ಉದ್ಯೋಗ ಕೊಡಿ, ಇಲ್ಲವೆ ಖುರ್ಚಿ ಬಿಡಿ: ಅಟ್ಟೂರ

0
158

ಕಲಬುರಗಿ: ಯುವಜನರಿಗೆ ಉದ್ಯೋಗವನ್ನು ಕಲ್ಪಿಸುವಂತೆ ಹಾಗೂ ದೇಶದಲಿೢ ಖಾಲಿಯಿರುವ ಸರಕಾರಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗ ಭರ್ತಿಗೊಳಿಸಬೇಕೆಂದು ಅಖಿಲ ಭಾರತ ಯುವಜನ ಒಕ್ಕೂಟ ಎಐವೈಎಫ್ ರಾಷ್ಟ್ರೀಯ ಮಂಡಳಿ ರಾಷ್ಟ್ರಾದ್ಯಂತ ಇ೦ದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐವೈಎಫ್ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ ತಿಳಿಸಿದ್ದಾರೆ.

ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ಉದ್ಯೋಗವಿಲ್ಲದೆ ಯುವಜನರು ಬದುಕು ನಡೆಸುವುದೆ ಕಠಿಣವಾಗಿದೆ. ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅಪರಾಧ ಕ್ರಿಯೆಯಲ್ಲಿ ತೊಡಗಿ ರುವುದು ವಿಷಾದಕರ ಸಂಗತಿ. 2014 ರ ಚುನಾವಣೆ ಸಂದರ್ಭದಲ್ಲಿ ದೇಶದ ಯುವಜನರಿಗೆ ವಾರ್ಷಿಕ 2ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಮಾನ್ಯ ಪ್ರಧಾನಮಂತ್ರಿಯವರು ನೀಡಿದ್ದರು.ಆದರೆ ಹೊಸ ಉದ್ಯೋಗ ಸೃಷ್ಟಿ ಮಾಡುವದನ್ನು ಬಿಟ್ಟು, ಇರುವ ಉದ್ಯೋಗಳನ್ನೆ ಕಳೆದುಕೊಂಡು ಎಷ್ಟೊ ಜನ ಯುವಕರು ಬೀದಿಪಾಲಾಗಿದ್ದಾರೆ.

Contact Your\'s Advertisement; 9902492681

ಇದರಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಯುವ ಜನರನ್ನು ರಕ್ಷಣೆ ಮಾಡದಿರುವುದನ್ನು ಸಂಘಟನೆ ಬಲವಾಗಿ ಖಂಡಿಸುತ್ತದೆ.ತಕ್ಷಣ ಸರಕಾರಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಯುವಜನರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಬೇಕು. ಯುವಜನರಿಗೆ ಆದರ್ಶವಾಗಿರುವ ಕ್ರಾಂತಿಕಾರಿ ಭಗತಸಿ೦ಗ್ ಅವರ ಹೆಸರಿನಲ್ಲಿ ಎಂಪ್ಲಾಯ್ಮೆಂಟ್ ಗ್ಯಾರಂಟಿ ಎಕ್ಟ್ (Bhagat singh National employment guarantee act) ಜಾರಿಗೆ ತಂದು ಯುವಜನರಿಗೆ ಉದ್ಯೋಗ ಕೊಡುವುದರೊಂದಿಗೆ ಭದ್ರತೆ ಒದಗಿಸಬೇಕೆಂದು ಆಗ್ರಹಪಡಿಸಿದರು.

ಕೇಂದ್ರ ಸರ್ಕಾರವು ಬಿಎಸ್ಎನ್ಎಲ್, ಎಲ್ಐಸಿ,ಬ್ಯಾಂಕ, ಕಲ್ಲಿದ್ದಲು, ವಿದ್ಯುತ್, ಮುಂತಾದ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಖಂಡನೀಯ.

ಜನಪರ ಸರ್ಕಾರ ಸಾರ್ವಜನಿಕ ವಲಯಗಳನ್ನು ಬಲಿಷ್ಠಗೊಳಿಸಬೇಕೆ ಹೊರತು ದುರ್ಬಲಗೊಳಿಸಿ ಖಾಸಗಿಯವರಿಗೆ ಮಾರಾಟ ಮಾಡಬಾರದು ಏಕೆಂದರೆ ಇಂತಹ ನೀತಿಯಿಂದ ರಾಷ್ಟ್ರ ಉಳ್ಳವರ ಸ್ವತ್ತಾಗುತ್ತದೆ.ರಾಷ್ಟ್ರದ ಯುವಕರಿಗೆ ಉದ್ಯೋಗ ಕೊಡಿ ಇಲ್ಲವೆ ಉದ್ಯೋಗ ಕೊಡುವವರಿಗೆ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಕೊಡಬೇಕು. ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವುದು ತಕ್ಷಣ ನಿಲ್ಲಿಸಬೇಕು.

ಪೆಟ್ರೋಲ, ಡೀಸೆಲ್, ಅಡುಗೆ ಅನಿಲ ಹಾಗೂ ಗೃಹ ಬಳಕೆಯ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಗೊಳಿಸಬೇಕು. ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ 371 (ಜೆ) ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಈ ಭಾಗದ ವಿದ್ಯಾರ್ಥಿ, ಯುವಕರಿಗೆ ನ್ಯಾಯ ದೊರಕಿಸಿಕೊಡಬೇಕು. ಕಲ್ಯಾಣ ಕರ್ನಾಟಕ ಭಾಗದ ಖಾಲಿ ಇರುವ ಹಲವಾರು ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಿಕೊಳ್ಳಬೇಕು ಹಾಗೂ ಹೆಸರಿಗೆ ತಕ್ಕ ಹಾಗೆ ಈ ಭಾಗ ಅಭಿವೃದ್ಧಿಗೊಳಿಸಿ ಕಲ್ಯಾಣನಾಡು ಮಾಡಬೇಕೆಂದು ಒತ್ತಾಯಿಸಿದರು.

ಸರಕಾರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ರಾಷ್ಟ್ರಾ ದ್ಯಂತ ಎಐವೈಎಫ್ ಸಂಘಟನೆಯು ಹಂತ ಹಂತವಾದ ಹೋರಾಟ ಮಾಡಲು ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here