ಕಲಬುರಗಿ: ಭಾರತೀಯ ಯುವ ಸೈನ್ಯಯ ಕಚೇರಿಯಲ್ಲಿ ಸೈನ್ಯಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ (ರಾಜು) ಡೋಣ್ಣಿಗೇರಿ ಇವರ ನೇತೃತ್ವದಲ್ಲಿ ಸೋಮವಾರ ಭಾರತೀಯ ಯುವ ಸೈನ್ಯ ಸಭೆ ನಡೆಸಿ ಸಭೆಯಲ್ಲಿ ನೂತನ ಜಿಲ್ಲಾ ಘಟಕದಲ್ಲಿ ಮತ್ತು ಗ್ರಾಮ ಘಟಕಗಳ ಪದಾಧಿಕಾರಿಗಳೀಗೆ ನೇಮಕ ಮಾಡಲಾಗಿದೆ.
ಜಿಲ್ಲಾ ಮಹಿಳಾ ಘಟಕ ಕಾರ್ಯದರ್ಶಿಯಾಗಿ ರಜನಿ, ಸಂಘಟನಾ ಕಾರ್ಯದರ್ಶಿಯಾಗಿ ನೀಲಾವತಿ, ಸದಸ್ಯರಾಗಿ ಸುಜಾತ, ಜಯಶ್ರೀ, ಹಾಗೂ ಜಿಲ್ಲಾ ಸದಸ್ಯರಾಗಿ ಆಕಾಶ ಠಾಕೂರ, ಚಿಂಚನಸೂರ ಗ್ರಾಮ ಘಟಕ ಅಧ್ಯಕ್ಷರಾಗಿ ಆರೂಢ ಕೈಲಾಸ, ಉಪಾಧ್ಯಕ್ಷರಾಗಿ ವೀರೆಶ ಗುಡಿ, ಬೋಧನ ಗ್ರಾಮ ಘಟಕದ ಅಧ್ಯಕ್ಷರಾಗಿ ಮನೋಜ ಸುಭಾಷ, ಉಪಾಧ್ಯಕ್ಷರಾಗಿ ಆಕಾಶ, ರವಿ ಸಾಗರ ಅವರನ್ನು ಆಯ್ಕೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ಮಹಿಳಾ ಘಟಕ ಅಧ್ಯಕ್ಷೆ ವಿಜಯಲಕ್ಷ್ಮೀ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ರೆಡ್ಡಿ, ಆಳಂದ ತಾಲೂಕ ಉಪಾಧ್ಯಕ್ಷ ಪ್ರಶಾಂತ ಹೂಗಾರ ಚಿಂಚನಸೂರ ಇದ್ದರು.