ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಮಹಾತ್ಮ ಗೌತಮ್ ಬುದ್ದರ ಕಂಚಿನ ಮೂರ್ತಿಯನ್ನು ಪೂಜ್ಯ ವರಜ್ಯೋತಿ ಬಂತೆಜಿಯವರ ಸಾನಿದ್ಯದಲ್ಲಿ ಪ್ರತಿಷ್ಟಾಪಿಸಿದ ನಂತರ ಪ್ರಥಮ ಹುಣ್ಣಿಮೆ ದಿನದಂದು ನಾಡಿನ ಶಾಂತಿಗಾಗಿ ಬುಧವರಾ ಬೌದ್ಧ ಧಮ್ಮ ಪಠಣ ಕಾರ್ಯಾಕ್ರಮ ನಡೆಸಲಾಯಿತು.
ಬೌದ್ಧ ಅನುಯಾಯಿಗಳು ಮತ್ತು ಬಾಬಾಸಾಹೇಬ್ ಅಂಬೇಡ್ಕರ್‌ಅವರ ಅನುಯಾಯಿಗಳು, ಬೌದ್ಧ ಉಪಾಸಕರು, ಹಾಗೂ ಉಪಾಸಿಕಾರವರು ಮಕ್ಕಳೋಂದಿಗೆ ಬಾಗವಹಿಸಿ ಗೌತಮ್ ಬುದ್ದರ ಮೂರ್ತಿಗೆ ಪುಷ್ಫಾರ್ಚಣೆ ಮಾಡಿ ಮೇಣದ ಬತ್ತಿ ಹಚ್ಚಿ ಆಚರಿಸಿದರು. ಈ ಸಂದರ್ಭದಲ್ಲಿ ಉಪಾಸಕ ಮೂರ್ತಿ ಬೋಮ್ಮನಹಳ್ಳಿಯವರು ತ್ರೀಸರಣ ಪಂಚಶೀಲ ಪಠಿಸಿದರು ಅಲ್ಲದೆ ಬೌದ್ಧ ಧರ್ಮದ ಹಿನ್ನೆಲೆಯನ್ನು ತಿಳಿಸಿಕೊಟ್ಟರು.
ನಂತರ ಮುಖಂಡ ರಾಹುಲ್ ಹುಲಿಮನಿ ಮಾತನಾಡಿ, ಪ್ರತಿ ಹುಣ್ಣಿಮೆ ದಿನದಂದು ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಬೌದ್ಧ ಮಹಿಳಾ ಉಪಾಸಿಕಾರವರ ನೇತೃತ್ವದಲ್ಲಿ ಕಾರ್ಯಾಕ್ರಮವನ್ನು ಆಯೋಜಸೋಣ ಮತ್ತು ಪೋಲಿಸ್ ಇಲಾಖೆ ಕೂಡಲೇ ಬುದ್ದ ಮೂರ್ತಿಯನ್ನು ದ್ವಂಸಮಾಡಿದ ಆರೋಪಿಗಳನ್ನು ಬಂಧಿಸಲಿ ಮತ್ತು ಬುದ್ದ ವಿಹಾರಕ್ಕೆ ಸೂಕ್ತ ರಕ್ಷಣೆ ನೀಡಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ , ಮಾಳಪ್ಪ ಕಿರದಳ್ಳಿ, ವೆಂಕಟೇಶ ಸುರಪುರಕರ್,ಗುರುಪಾದಪ್ಪ ಹುಲಿಮನಿ ವಕೀಲರು, ಮರೆಪ್ಪ ತೇಲ್ಕರ್, ಶಿವರಾಜಕುಮಾರ್ ಪಾಣೇಗಾವ್,ಶಂಕರ್ ಹೊಸಮನಿ, ರಾಜು ಶಖಾಪೂರ್, ಪರಶು ನಾಟೇಕಾರ್,ಶರಣು ಹಸನಾಪುರ್, ಶ್ರೀಮಂತ ಚಲವಾದಿ, ಮಲ್ಲು ಮುಷ್ಠಳ್ಳಿ, ಸಾಯಬಣ್ಣ ದೇವಿಕೇರಿ, ಸಿದ್ರಾಮ್ ಹಾಲಬಾವಿ, ರಾಯಪ್ಪ ಕಟ್ಟಿಮನಿ, ಸತಿಶ್ ಯಡಿಯಾಪೂರ್, ಹಣಮಂತ ರತ್ತಾಳ, ಹಣಮಂತ ತೆಲ್ಕರ್,ಭೀಮಂಬಾಯಿ ಕಲ್ಲದೆವನಹಳ್ಳಿ, ಬಸಮ್ಮ ಹುಲಿಮನಿ,ಯಲ್ಲಪ್ಪ ರತ್ತಾಳ ಸೇರಿದಂತೆ ಅನೇಕ ಮಕ್ಕಳು ಭಾಗವಹಿಸಿದ್ದರು.