ಜನಪರ ಹೋರಾಟಗಾರ ಕಾಮ್ರೇಡ್ ಮಾರುತಿ ಮಾನ್ಪಡೆ

0
74
  • ಡಾ. ಶಿವರಂಜನ್ ಸತ್ಯಂಪೇಟೆ

ಹಿರಿಯ ಕಮ್ಯುನಿಸ್ಟ್ ನಾಯಕ, ಹೋರಾಟಗಾರ, ಕಾಮ್ರೇಡ್ ಮಾರುತಿ ಮಾನ್ಪಡೆ (65) ಅವರು ನಿಧನರಾಗಿ ಒಂದು ವರ್ಷ ತುಂಬುತ್ತ ಬಂತು. ನೋಡಲಿಕ್ಕೆ ಗಟ್ಟಿ ಮುಟ್ಟಾಗಿದ್ದ ಮಾನ್ಪಡೆ ಕೊರೊನಾ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಅವರ ಸಾವಿನ ಸುದ್ದಿ ಕೇಳಿ ಕೊರೊನಾದ ರೌದ್ರಾವತಾರ ಎಂಥದು ಎಂದು ತಿಳಿದು ನಿಜಕ್ಕೂ ದಿಗಿಲಾಯಿತು.

ಮೂರು ನಾಲ್ಕು ದಶಕಗಳಿಂದ ರಾಜ್ಯದ ಯಾವ ಮೂಲೆಯಲ್ಲಿಯೇ ಅನ್ಯಾಯ, ಅತ್ಯಾಚಾರ, ಮೋಸ ನಡೆದಿದ್ದರೂ ಇವುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾರುತಿ ಮಾನ್ಪಡೆ ಕಲ್ಯಾಣ ಕರ್ನಾಟಕದ ಹೋರಾಟದ ಗಟ್ಟಿ ಧ್ವನಿಯಾಗಿದ್ದರು. ರೈತ, ಕೃಷಿ, ಕೂಲಿ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳುತ್ತಿದ್ದ ಇವರು ಒಬ್ಬ ಜನಪರ ಹೋರಾಟಗಾರರಾಗಿದ್ದರು.

Contact Your\'s Advertisement; 9902492681

ಈ ಕಾರಣಕ್ಕಾಗಿ ಆಡಳಿತಪಕ್ಷಗಳ ಅವಕೃಪೆಗೆ ಒಳಗಾಗಿದ್ದರು ಮಾತ್ರವಲ್ಲ ಪೆÇಲೀಸರ ಲಾಠಿ ರುಚಿ ಕೂಡ ಅನೇಕ ಬಾರಿ ಉಂಡಿದ್ದರು. 2021, ಫೆಬ್ರುವರಿ ತಿಂಗಳಲ್ಲಿ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಕೃಷಿಗೋಷ್ಠಿಯಲ್ಲಿ ಸರ್ಕಾರ ಹಾಗೂ ಸಾಹಿತಿಗಳ ಇಬ್ಬಂಗಿತನ, ಭಟ್ಟಂಗಿತನವನ್ನು ಯಾವ ಮುಲಾಜಿಲ್ಲದೆ ಖಂಡಿಸಿದ್ದರು. ಈ ಕಾರಣದಿಂದಾಗಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು.

ತೊಗರಿ, ಕಬ್ಬು, ಭತ್ತ, ಹೆಸರು- ಹೀಗೆ ಯಾವ ಬೆಳೆಗಾರರ ಸಮಸ್ಯೆಯೇ ಇರಲಿ, ಗ್ರಾಪಂ ನೌಕರರು, ದಿನಗೂಲಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹೀಗೆ ಯಾರದೇ ಸಂಕಷ್ಟವೇ ಇರಲಿ- ಅವರ ಪರ ಹೋರಾಟಕ್ಕೆ ಮುಂದಾಗುತ್ತಿದ್ದರು.

ಪತ್ರಕರ್ತರು ಕೇಳುತ್ತಿದ್ದ ಅಂಕಿ-ಅಂಶ, ಮಾಹಿತಿ ಅವರ ಬೆರಳ ತುದಿಯಲ್ಲಿ ಇರುತ್ತಿತ್ತು. ಕೃಷಿಗೆ ಸಂಬಂಧಿಸಿದ ವರದಿ, ಆಯೋಗ, ನೀತಿ…ಹೀಗೆ ಏನೇ ಕೇಳಿದರೂ ಕ್ಷಣಾರ್ಧದಲ್ಲಿಯೇ ಉತ್ತರ ನೀಡುತ್ತಿದ್ದ ಅವರು, ಬಸವಣ್ಣ ಹಾಗೂ ಅವರ ಹೋರಾಟದ ಬಗ್ಗೆ ನಿಶ್ಚಿತ ಮಾರ್ಗ ಕಂಡುಕೊಂಡಿದ್ದರು.

ಹೀಗೆ ಜನಪರ, ಜೀವಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು ತಾವು ನಂಬಿದ ತತ್ವ, ಸಿದ್ಧಾಂತಕ್ಕೆ ಸದಾ ಅಂಟಿಕೊಂಡಿರುತ್ತಿದ್ದರು. ಆ ತತ್ವ, ಸಿದ್ಧಾಂತಗಳಿಗೆ ಸ್ವಲ್ಪ ಕುಂದುಂಟಾದರೂ ಸಾಕು, ಕೆಂಡಾಮಂಡಲಾವಾಗುತ್ತಿದ್ದರು. ಅವರು ಎಷ್ಟೇ ದೊಡ್ಡವರಿರಲಿ, ಅವರು ಯಾರೇ ಆಗಿರಲಿ ಅವರ ವಿರುದ್ಧ ಸೆಟೆದು ನಿಲ್ಲುತ್ತಿದ್ದರು. ಅವರ ಮಕ್ಕಳಾದ ಸುನಿಲ್ ಹಾಗೂ ರಾಕೇಶ ಅವರು ಸಹ ಹೋರಾಟದ ಹಾದಿಯಲ್ಲಿ ಮುಂದುವರಿಯುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here