ಜೇವರ್ಗಿ: ಮನೆ ಬಾಗಿಲಿಗೆ ಲಸಿಕೆ -ವಿನೂತನ ಪ್ರಯೋಗ

0
18

ಜೇವರ್ಗಿ; ಕೋವಿಡ್ ನಿರ್ಮೂಲನೆಗೆ ಸರಕಾರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸತತವಾಗಿ ಎಷ್ಟೇ ಪ್ರಯತ್ನಿಸಿದರೂ ಕೋವಿಡ್ ಲಸಿಕೆ ತೆಗೆದುಕೊಳ್ಳದೇ ಇರುವ ಜನರಿಗೆ ಜೇವರ್ಗಿ ತಾಲೂಕು ಆಡಳಿತ ಮನೆ ಮನೆಯ ಬಾಗಿಲಿಗೆ ಹೋಗಿ ಆರತಿ ಬೆಳಗಿ ಲಸಿಕೆಯನ್ನು ನೀಡುವ ವಿನೂತನ ಪ್ರಯೋಗ ಗಮನ ಸೆಳೆಯಿತು.

ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಇಲ್ಲಿಯವರೆಗೆ 82 ಶೇಕಡಾವಾರು ಜನರು ಲಸಿಕೆ ಪಡೆದಿದ್ದು ಉಳಿದ ಕೆಲ ಜನರು ಲಸಿಕೆ ಪಡೆಯಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ತಿಳಿ ಹೇಳಿದರು.

Contact Your\'s Advertisement; 9902492681

ಕೆಲ ಜನರು ಮೌಢ್ಯದ ಕಾರಣ ಹಾಗೂ ಲಸಿಕೆ ಪಡೆದರೇ ಅಡ್ಡ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಪಡೆದಿರಲಿಲ್ಲ .ಆದ್ದರಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮದಲ್ಲಿ ಜೇವರ್ಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ ಅವರ ಗಮನಕ್ಕೆ ಬಂದಾಗ ತಕ್ಷಣವೇ ಕಾರ್ಯಪ್ರವೃತ್ತರಾಗಿ ಯಾರೂ ಲಸಿಕೆ ಪಡೆದಿಲ್ಲವೋ ಅಂತವರ ಮನೆ ಮನೆಗೆ ಹೋಗಿ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಸಾರ್ವಜನಿಕರ ಮನವೊಲಿಸಿ ,ಅವರಿಗೆ ಆರತಿಯನ್ನು ಬೆಳಗಿ ಲಸಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ಗುಬ್ಯಾಡ. ತಾಲ್ಲೂಕು ಸಿಡಿಪಿಓ ಸಂಗಣಗೌಡ ಪಾಟೀಲ. ಮಂದೇವಾಲ ಪ್ರಾಥಮಿಕ ಆರೋಗ್ಯ ಅಧಿಕಾರಿ ರೇಣುಕಾ ದೇವರಮನಿ.ಆಹಾರ ನೀರಿಕ್ಷಕ ಡಿ.ಬಿ.ಪಾಟೀಲ. ಅಬಕಾರಿ ವೃತ್ತ ನಿರೀಕ್ಷಕಿ ವನಿತಾ ಸೀತಾಳೆ. ತೋಟಗಾರಿಕೆ ಇಲಾಖೆ ಅಧಿಕಾರಿ ಸುಷ್ಮಾ ಪಾಟೀಲ. ಹಿಂದುಳಿದ ವರ್ಗ ಇಲಾಖೆ ಅಧಿಕಾರಿ ಶಕುಂತಲಾ.ಪಿಡಿಓ ಬಿ.ಆರ್.ಪಾಟೀಲ. ಮಲ್ಲಿಕಾರ್ಜುನ ಬಿರಾದಾರ ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರಯ್ಯ ಹಿರೇಮಠ ನಾಗನಗೌಡ ಪಾಟೀಲ ಹಾಗೂ ಆರೋಗ್ಯ ಕಾರ್ಯಕರ್ತರಾದ ಅಜರುದ್ದೀನ ಶ್ವೇತಾ. ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಗುಜಗೊಂಡ.ಸುಧಾ ಗುತ್ತೆದಾರ ಹಾಗೂ ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀ ಜೇರಟಗಿ ಸಾವಿತ್ರಿ ಕೋರವಾರ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here