270ನೇ ಮಾಸಿಕ ಶರಣ ಸಂಗಮ

0
14

ಭಾಲ್ಕಿ: ಶರಣರು ಬೋಧಿಸಿದ ಅರ್ಚನೆ, ಅರ್ಪಣೆ, ಅನುಭಾವ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವರ ಬದುಕು ಸುಂದರ ಮತ್ತು ಸಾರ್ಥಕಗೊಳ್ಳುತ್ತದೆ. ಸ್ವರವಚನಗಳು ರಚಸಿದ ಸರ್ಪಭೂಷಣ ಶಿವಯೋಗಿಗಳು ಪ್ರಾಣಲಿಂಗ ಪೂಜೆಯ ಕುರಿತು “ಲಿಂಗಪೂಜೆಯ ಮಾಡಿರೊ ನಿಮ್ಮೊಳು ಪ್ರಾಣಲಿಂಗ ಪೂಜೆಯ ಮಾಡಿರೊ” ಎಂದು ಪ್ರಾಣಲಿಂಗ ಪೂಜೆಯ ಮಹತ್ವ ಕುರಿತು ತಿಳಿಸಿದ್ದಾರೆ.

ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ ಕ್ರಮವಾಗಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಗೆ ಸದ್ಗುರು ಹಸ್ತಮಸ್ತಕ ಸಂಯೋಗ ದೃಷ್ಟಿಯೋಗ ಮತ್ತು ಸಂಕಲ್ಪಗಳ ಮೂಲಕ ಸಂಬಂಧಿಸುವನು. ದುಷ್ಟಗುಣಗಳು ಬಿಟ್ಟು ಸದ್ಗುಣಗಳನ್ನು ಹೊಂದಲು ಪ್ರಾಣಲಿಂಗ ಪೂಜೆ ನೆರವಾಗುತ್ತದೆ.

Contact Your\'s Advertisement; 9902492681

ವರಭಕ್ತಿ ಜಲವ ನೀಡಿ ಮಜ್ಜನಗೈದು ವಿರತಿ ಗಂಧವನೇ ತೀಡಿ ಹರುಷವೆಂಬ ಧೂಪ, ಶುದ್ಧ ಕರಣೇಂದ್ರಿಯಗಳೆ ಅಕ್ಷತೆ, ಅರಿವೆಂಬ ಪುಷ್ಪ, ಚಿನ್ಮಯ ಪ್ರಕಾಶವೆಂಬ ದೀಪ ಪರಿಪೂರ್ಣತ್ವವೇ ನೈವೇದ್ಯ ಮೆರವ ತ್ರಿಗುಣಗಳಾದ ಸತ್ವ-ರಜ-ತಮ ಎಂಬ ವರತಾಂಬೂಲ ಅರ್ಪಿಸಿದ ಸಾಧಕ ತನ್ನ ಕರದಿಷ್ಟ ಲಿಂಗದಲ್ಲಿ ಪರವಸ್ತು ಕಾಣುತ್ತಾನೆ. ಆತನ ಸ್ಥಿತಿ ಬೆಂದನುಲಿಯಂತೆ ಒಳಹೊರಗೆ ಒಂದಾಗುತ್ತದೆ. ಹಾಗೆ ಎಲ್ಲಾ ಸದ್ಭಕ್ತರು ಪ್ರಾಣಲಿಂಗ ಪೂಜೆ ಮಹತ್ವ ತಿಳಿದು ಆ ನಿಟ್ಟಿನಲ್ಲಿ ಸಾಧನೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಏರ್ಪಡಿಸಿದ 270ನೇ ಮಾಸಿಕ ಶರಣ ಸಂಗಮದ ದಿವ್ಯಸನ್ನಿಧಾನವಹಿಸಿ ಆಶೀರ್ವಚನಗೈದರು. ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಪೂಜ್ಯ ಮಹಾಲಿಮಗ ಮಹಾಸ್ವಾಮಿಗಳು, ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಇದ್ದರು.

ಆರಂಭದಲ್ಲಿ ರಾಜು ಜುಬರೆ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ವೀರಣ್ಣ ಕುಂಬಾರ ವಚನ ಗಾಯನ ಮಾಡಿದರು. ದೀಪಕ ಥಮಕೆ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here