ಸರ್ವರಿಗೂ ನ್ಯಾಯ ;ಕಾನೂನು ರಕ್ಷಣೆ ನಮ್ಮೆಲ್ಲರ ಹೊಣೆ:ಎಂ.ಆಯ್ ಸೂಗೂರ

0
41

ಜೇವರ್ಗಿ: ಕಾನೂನು ಪ್ರಾಧಿಕಾರ ಲೋಕ ಅದಾಲತ್ ಮೂಲಕ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಲು ಸಾಮಾನ್ಯ ಜನರಿಗೆ ವರದಾನವಾಗಿದೆ .” ಸರ್ವರಿಗೂ ನ್ಯಾಯವನ್ನು ಒದಗಿಸುವುದು ಹಾಗೂ ಕಾನೂನಿನ ರಕ್ಷಣೆ ನೀಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ “ಎಂದು ಹಿರಿಯ ವಕೀಲರಾದ ಎಂ ಐ ಸುಗೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇಲ್ಲಿನ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾನೂನು ಸಾಕ್ಷರತಾ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನ್ಯಾಯವಾದಿಗಳು ಸಂಘ ಜೇವರ್ಗಿ ಆಶ್ರಯದಲ್ಲಿ ಹಮ್ಮಿಕೊಂಡ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆ ಕುರಿತು ವಕೀಲರಾದ ಭಾಷಾ ಪಟೇಲ್ ಯಾಳವಾರ್ ಮಾತನಾಡಿದರು. ಜನನ-ಮರಣಗಳ ನೊಂದಣಿಯ ಮಹತ್ವ ಹಾಗೂ ಕಾನೂನುಗಳ ಕುರಿತು ವಕೀಲರಾದ ರಾಜು ಮುದ್ದಡಗಿ ಉಪನ್ಯಾಸ ನೀಡಿದರು.

ಲೋಕ ಅದಾಲತ್ ಉಚಿತ ಕಾನೂನು ನೆರವು ,ಮಹತ್ವ ಹಾಗೂ ನಿರ್ಣಯಗಳ ಕುರಿತು ವಕೀಲರಾದ ರಾಮನಾಥ ಬಂಡಾರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಶಾಲೆಯ ಪ್ರಾಚಾರ್ಯರಾದ ರಮೇಶ್ ನಂದೂರ್ ವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಅನಿಲ್ ಕುಮಾರ್ ನಿರ್ವಹಿಸಿದರು ,ಹಾಗೂ ಸ್ವಾಗತವನ್ನು ನಾರಾಯಣ್ ಶಿಕ್ಷಕರು ಕೋರಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಮಲ್ಲಿಕಾರ್ಜುನ್ ಶಿಕ್ಷಕರು ನೆರವೇರಿಸಿದರು. ಜೇವರ್ಗಿ ನ್ಯಾಯಾಲಯದ ಸಿಬ್ಬಂದಿಗಳು ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕ ಸಮಿತಿ ಸದಸ್ಯರು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here