ಅತ್ಯಾಚಾರಿ ಆರೋಪಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕ್ರಮಕ್ಕೆ ಆಗ್ರಹ

0
24

ಕಲಬುರಗಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿ ಗ್ರಾಮದ ಪಾಲಮ್ಮ ಗಂಡ ಮಾರಪ್ಪ ಮಾದರ ಎಂಬ ದಲಿತ ಮಹಿಳೆಯನ್ನು ಅತ್ಯಾಚಾರ ಮಾಡಲು ಯತ್ನಿಸಿ , ಜೀವಂತ ಪೆಟ್ರೋಲ್ ಸುರಿದು ಸುಟ್ಟಿ ಜಿವತೆಗೆದ ವಿಕೃತ ಆರೋಪಿಗಳಾದ ಗಂಗಪ್ಪಾ ಹಾಲಳ್ಳಿ ಜೀವಾದ ಶಿಕ್ಷೆಗೆ ಗುರಿಪಡಿಸಿ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಮಹಿಳೆಯ ಕುಟುಂಬಕ್ಕೆ ಪರಿಹಾರ ಕೊಡಬೇಕು ಹಾಗೂ ಕುಟುಂಬದಲ್ಲಿ ಯಾರಿಗಾದರೂ ಸರಕಾರಿ ನೌಕರಿಯನ್ನು ಕೊಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್.ಬಿಲ್ಕರ, ರವಿಚಂದ್ರ ಗುತ್ತೇದಾರ, ವಜ್ರಮುನಿ ಸಂಘ, ಮಲ್ಲಿಕಾರ್ಜುನ ಮಾಡಬೂಳ, ಅಮೃತ ಸಜ್ಜನ, ಶ್ರೀಮಂತ ಕಿಲ್ಲೇದಾರ, ನಾಗೇಶ ನಡಗೇರಿ, ಕುಮಾರ ಕಾಂಬಳೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here