ಮೂಲನಿವಾಸಿ ಅಂಬೇಡ್ಕರ್ ಸೇನೆ ಚಂದ್ಲಾಪುರ ಗ್ರಾಮ ಶಾಖೆ ಉದ್ಘಾಟನೆ

0
12

ಸುರಪುರ: ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಸೋಮವಾರ ಮೂಲನಿವಾಸಿ ಅಂಬೇಡ್ಕರ್ ಸೇನೆ ಸಂಘಟನೆಯ ಗ್ರಾಮ ಶಾಖೆಯನ್ನು ಉದ್ಘಾಟಿಸಲಾಯಿತು.

ಸೂಗುರು ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ನಾಮಫಲಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಸಂಘಟನಾ ಸಾಂಚಾಲಕ ರಾಹುಲ್ ಹುಲಿಮನಿ ಧ್ವಜಾರೋಹಣ ನೆರವೇರಿಸುವ ಮೂಲಕ ಗ್ರಾಮ ಶಾಖೆ ಉದ್ಘಾಟಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಹುಲಿಮನಿ,ದೇಶದಲ್ಲಿನ ಮೂಲನಿವಾಸಿ ದಲಿತ ಸಮುದಾಯದ ಜನಕ್ಕೆ ಅನೇಕ ಸಮಸ್ಯೆಗಳು ಕಾಡುತ್ತಿವೆ.ಅಲ್ಲದೆ ಸರಕಾರಗಳು ದಲಿತರನ್ನು ಕಡೆಗಣಿಸುತ್ತಿವೆ ಜೊತೆಗೆ ನಿತ್ಯವು ದಲಿತರ ಮೇಲೆ ಕೋಲೆ ಅತ್ಯಾಚಾರ ಅನ್ಯಾಯ ನಡೆಯುತ್ತಿದೆ.ಇದೆಲ್ಲವನ್ನು ನಿರ್ಮೂಲನೆಗೊಳಿಸಲು ಎಲ್ಲರು ನಾವು ಸಂಘಟಿತರಾಗುವುದು ಮುಖ್ಯವಾಗಿದೆ.ಆದ್ದರಿಂದ ತಾವೆಲ್ಲರು ಇಂದು ಗ್ರಾಮ ಶಾಖೆಯನ್ನು ಮಾಡಿಕೊಳ್ಳುವ ಮೂಲಕ ಸಂಘಟನೆಗೆ ಶಕ್ತಿ ತುಂಬುವ ಜೊತೆಗೆ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಹೋರಾಟವನ್ನು ರೂಪಿಸಿಕೊಳ್ಳುವ ಮೂಲಕ ಗ್ರಾಮದ ಅಭೀವೃಧ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಶಾಖೆಯ ಸಂಚಾಲಕರನ್ನಾಗಿ ಶರಣು ಹೊಸ್ಮನಿಯವರನ್ನು ನೇಮಕಗೊಳಿಸಲಾಯಿತು.ಅಲ್ಲದೆ ಇತರೆ ೧೩ ಜನರನ್ನು ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ರಾಜು ಬಡಿಗೇರ,ಜಿಲ್ಲಾ ಸಂಘಟನಾ ಸಂಚಾಲಕ ಸಿದ್ದರಾಮ,ಹನುಮಂತ ರತ್ತಾಳ,ಶರಣು ಕೃಷ್ಣಾಪುರ,ಶಿವನ ಸಾಸಗೇರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here