ಅಕ್ಟೋಬರ್ 26 ರಂದು ಕ್ಯಾಂಪಸ್ ಸಂದರ್ಶನ

0
56

ಕಲಬುರಗಿ: ಬೆಂಗಳೂರಿನ ಎಂ.ಎಸ್. ಟೊಯೊಟಾ ಇಂಡಸ್ಟ್ರೀಸ್ ಇಂಜೇನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು ಐ.ಟಿ.ಐ. ವೃತ್ತಿಯ ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಂ.ಎಂ.ವಿ. ಆಂಡ್ ಡಿಸೇಲ್ ಮೆಕ್ಯಾನಿಕ್ ವೃತ್ತಿಗಳಲ್ಲಿ 2019, 2020 ಪಾಸಾದ ಹಾಗೂ 2021 ರಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇದೇ ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ (ಪುರುಷ) ಕೈಗಾರಿಕಾ ತರಬೇತಿ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದ್ದಾರೆ.

ಇಚ್ಛೆಯುಳ್ಳ ವಯೋಮಿತಿ 18 ರಿಂದ 23 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಮೇಲ್ಕಂಡ ದಿನದಂದು ಸಂದರ್ಶನಕ್ಕಾಗಿ ಹಾಜರಾಗಬೇಕು.

Contact Your\'s Advertisement; 9902492681

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೈಗಾರಿಕಾ ತರಬೇತಿ ತರಬೇತಿ ಸಂಸ್ಥೆಯ ಸೂಚನಾ ಫಲಕದಲ್ಲಿನ ವಿವರವನ್ನು ನೋಡಬಹುದಾಗಿದೆ ಎಂದು ಕಲಬುರಗಿ ಕೈಗಾರಿಕಾ ತರಬೇತಿ ತರಬೇತಿ ಸಂಸ್ಥೆ (ಪುರುಷ) ಪ್ರಾಚಾರ್ಯರಾದ ನಾಗುಬಾಯಿ ಸೂರ್ಯವಂಶಿ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here