-
ಕೆ.ಶಿವು.ಲಕ್ಕಣ್ಣವರ
ಹಾನಗಲ್ ವಿಧಾನಸಭಾ ಕ್ಷೇತ್ರ ಹಾವೇರಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕಣವಾಗಿದೆ ಈಗ.
ಅರೆಮಲೆನಾಡು ಪ್ರದೇಶವಾಗಿದ್ದರೂ, ಬಿಸಿಲು ಮಾತ್ರ ತಪ್ಪಿದ್ದಲ್ಲ. ಸ್ಥಳೀಯ ಕಮಲ ಅಭ್ಯರ್ಥಿಗೆ ಅನ್ಯ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಾಗಿ ಸೆಣಸಾಟಕ್ಕೆ ಸಿದ್ಧರಾಗಿದ್ದಾರೆ ಈಗ. ಪ್ರಚಾರ ಭರಾಟೆಯಲ್ಲಿ ನರೇಂದ್ರ ಮೋದಿ ಮತ್ತು ರಾಗಾ ಹವಾ ಬದಲು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸೇ ಕುತೂಹಲ ಕೆರಳಿಸಿದೆ.
# ಹಾನಗಲ್ಲ ವಿಧಾನಸಭಾ ಕ್ಷೇತ್ರ: ಹಾವೇರಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕಣವಾದ, ಅರೆಮಲೆನಾಡು ಪ್ರದೇಶವಾಗಿದ್ದರೂ, ಬಿಸಿಲು ಮಾತ್ರ ತಪ್ಪಿಲ್ಲ. ಸ್ಥಳೀಯ ಕಮಲ ಅಭ್ಯರ್ಥಿಗೆ ಅನ್ಯ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಾಗಿ ಸೆಣಸಾಟಕ್ಕೆ ಸಿದ್ಧರಾಗಿದ್ದಾರೆ. ಪ್ರಚಾರ ಭರಾಟೆಯಲ್ಲಿ ಮೋದಿ ಮತ್ತು ರಾಗಾ ಹವಾ ಬದಲು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಕುತೂಹಲ ಕೆರಳಿಸಿದೆ ಎಂದು ಮತ್ತೊಮ್ಮೆ ಹೇಳುತ್ತೇನೆ.
ಪಕ್ಷೇತರ ಅಭ್ಯರ್ಥಿಯಾಗಿ 1983 ರಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿರುವ ಮಾಜಿ ಸಚಿವ ಸಿ.ಎಂ.ಉದಾಸಿ ಕಮಲ ಪಕ್ಷದ ಅತ್ಯಂತ ಹಿರಿಯ ಮುತ್ಸದ್ದಿಯಾಗಿದ್ದರು. ಈ ವರೆಗೆ 5 ಬಾರಿ ಗೆದ್ದು, 3 ಬಾರಿ ಸೋಲು ಕಂಡು, ಇದೀಗ 9 ನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದರಿನೋ, ಆದರೆ ಅವರು ಈಗ ತೀರಿದ್ದಾರೆ. ಹಾಗೆಯೇ ತೆರುವಾದ ಅವರ ಸ್ಥಾನಕ್ಕೆ ಪೈಪೋಟಿ ನಡೆದಿದೆ ಇದೀಗ.
ಸಾಂಪ್ರದಾಯಿಕ ಎದುರಾಳಿಯಾಗಬೇಕಿದ್ದ ಶಾಸಕ ಮನೋಹರ ತಹಶೀಲ್ದಾರಗೆ ಟಿಕೆಟ್ ಕೈ ತಪ್ಪಿದ ಕಾರಣ ಶ್ರೀನಿವಾಸ ಮಾನೆಯವರನ್ನೇ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿಸಿದ್ದಾರೆ ಕ್ಷೇತ್ರದ ಜನರು.
ಅಟಿಕಾ ಗೋಲ್ಡ್ ಮೂಲಕ ಮನೆ ಮಾತಾಗಿರುವ ಪಿ.ಎಸ್. ಅಯೂಬ್ (ಬೊಮ್ನಳ್ಳಿ ಬಾಬು) ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
# ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ವಿಶೇಷವಾಗಿದೆ ಈಗ. ಅಲ್ಪಸಂಖ್ಯಾತರ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದರೂ, ಈವರೆಗೂ ಯಾರೂ ಶಾಸಕರಾಗಿಲ್ಲ ಎನ್ನುವುದೇ ಅಚ್ಚರಿಗೆ ಕಾರಣವಾಗಿದೆ. ಬಣಜಿಗ, ಸಾದರ ಮತ್ತು ನೊಣಬ ಲಿಂಗಾಯತರ ಪಾರಮ್ಯ ಹೆಚ್ಚಾಗಿದೆ. ಮರಾಠಾ, ಗಂಗಾಮತ ಸೇರಿ ಬ್ರಾಹ್ಮಣರ ಜೊತೆಗೆ ಹಿಂದುಳಿದ ವರ್ಗಗಳ ಮತಗಳ ಸಂಖ್ಯೆ ಪರಿಗಣಿಸಲ್ಪಡುತ್ತವೆ.
# ರಾಜಕೀಯ ಇತಿಹಾಸ: 1978 ರಿಂದ 2013 ರ ವರೆಗೆ ಬಣಜಿಗ ಸಮಾಜದ ಸಿ.ಎಂ.ಉದಾಸಿ ಮತ್ತು ಬಲಿಜ ಸಮಾಜದ ಮನೋಹರ ತಹಶೀಲ್ದಾರ ಈ ಇಬ್ಬರೂ ಹಿರಿಯ ನಾಯಕರನ್ನು ಹೊರತುಪಡಿಸಿ ಮತ್ತಾರಿಗೂ ಕ್ಷೇತ್ರದ ಮತದಾರರು ಮಣೆ ಹಾಕಿರಲಿಲ್ಲ ಈ ಹಿಂದೆ. ಈಗ ಎರಡನೇ ಬಾರಿಗೆ ಅನ್ಯ ಜಿಲ್ಲೆಗಳ ನವ ಯುವಕರು ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಮುಖ ಬೇಕೆನ್ನುವ ಬೇಡಿಕೆಗೆ ಹೈಕಮಾಂಡ್ ಅನ್ಯ ಜಿಲ್ಲೆಯ ಅಂದರೆ ಧಾರವಾಡ ಜಿಲ್ಲೆಯ ಶ್ರೀನಿವಾಸ ಮಾನೆ ಅವರಿಗೆ ಅಸ್ತು ಎಂದು ಅವಕಾಶ ಕೊಟ್ಟಿದೆ. ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವ ಜೊತೆಗೆ ಇಲ್ಲಿಯ ಅಹಿಂದ ಮತಗಳನ್ನು ಸೆಳೆಯುವ ತಂತ್ರಗಾರಿಕೆ ಉದ್ದೇಶದಿಂದ ಜೆಡಿಎಸ್ ಬೊಮ್ನಳ್ಳಿ ಬಾಬು ಅವರಿಗೆ ಟಿಕೆಟ್ ನೀಡಿದೆ.
# ಕೈ-ಕಮಲ ಜಟಾಪಟಿಯೂ..!ಕ್ಷೇತ್ರದ ಮತದಾರರ ಪ್ರಕಾರ, ಆರಂಭದಿಂದಲೂ ಒಮ್ಮೆ ಸಿ.ಎಂ.ಉದಾಸಿಯವರನ್ನು ಮತ್ತು ಮನೋಹರ ತಹಶಿಲ್ದಾರರನ್ನು ಹೀಗೆಯೇ ಆಯ್ಕೆ ಮಾಡಿಕೊಂಡು ಬರುವ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಕಳೆದೆರಡು ಭಾರಿಯಿಂದ ಮನೋಹರ ತಹಶೀಲ್ದಾರ ಬದಲು ಹುಬ್ಬಳ್ಳಿಯ ಶ್ರೀನಿವಾಸ ಮಾನೆಯವರನ್ನೇ ಪಕ್ಷದ ಹಾಗೂ ಕ್ಷೇತ್ರದ ಮಗನಾಗಿ ಕಣಕ್ಕಿಳಿಸಿದ್ದಾರೆ ಜನರು.
ಜೆಡಿಎಸ್ ಕ್ಷೇತ್ರದಲ್ಲಿ ಇನ್ನೂ ನೆಲೆ ಕಂಡುಕೊಳ್ಳಬೇಕಿದೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇದೆ. ಈ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ನ ಶ್ರೀನಿವಾಸ ಮಾನೆಯವರನ್ನೇ ಜಾತ್ಯಾತೀತವಾಗಿ ಗೆಲ್ಲುವ ಅಭ್ಯರ್ಥಿಯನ್ನಾಗಿ ಕ್ಷೇತ್ರದ ಜನರೆಲ್ಲಾ ಕಾಂಗ್ರೆಸ್ ನ ಶ್ರೀನಿವಾಸ ಮಾನೆಯವರನ್ನೇ ಆಯ್ಕೆ ಮಾಡಿಕೊಂಡು ಚುನಾವಣೆಯ ದಿನಾಂಕವನ್ನು ಕಾಯುತ್ತಿದ್ದಾರೆ ಹಾನಗಲ್ಲ ಕ್ಷೇತ್ರದ ಜನರು.
ಹೊಸಬ–ಹಳಬ ಲೆಕ್ಕಾಚಾರ: ಹಾನಗಲ್ಲ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯ ಮುತ್ಸದ್ದಿ ಮತ್ತು ಬೇಡಿಕೆ ಇಡುವ ಮುನ್ನವೇ ಕೊಡುಗೆ ನೀಡುವ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನವರ ಹಾಗೂ ಕಾಂಗ್ರೆಸ್ ಪಕ್ಷದ ಮಗನಾಗಿ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿರುವ ನವ ಯುವಕ ಶ್ರೀನಿವಾಸ ಮಾನೆ ಈ ಇಬ್ಬರ ನಡುವೆ ಬೆಳಗಾದರೆ ಕೈಗೆ ಸಿಗುವ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಇರಲಿ ಎನ್ನುವ ಕೂಗು ದಟ್ಟವಾಗಿದೆ. ಇಲ್ಲಿಯವರೆಗೆ ಅವರಿಗೆ ಅವಕಾಶ ನೀಡಿದ್ದೇವೆ, ಹೊಸಬರು ಇರಲಿ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.
ಒಟ್ಟು ಮತದಾರರು 1,90,669, ಪುರುಷ ಮತದಾರರು 1,00,172, ಮಹಿಳಾ ಮತದಾರರು 90,497, ಹೀಗೆಯೇ ಹಾನಗಲ್ಲ ಕ್ಷೇತ್ರದ ಜನರಿದ್ದಾರೆ, ಮತ್ತೂ ಮತಗಳಿವೆ. ಅವೆಲ್ಲವೂ ಕಾಂಗ್ರೆಸ್ ನ ಶ್ರೀನಿವಾಸ ಮಾನೆಯವರನ್ನೇ ಗೆಲ್ಲಿಸುವ ಇರಾದೆಯಲ್ಲಿವೆ.
ಕ್ಷೇತ್ರದ ಇಶ್ಯೂಸ್: ಕೈಗಾರಿಕೆ, ಶಾಶ್ವತ ನೀರಾವರಿ, ಮಾವು ಸಂಸ್ಕರಣಾ ಕೇಂದ್ರ, ಪ್ರವಾಸಿ ತಾಣವಾಗಿ ಅಭಿವೃದ್ಧಿ.ಈ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳಾಗಿವೆ, ಜರೂರಾಗಿ. ಉಳಿದಂತೆ ಇನ್ನುಳಿದ ಕೆಲಸಗಳೂ ಆಗಬೇಕಾದೆ.ಈ ಎಲ್ಲಾ ಕೆಲಸಗಳನ್ನು ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಮಾಡುವ ಪಣ ಕೊಟ್ಟಿದ್ದಾರೆ ಈಗ ಎಂದು ಬೇರೇ ಹೇಳಬೇಕಿಲ್ಲ.
ಕಣದಲ್ಲಿರುವ ಅಭ್ಯರ್ಥಿಗಳು: ಸಿ.ಎಂ. ಉದಾಸಿ (ಬಿಜೆಪಿ) ಇಲ್ಲವಾದರಿಂದ ಶಿವರಾಜ ಸಜ್ಜನವರ, ಶ್ರೀನಿವಾಸ ಮಾನೆ (ಕಾಂಗ್ರೆಸ್), ಪಿ.ಎಸ್. ಅಯೂಬ್ (ಜೆಡಿಎಸ್), ಉಡಚಪ್ಪ ಉದ್ದನಕಾಲ, ಚಂದ್ರಪ್ಪ ಜಾಲಗಾರ, ಮಹಬೂಬಅಲಿ ನದಾಫ್, ರವಿ ಲಮಾಣಿ, ರಾಮಪ್ಪ ಬೊಮ್ಮಾಜಿ, ಸಿದ್ದಪ್ಪ ಪೂಜಾರ, ಹನುಮಂತಪ್ಪ ತಳವಾರ, ಹೊನ್ನಪ್ಪ ಅಕ್ಕಿವಳ್ಳಿ (ಪಕ್ಷೇತರ).
ಈ ಎಲ್ಲಾ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ನ ಶ್ರೀನಿವಾಸ ಮಾನೆಯವರನ್ನೇ ಆರಿಸಿ ಕಳಿಸುವ ಜಾಗುರುಕತೆಯಲ್ಲಿ ಇದ್ದಾರೆ ಜನರು.
ಇದಿಷ್ಟು ಹಾವೇರಿ ಜಿಲ್ಲೆಯ ಹಾನಗಲ್ಲ ಕ್ಷೇತ್ರದ ನಿಜ ಸಮೀಕ್ಷೆಯು..!