ಶಹಾಬಾದ: ಗ್ರಾಮ ಪಂಚಾಯತಿ ಹೊನಗುಂಟಾದಲ್ಲಿ ೨೦೨೧-೨೨ನೇ ಸಾಲಿನ ೧೫ ನೇ ಹಣಕಾಸಿನ ಕ್ರೀಯಾಯೋಜನೆ ಕಾಮಗಾರಿಗಳನ್ನು ಪರಿಷ್ಕರಿಸಿ ವಿವಿಧ ಕಾಮಗಾರಿಗಳನ್ನು ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ವಿವಿಧ ಕಾಂಗಾರಿಗಳನ್ನು ಕೈಗೊಳ್ಳಲು ಮನವಿ ಸಲ್ಲಿಸಲಾಗಿತ್ತು.ಆದರೂ ಕಾಮಗಾರಿ ಕೈಗೊಂಡಿಲ್ಲ. ಆದ್ದರಿಂದ ೧೫ ನೇ ಹಣಕಾಸಿನ ಕ್ರೀಯಾಯೋಜನೆ ಕಾಮಗಾರಿಗಳನ್ನು ಪರಿಷ್ಕರಿಸಿ, ಡಾ.ಬಿ.ಆರ್.ಅಂಬೇಡ್ಕರ್ ಕಟ್ಟೆ ಕಾಂಗಾರಿ ಆಯುದುಕೊಳ್ಳಬೇಕು. ಗ್ರಾಮದ ಎಸ್‌ಸಿ, ಎಸ್‌ಟಿ, ಓಬಿಸಿ ಹಾಗೂ ಸಮಾನ್ಯ ಬಡಕುಟುಂಬದ ೫೦ ವಿದ್ಯಾರ್ಥಿಗಳಿಗೆ ಪುಸ್ತ ಖರೀದಿಗೋಸ್ಕರ ಪ್ರೋತ್ಸಾಹ ಧನ ನೀಡಬೇಕು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿ ಕಾಮಗಾರಿ ಆಯ್ದುಕೊಳ್ಳಬೇಕು. ಭೀಮ ನಗರ ಬಡಾವಣೆಯಲ್ಲಿ ನೀರಿನ ಶುದ್ಧಿಕರಣ ಘಟಕ ಸ್ಥಾಪನೆ ಮಾಡಲು ಕಾಮಗಾರಿ ಕೈಗೊಳ್ಳಬೇಕು.ಪ್ರತಿಶತ ೫%ರಲ್ಲಿ ಅಂಗವಿಕಲರ ಸಭಾ ಭವನ ಕಾಮಗಾರಿ ಕೈಗೊಳ್ಳಬೇಕು.ಅಲ್ಲದೇ ಎಲ್ಲಾ ವಾರ್ಡಗಳಲ್ಲಿ ವಾರ್ಡ ಸಭೆ ನಡೆಸಬೇಕು.ಗ್ರಾಮದ ಎಲ್ಲಾ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಯಾಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಶರಣಬಸಪ್ಪ.ಎಮ್, ದಸಂಸ ಗ್ರಾಮ ಸಂಚಾಲಕ ರಾಘವೇಂದ್ರ ಗುಡೂರ ಸೇರಿದಂತೆ ಇತರರು ಹಾಜರಿದ್ದರು.