ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೀರಾ ಶೇಖ್‍ ವಿರೋಧ ವಂಚನೆ ಪ್ರಕರಣ: 1 ದಿನ ಪೊಲೀಸ್ ಕಸ್ಟಡಿಗೆ ಆದೇಶ

0
77

ಬಳ್ಳಾರಿ: ಲಕ್ಷಾಂತರ ಮಂದಿ ಅಮಾಯಕರಿಂದ ಬರೋಬ್ಬರಿ 3 ಸಾವಿರ ಕೋಟಿ ರೂ. ಹಣ ಅಕ್ರಮವಾಗಿ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೀರಾ ಶೇಖ್‍ ನ್ನು ಹೈದರಾಬಾದ್ ಜೈಲಿನಿಂದ ಪೊಲೀಸರು ಕರೆತಂದಿದು ಬಳ್ಳಾರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ಕುರಿತು ನ್ಯಾಯಲಯ ನೌಹೀರಾಗೆ ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Contact Your\'s Advertisement; 9902492681

ಪ್ರಕರಣದ ಕುರಿದ ಬಳ್ಳಾರಿ ನಿವಾಸಿ ಭಾಷಾ ಅವರು ನೌಹೀರಾ ಶೇಖ್ ವಿರುದ್ಧ ವಂಚನೆ ಕುರಿತು ದೂರು ದಾಖಲಿಸಿದ್ದರು ಎನ್ನಲಾಗಿದ್ದು, ನೌಹೀರಾ ಶೇಖ್ ನ್ಯಾಯಲಕ್ಕೆ ಹಾಜರಾದ ವಿಚಾರ ತಿಳಿದ  ಒಡೆತನದ ಚಿಟ್ ಫಂಡ್‍ನಲ್ಲಿ ಕಂಪೆನಿಯಲ್ಲಿ ಹಣ ಹೊಡಿಕೆದಾರರು, ಹಣ ಕಳೆದು ಕೊಂಡ ನೂರಾರು ಮಂದಿ ಕೋರ್ಟ್ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಭಂದಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪೂರ್ಣಿಮಾ ಯಾದವ್, ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದ್ದರು. ನ್ಯಾಯಾಲಯವು ಆರೋಪಿಯನ್ನು ಶುಕ್ರವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಶನಿವಾರ ಮತ್ತೆ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಹೈದರಾಬಾದ್ ಮೂಲದ ಹೀರಾ ಸಮೂಹ ಸಂಸ್ಥೆ ಸೇರಿ 24ಕ್ಕೂ ಅಧಿಕ ಕಂಪನಿಗಳನ್ನು ಹೊಂದಿದ್ದು, ಯುಎಇ ಹಾಗೂ ದುಬೈನಲ್ಲೂ ಕಚೇರಿಗಳನ್ನು ಹೊಂದಿದೆ. ಹೂಡಿಕೆ ಡಬ್ಬಲ್ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ. ಠೇವಣಿ ಹಾಗೂ ಹೂಡಿಕೆ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕವಾಗಿ ಶೇ.36% ಮೊತ್ತವನ್ನು ಹಿಂತಿರುಗಿಸುವುದಾಗಿ ನೌಹೀರಾ ಶೇಖ್ ಭರವಸೆ ನೀಡಿದ್ದರು. ಆದರೆ, ಹೂಡಿಕೆದಾರರಿಗೆ ಯಾವುದೇ ಹಣ ನೀಡದ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿತ್ತು.

ನೌಹೀರಾ ಶೇಖ್ ಹೆಸರಿನಲ್ಲಿ 180 ಬ್ಯಾಂಕ್ ಖಾತೆಗಳಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ 24 ಬೇನಾಮಿ ಸಂಸ್ಥೆಗಳ ಮೂಲಕ 182 ಬ್ಯಾಂಕ್ ಖಾತೆಗಳ ಮೂಲಕ 1,72,114 ಹೂಡಿಕೆದಾರರಿಂದ ಸುಮಾರು 3,000 ಕೋಟಿ ರುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂದಿದೆ.

ಕರ್ನಾಟಕದಲ್ಲಿ ಚುನಾವಣೆ ಸ್ಪರ್ಧಿಸಿದ್ದ ಎಐಎಂಇಪಿ ಪಕ್ಷವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತ್ಯಾತೀತ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಪಕ್ಷದ ಚಿಹ್ನೆ ವಜ್ರ ಆಗಿದೆ. ಮಾನವೀಯತೆಗಾಗಿ ನ್ಯಾಯ ಎಂಬ ಧ್ಯೇಯ ಹೊಂದಲಾಗಿದೆ ಎಂದು ಚುನಾವಣೆ ಕಣದಲ್ಲಿ ಎಐಎಂಇಪಿ ಸ್ಪರ್ಧಿಸಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here