ರೈತರಿಗೆ ಶೇಂಗಾ ಬೀಜ ವಿತರಣೆಗೆ ಆಗ್ರಹಿಸಿ ಜಯಕರ್ನಾಟಕ ಪ್ರತಿಭಟನೆ

0
6

ಸುರಪುರ: ತಾಲೂಕಿನ ರೈತರಿಗೆ ಶೇಂಗಾ ಬೀಜ ಮತ್ತು ಸ್ಪಿಂಕ್ಲರ್ ಪೈಪ್‌ಗಳನ್ನು ವಿತರಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯಿಂದ ನಗರದ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ ಮಾತನಾಡಿ,ತಾಲೂಕಿನಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಆರಂಭಗೊಂಡಿದ್ದು ರೈತರಿಗೆ ಸರಿಯಾದ ಶೇಂಗಾ ಬೀಜ ಸಿಗದೆ ಪರದಾಡುವಂತಾಗಿದೆ,ಅಲ್ಲದೆ ಅನೇಕ ರೈತರು ದುಬಾರಿ ಬೆಲೆ ನೀಡಿ ಖಾಸಗಿಯವರ ಬಳಿ ಶೇಂಗಾ ಬೀಜ ಖರಿದಿಸುವ ಪರಸ್ಥಿತಿ ನಿರ್ಮಾಣವಾಗಿದೆ,ಇದರಿಂದ ರೈತರು ತೀವ್ರ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೇ ರೈತರಿಗೆ ಶೇಂಗಾ ಬೀಜಗಳನ್ನು ವಿತರಿಸುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ತಾಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಬಾಡಗೇರಾ ಮಾತನಾಡಿ,ರೈತರಿಗೆ ಉತ್ತಮವಾದ ಶೇಂಗಾ ಬೀಜಗಳಾದ ಕದ್ರಿ ಲೆಪಾಕ್ಷಿ ೧೮-೧೨ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ,ಅಲ್ಲದೆ ರೈತರಿಗೆ ಸ್ಪಿಂಕ್ಲರ್ ಪೈಪ್‌ಗಳು ವಿತರಣೆ ಮಾಡದಿರುವುದರಿಂದ ರೈತರು ನೀರಾವರಿಗೆ ತೊಂದರೆಯಾಗಿದೆ.ಆದ್ದರಿಂದ ಕೂಡಲೇ ಶೇಂಗಾ ಬೀಜ ಮತ್ತು ಸ್ಪಿಂಕ್ಲರ್ ಪೈಪ್‌ಗಳನ್ನು ವಿತರಿಸಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಕೃಷಿ ಸಹಾಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮಡ್ಡಿ,ಕಾರ್ಯಾಧ್ಯಕ್ಷ ಮಲ್ಲು ಶಿಬಾರಬಂಡಿ,ಗೋಪಾಲ ನಾಯಕ ಸತ್ಯಂಪೇಟೆ,ಬಸವರಾಜ ಪಾಟೀಲ್,ನಬಿಸಾ,ಶಿವರಾಜ ವಗ್ಗರ ದಿವಳಗುಡ್ಡ,ದೇವು ನಾಯಕ,ರವಿಕಿರಣ ಸಿದ್ದಾಪುರ,ಖಾಜಾ ಕಡಾಂಡಿ,ವೆಂಕಟೇಶ ಬಿಚಗತ್ತಿ,ರಂಗನಾಥ ಶಿಬಾರಬಂಡಿ,ಅರ್ಜುನ್ ಯಕ್ಷಿಂತಿ,ಅಯ್ಯಣ್ಣ ಏವೂರ್,ಮೌನೇಶ ಶಿಬಾರಬಂಡಿ,ಚಂದಪ್ಪ ಶಿಬಾರಬಂಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here