರುತ್ತದೆ.

Contact Your\'s Advertisement; 9902492681

ಇದನ್ನೇ ಇದೇ ರೀತಿಯಲ್ಲಿ ಮುಂದುವರೆಸಿ ಸೋಷಿಯಲ್ಮಿಡಿಯಾ ಬಳಸುವ ಫೇಸಬುಕ್, ವಾಟ್ಸಪ್, ಟ್ವೀಟರ್ ಮತ್ತು ಸೋಷಿಯಲ್ಮಿಡಿಯಾ ನ್ಯೂಜ್ ಚಾನೆಲ್ ನಿರ್ವಾಹಣುದಾರರಿಗೆ ಹಾಗೂ ಇವುಗಳನ್ನು ನಿಯಂತ್ರಿಸುವ ಗ್ರೂಪಿನ ಅಡ್ಮೀನ್ ಗಳಿಗೆ ಮತ್ತು ಸೋಷಿಯಲ್ಮಿಡಿಯಾದಲ್ಲಿ ಗ್ರೂಪಗಳನ್ನು ರಚಿಸಿದ ಅಡ್ಮಿನ್, ಫೇಸಬುಕ್ ಪೇಜ್ ಗಳಲ್ಲಿ ಮತ್ತು ಅವುಗಳ ಗ್ರೂಪ್ ಗಳಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದಲ್ಲಿ ಸಂಬಂದಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ತಿಳಿಸಿದರು.

ಸೋಷಿಯಲ್ಮಿಡಿಯಾವನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳುವುದಾಗಿ ಅವರು ಈ ಸಂದರ್ಭದಲ್ಲಿ ವಿನಂತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here