ಮಹಿಳಾ ದೌರ್ಜನ್ಯ ತಡೆ ಕಾಯ್ದೆ: ಜಾಗೃತಿ ಜಾಥಾ

0
31

ಶಹಾಬಾದ: ಪುರು? ಪ್ರಧಾನ ಸಮಾಜದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮಹಿಳೆಯರ ಮೇಲೆ ನಿರಂತರವಾದ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಮಕ್ಕಳ ಸಾಗಣೆ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಮಹಿಳಾ ದೌರ್ಜನ್ಯ ಕಾಯಿದೆ ಜಾರಿ ಮಾಡಲಾಗಿದೆ ಮಾರ್ಗದರ್ಶಿ ಸಂಸ್ಥೆಯ ಯಲ್ಲುಬಾಯಿ.ಎಸ್.ಮರತೂರ ತಿಳಿಸಿದರು.

ಅವರು ಮಂಗಳವಾರ ಮರತೂರ ಗ್ರಾಮದಲ್ಲಿ ದೀ ಹಂಗರ್ ಪ್ರೊಜೆಕ್ಟ್ ಮಾರ್ಗದರ್ಶಿ ಸಂಸ್ಥೆ ಕಲಬುರಗಿ ಮತ್ತು ಮಹಿಳಾ ಜಾಗೃತ ವೇದಿಕೆ ಆಯೋಜಿಸಲಾದ ದೌರ್ಜನ್ಯ ಮುಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಣೆಗೆ ಮಹಿಳೆಯರೇ ಸಹಾಯ ಮಾಡುತ್ತಿರುವುದು ವಿ?ದನೀಯ. ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ದೂರದ ಊರುಗಳಿಗೆ ಕರದು ಕೊಂಡುಹೋಗಿ ವೇಶ್ಯಾವಾಟಿಕೆಗೆ ಮಾರಾಟ ಮಾಡುವುದು ಕಂಡುಬರುತಿದ್ದು, ಇಂತಹ ನಯವಂಚಕರ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ದೌರ್ಜನ್ಯದಿಂದ ಸಂಕ?ಗಳಿಗೆ ಸಿಲುಕಿರುವ ಅಸಹಾಯಕ ಮಹಿಳೆಯರು ಸಾಂತ್ವನ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದ ಅವರು, ಈ ವಿ?ಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮಹಿಳಾ ಸಹಾಯವಾಣಿಯ ದೂರವಾಣಿ ಸಂಖ್ಯೆ ೧೦೯೧ ಕ್ಕೆ ಕರಮಾಡಿ ಸಲಹೆ ಹಾಗೂ ನೆರವು ಪಡೆಯಬಹುದು. ಅಥವಾ ನೇರವಾಗಿ ಯಾವುದೇ ತಾಲೂಕಿನ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಅಥವಾ ಸಮೀಪದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಮರತೂರ ಗ್ರಾಪಂ ಸದಸ್ಯೆ ಶಕುಂತಲಾ ತಮ್ಮಣ್ಣ, ಮರತೂರ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪ್ರಭಾವತಿ ಮರತೂರ,ಆಶಾ ಕಾರ್ಯಕರ್ತೆ ಶೋಭಾ, ಬಾಲ್ಯ ವಿವಾಹ ತಡೆ ನಾಯಲಕಿಯರಾದ ಸುಜಾತ ಮತ್ತು ಸುಮಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here