ರೈತರ ಪ್ರತಿಭಟನಾ ಸಪ್ತಾಹ

0
25

ಕಲಬುರಗಿ: ರೈತರನ್ನು ಕೊಲೆಗೈಯುತ್ತಾ ಅವರ ಹೋರಾಟವನ್ನು ಮುರಿಯಲು ಪ್ರಯತ್ನಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರವು ಮತ್ತೊಮ್ಮೆ ತನ್ನ ಫ್ಯಾಸಿಸ್ಟ್ ಕ್ರೌರ್ಯವನ್ನು ಪ್ರದರ್ಶಿಸಿದೆ. ಆದರೆ, ರೈತರ ಸಾವಿನೊಂದಿಗೆ ಈ ಹೋರಾಟವು ಮುಗಿಯುವುದು ಎಂಬ ಮಧವನ್ನು ಬಿಜೆಪಿಯು ತನ್ನ ತಲೆಯಲ್ಲಿ ತುಂಬಿಕೊಂಡು ದೇಶದ ಜನತೆಯ ಪ್ರತಿ, ರೈತರ ಪ್ರತಿ ದ್ವೇಷವನ್ನೇ ಕಕ್ಕುತ್ತಿದೆ. ಆದರೆ, ಪ್ರತಿ ರೈತನ ಸಾವಿನಿಂದ ಈ ಹೋರಾಟವು ಸಾವಿರಾರು ಪಟ್ಟು ಹೆಚ್ಚುತ್ತಿದೆ, ಬಲಗೊಳ್ಳುತ್ತಿದೆ, ಮುನ್ನುಗ್ಗುತ್ತಿದೆ ಎಂದು ಆರ್.ಕೆ.ಎಸ್. ನ ಕಲಬುರಗಿ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಮಹೇಶ್ ಎಸ್. ಬಿ. ಯವರು ಅಭಿಪ್ರಾಯಪಟ್ಟರು.

ಇಂದು ಆಲ್ ಇಂಡಿಯಾ ಕಿಸಾನ್ ಖೆತ್ ಮಜ್ದೂರ್ ಸಂಘಟನ್ (ಎಐಕೆಕೆಎಂಎಸ್), [ಕರ್ನಾಟಕದಲ್ಲಿ, ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್)], ಅಖಿಲ ಭಾರತ ಸಮಿತಿಯ ರೈತರ ಪ್ರತಿಭಟನಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ ಅವರು : ಇಂದಿಗೆ ೧೧ ತಿಂಗಳು ತುಂಬಿರುವ ಈ ಹೋರಾಟವು ಕೇಂದ್ರ ಸರ್ಕಾರದ ಕರಾಳ ಕಾನೂನುಗಳ ವಿರುದ್ಧ ನಡೆಯುತ್ತಿದೆ. ಬಂಡವಾಳಶಾಹಿಗಳಿಗೆ ಕೃಷಿ ಕ್ಷೇತ್ರದಿಂದ ಲಾಭಮಾಡಿಕೊಡಲು ಬಿಜೆಪಿ ಸರ್ಕಾರವು ಶತಾಯಗತಾಯ ಪ್ರಯತ್ನಿಸುತ್ತಿದೆ.

Contact Your\'s Advertisement; 9902492681

ಶಾಂತಿಯುತವಾಗಿ ನಡೆಯುತ್ತಿರುವ ರೈತರ ಹೋರಾಟದ ಮೇಲೆ ಇತ್ತೀಚೆಗೆ ಯು.ಪಿ. ಯ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸಚಿವನು ಮತ್ತು ಆತನ ಮಗ ಸೇರಿಕೊಂಡು ಜೀಪನ್ನು ಹರಿಸಿ ನಾಲ್ಕು ಜನ ರೈತರು ಹಾಗೂ ಒಬ್ಬ ಪತ್ರಕರ್ತನ ಸಾವಿಗೆ ಕಾರಣರಾಗಿದ್ದಾರೆ. ಇದನ್ನು ಖಂಡಿಸಿ ಇಂದು ದೇಶದಾದ್ಯಂತ ಸಾವಿರಾರು ಹಳ್ಳಿಗಳಲ್ಲಿ ಪ್ರತಿಭಟನಾ ಜಾಥಾಗಳು ನಡೆಯುತ್ತಿವೆ. ಅದೇ ರೀತಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಈ ಜಾಥಾವು ಹೋರಾಟದ ಸಂದೇಶದೊಂದಿಗೆ ಮುನ್ನಡೆಯಲಿದೆ.

ಈ ಹೋರಾಟದಲ್ಲಿ ಸಮಸ್ಥ ರೈತರು, ಕಾರ್ಮಿಕರು, ಬಡವರು ಮತ್ತು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ನೀಡಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಕಾಮ್ರೇಡ್ ಗಣಪತ್ ರಾವ್ ಕೆ. ಮಾನೆ ಯವರು ಭಾಷಣಕಾರರಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಚಂದ್ರು ರವರು ವಹಿಸಿದ್ದರು. ಸಂಘಟನೆಯ ರಘು ಪವಾರ್, ರಮೇಶ್ ದೇವಕರ್, ನಿಂಗಪ್ಪ, ಸಾಯಬಣ್ಣ, ಶ್ರೀಶೈಲ್, ಮೌನೇಶ್, ದೇವು, ಮಲ್ಕಪ್ಪ ಮುದ್ದಾ ರವರನ್ನೊಳಗೊಂಡು ನೂರಾರು ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here