ಕಲಬುರಗಿಯಲ್ಲಿ ಭೂಕಂಪ: ವಿಪತ್ತು ನಿರ್ವಹಣೆ ತಜ್ಞರ ಕಳಿಸುವಂತೆ ಸಿಎಂಗೆ ಮನವಿ

0
288

ಕಲಬುರಗಿ: ಚಿಂಚೋಳಿ, ಕಾಳಗಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ಜನರು ಭೂಕಂಪದಿಂದ ಭಯಭೀತರಾಗಿದ್ದು ಕೂಡಲೇ ವಿಪತ್ತು ನಿರ್ವಹಣೆ ತಜ್ಞರನ್ನು ಪ್ರದೇಶಗಳಿಗೆ ಕಳುಹಿಸಿ ಶಾಶ್ವತವಾದ ಪರಿಹಾರ ಒದಗಿಸುವಂತೆ ಸಂಸದ ಡಾ. ಉಮೇಶ್ ಜಾಧವ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಸಿಎಂಗೆ ಮನವಿ ಮಾಡಿದರು.

ಇಂದು ಬೆಂಗಳೂರಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಲಬುರಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರ ನೇತೃತ್ವದಲ್ಲಿ ಭೇಟಿಯಾಗಿ ಭೂಕಂಪ ಪೀಡಿತ ಪ್ರದೇಶಗಳ ಗ್ರಾಮಸ್ಥರಿಗೆ ತಾತ್ಕಾಲಿಕ ಶೆಡ್ ಗಳ್ಳನ್ನು ನಿರ್ಮಿಸುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೆ ಎಂ ಬಾರಿ, ಸದ್ದಾಂ ವಜೀರಗಾಂವ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here