ಆಳಂದ: ವಾಂತಿ ಭೇದಿ ಹರಡಿದ ಪ್ರಕರಣಕ್ಕೆ ಸಂಬಂಧಿತ ಮಹಿಳೆಯೋರ್ವಳು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಬೋಳಣಿ ಗ್ರಾಮಕ್ಕೆ ಸೋಮವಾರ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ, ಆರೋಗ್ಯಾಧಿಕಾರಿ ಶುಶಿಲಕುಮಾರ ಅಂಬರೆ, ಕಡಗಂಚಿ ವೈದ್ಯಾಧಿಕಾರಿ ರಮೇಶ ಪಾಟೀಲ, ಹಳ್ಳಿಸಲಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪೂಜಾರಿ ತಂಡವು ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದರು.
ತಾತ್ಕಾಲಿಕವಾಗಿ ಕುಡಿಯವ ನೀರಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಕುಡಿಯುವ ನೀರಿನ ಶುದ್ಧ ಘಟಕ ತೆರೆಯಲು ಸೀಫಾರಸ್‍ಗೆ ತಹಸೀಲ್ದಾರರು ಅಧಿಕಾರಿಗಳಿಗೆ ಸೂಚಿಸಿರು.
ಮೃತ ಮಹಿಳೆಯ ಮಲ್ಲಮ್ಮ ಮಹಾಂತಪ್ಪ ಪೂಜಾರಿ ಕುಟುಂಬಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಾಂತ್ವಾನ ಹೇಳಿದರು, ಅಲ್ಲದೆ ಸರ್ಕಾರದ ಸಹಾಯಧನ ಒದಗಿಸಲಾಗುವುದು ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಡಲಹಂಗರಗಾ ಬೋಳಣಿ ಸಮೀಪದಲಿನ ನೀರು ಪೂರೈಕೆಯ ಕೊಳವೆ ಬಾವಿಯ ಹತ್ತಿರ ಇರುವ ಕೊಳವೆ ಬಾವಿಗೆ ಕಲುಷಿತ ನೀರು ಸೇರಿವೆ ಎಂದಾಗ ಸರಿಪಡಿಸುವಂತೆ ಗ್ರಾಪಂ ಅಧಿಕಾರಿಗಳು ಸೂಚಿಸಲಾಗಿದೆ ಎಂದರು.
ಬಳಿಕ ಆರೋಗ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ರೋಗಿಗಳಿಗೆ ನಿರ್ಲಕ್ಷ್ಯಿಸದೆ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸಲಹೆ ನೀಡಿದರು.
ಯಾವುದೇ ರೀತಿಯ ರೋಗಿಗಳಿಗೆ ಸ್ಪಂದಿಸದೆ ವಿನಹ ಕಾರಣ ಹೇಳಿ ಕಳುಹಿಸಿಕೊಡಬೇಡಿ. ಹೆಚ್ಚು ರೋಗಿಗಳು ಬಂದರ ಶಾಲೆ ಕೋಣೆಗಳನ್ನು ಬಳಿಸಿ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಚಂದ್ರಮೌಳಿ ಅವರಿಗೆ ಇನ್ನೊಂದು ಕೊಳವೆ ಬಾವಿ ತೋಡಿ ನೀರು ಪೂರೈಕೆ ಮಾಡಬೇಕು ಎಂದು ನಾಗಮೂರ್ತಿ ಶೀಲವಂತ ಅವರು ಸೂಚನೆ ನೀಡದರು.
ಮಳೆಗಾಲದಲ್ಲಿ ನೀರು ಕಲಬರಕೆ ಆಗುವ ಸಾದ್ಯತೆ ಇದ್ದು, ಗ್ರಾಮಸ್ಥರು ನೀರು ಕಾಯಿಸಿ ಆರಿಸಿ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಶ್ರೀಶೈಲ ಬಿರಾದಾರ, ಗ್ರಾಮದ ಗುರುಬಸಪ್ಪ ಭೂತೆ, ಜಗನಥ ಉಜಳಂಬೆ, ಮಲ್ಲಿಕಾರ್ಜುನ ಬೋಳಣಿ ಮತ್ತಿತರು ಉಪಸ್ಥಿತರಿದ್ದು, ಗ್ರಾಮಕ್ಕೆ ಹೊಸ ಕೊಳವೆ ಬಾವಿ ತೋಡಬೇಕು ಹಾಗೂ ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪಿಸಬೇಕು ಮತ್ತು ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿತ ಸಾರ್ವಜನಿಕರಿಗೆ ಸೂಕ್ತ ಚಿಕ್ಸಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಅಧಿಕಾರಿಗಳು ಸ್ಪಂದಿಸುವ ಭರವಸೆ ನೀಡಿದರು. ಸೋಮವಾರ ಹೊಸದಾಗಿ ವಾಂತಿ ಭೇದಿ ಪ್ರಕರಣ ಸಂಭವಿಸಿದ ಬಗ್ಗೆ ವರದಿಗಳಾಗಿಲ್ಲ.