ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ವ್ಯಕ್ತಿ ಸಾವು

0
143

ಕಲಬುರಗಿ: ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಹತ್ತಿರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ತನ್ನ ಪತ್ನಿಯನ್ನು ನೋಡಲು ಗುರುವಾರ ಸುಂಬಡಕ್ಕೆ ಬರುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ(32) ವರ್ಷ ಮಲ್ಲಿಕಾರ್ಜುನ ಈರಣ್ಣ ಬಿಜಾಪುರ ಮೃತಪಟ್ಟಿದ್ದಾನೆ.

Contact Your\'s Advertisement; 9902492681

ಮದುವೆ ಆಗಿ 10 ತಿಂಗಳು ಆಗಿತ್ತು. ಶುಕ್ರವಾರ ಮುಂಜಾನೆ ಸ್ಥಳೀಯರು ಈ ರಸ್ತೆ ಅಪಘಾತ ಗಮನಿಸಿ ಪೊಲೀಸ್ ರಿಗೆ ಮಾಹಿತಿ ತಿಳಿಸಿದ್ದಾರೆ.
ಯಡ್ರಾಮಿ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ ಘಟನಾ ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here