ಎಲ್ಲರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಲೆ ಬೇಕು-ಡಿವೈಎಸ್ಪಿ ಡಾ:ದೇವರಾಜ್ ಬಿ.

0
18

ಸುರಪುರ: ನಗರದ ಪೊಲೀಸ್ ಠಾಣೆ ಆವರಣದಲ್ಲಿ ಆಟೋ ಮತ್ತು ಇತರೆ ವಾಹನ ಚಾಲಕರಿಗಾಗಿ ಜಾಗೃತಿ ಸಭೆಯನ್ನು ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆ ನಡೆದ ಸಭೆಗೆ ಚಾಲನೆ ನೀಡಿದ ಡಿವೈಎಸ್ಪಿ ಡಾ:ದೇವರಾಜ್ ಬಿ. ಮಾತನಾಡಿ,ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಬೇಕು,ಅಲ್ಲದೆ ರಾತ್ರಿ ವೇಳೆ ಆಟೋ ಬಾಡಿಗೆ ಓಡಿಸುವವರು ಕಡ್ಡಾಯವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೆ ರಾತ್ರಿ ಆಟೋ ಓಡಿಸುವವರಿಗೆ ಇಲಾಖೆಯಿಂದ ಪತ್ರ ನೀಡಲಾಗುವುದು ಅಲ್ಲದೆ ಎಲ್ಲರು ಕಡ್ಡಾಯವಾಗಿ ತಮ್ಮ ಎಲ್ಲಾ ಮಾಹಿತಿ ಮತ್ತು ದಾಖಲಾತಿಗಳ ನಕಲು ಪ್ರತಿಗಳನ್ನು ನೀಡುವಂತೆ ತಿಳಿಸಿದರು.

Contact Your\'s Advertisement; 9902492681

ಸರ್ವೋಚ್ಛ ನ್ಯಾಯಾಲಯದ ಆದೇಶದ ದಂಡ ಸಂಹಿತ ಪ್ರಕಾರ ವಾಹನಗಳ ಮೇಲೆ ಜನರನ್ನು ಕೂರಿಸಿಕೊಂಡು ಹೋಗುವುದು ಅಪರಾಧವಾಗಲಿದೆ.ಇನ್ನು ಕುಡಿದು ವಾಹನ ಚಲಾಯಿಸುವುದು ಕಾನೂನು ರೀತಿ ಅಪರಾಧ ಎಂಬುದು ನಿಮಗೆಲ್ಲ ತಿಳಿದಿರುವ ಸಂಗತಿಯಾಗಿದೆ ಹಾಗು ನಿಯಮ ಮೀರಿ ವಾಹನ ಚಲಾಯಿಸಿದರೆ ದಂಡ ಬೀಳಲಿದೆ ಆದ್ದರಿಂದ ದಂಡ ಹಾಕುವ ಮುನ್ನ ವಾಹನ ಚಾಲಕರಿಗೆ ಕಾನೂನು ತಿಳಿವಳಿಕೆ ಮೂಡಿಸಲಾಗುತ್ತಿದೆ.

ಚಾಲಕರು ರಸ್ತೆಯಲ್ಲಿ ನಿಂತು ಹರಟೆ ಹೊಡೆಯುತ್ತಾ ನಿಂತು ವಾಹನಗಳಿಗೆ ತೊಂದರೆ ಮಾಡಬೇಡಿ, ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಒಂಟಿ ಮಹಿಳೆಯರು ಕಂಡರೆ ಅವರ ರಕ್ಷಣೆಗೆ ಮುಂದಾಗಿ ಅಥಬಾ ನಮ್ಮ ಇಲಾಖೆಗೆ ಮಾಹಿತಿ ನೀಡಿದಲ್ಲಿ ಅವರನ್ನು ಅವರು ಹೋಗಬೇಕಾದ ಸ್ಥಳಕ್ಕೆ ತಲುಪಿಸುತ್ತೇವೆ ಎಂದರು. ಅಲ್ಲದೆ ಅನುಮಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಪ್ರತಿಯೊಬ್ಬರು ನಿಮ್ಮ ಸ್ಮಾರ್ಟ್ ಪೋನ್‌ನಲ್ಲಿ ಗೃಹ ಸುರಕ್ಷಾ ಯಾಪ್‌ನ್ನು ಹಾಕಿಕೊಳ್ಳಿ, ಮನೆಯಿಂದ ಯಾರಾದರು ಕುಟುಂಬ ಸಮೇತ ಹೊರಗಡೆ ಹೋಗುತ್ತಿದ್ದರೆ ಅಂತವರು ಗೃಹ ಸುರಕ್ಷಾ ಆಪ್‌ನ್ನು ಬಳಿಸಿ ಜಿಪಿಆರ್‌ಎಸ್ ಮೂಲಕ 9480803600 ಈ ವಾಟ್ಸಾಪ್ ನಂಬರ್ ಮೂಲಕ ಸಂದೇಶ ರವಾನಿಸಿ. ಆಗ ತಕ್ಷಣವೇ ನಮ್ಮ ಪೊಲೀಸರು ಸಿಬ್ಬಂದಿ ನಿಮ್ಮ ಮನೆಗಳೆಡೆಗೆ ಗಸ್ತು ತಿರುಗಲು ಅನುಕೂಲವಾಗಿದೆ,ಇದರಿಂದ ಯಾವುದೇ ರೀತಿಯ ಕಳ್ಳತನ ಜರುಗದಂತೆ ತಡೆಯಲು ಸಾಧ್ಯವಾಗಲಿದೆ ಎಂದರು ಮತ್ತು ಪೊಲೀಸರ ತುರ್ತು ನೆರವಿಗಾಗಿ ೧೧೨ ಸಂಖ್ಯೆಗೆ ಕರೆ ಮಾಡಿದರೆ ಸಹಾಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ ಎಲ್ಲರಿಗೂ ಪ್ರತ್ಯಕ್ಷವಾಗಿ ತೋರಿಸಲು ತಕ್ಷಣಕ್ಕೆ ೧೧೨ ನಂಬರ್‌ಗೆ ಕರೆ ಮಾಡಿ ವಾಹನ ಹೇಗೆ ನೆರವಿಗೆ ಬರಲಿದೆ ಎನ್ನುವುದನ್ನು ತೋರಿಸಿದರು.ಅಲ್ಲದೆ ಎಲ್ಲಿಯಾದರೂ ಅಪಘಾತ ಸಂಭವಿಸಿರುವುದು ಕಂಡುಬಂದಲ್ಲಿ ತಕ್ಷಣಕ್ಕೆ ಅವರ ನೆರವಿಗೆ ಧಾವಿಸಿ ಯಾವುದೇ ಕಾರಣಕ್ಕೂ ಫೋಟೊ ವಿಡಿಯೋಗೆ ಮುಂದಾಗದೆ ನೆರವಾಗುವಂತೆ ತಿಳಿಸಿದರು.ಅಲ್ಲದೆ ಆಂಬುಲೆನ್ಸ್ ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ನಂತರ ಅಪಘಾತವಾದಾಗ ಗಾಯಾಳುಗಳನ್ನು ಯಾವ ರೀತಿಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು ಮತ್ತು ಅವರನ್ನು ಹೇಗೆ ಉಪಚರಿಸಬೇಕು ಎನ್ನುವುದರ ಅಣಕು ಪ್ರದರ್ಶನವನ್ನು ನಡೆಸಿ ತಿಳಿಸಿದರು.ನಂತರ ಗೃಹ ಸುರಕ್ಷಾ ಯಾಪ್ ಕುರಿತು ಮಾಹಿತಿಯುಳ್ಳ ಭಿತ್ತಿ ಪತ್ರಗಳನ್ನು ಆಟೋಗಳಿಗೆ ಅಂಟಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಿಎಸ್‌ಐ ಕೃಷ್ಣಾ ಸುಬೇದಾರ್,ಚಿತ್ರಶೇಖರ ಹೆಬ್ಬಾಳ, ಪೊಲೀಸ್ ಸಿಬ್ಬಂದಿಗಳಾದ ಮನೋಹರ ರಾಠೋಡ,ಶರಣಗೌಡ ಪಾಟೀಲ್,ಹೊನ್ನಪ್ಪ, ಮಹಾಂತೇಶ ಬಿರಾದಾರ,ಮಂಜುನಾಥ ಹಾಗು ಆಟೋ ಚಾಲಕರಾದ ಮಾನಪ್ಪ ಪ್ಯಾಪ್ಲಿ, ಮೌಲಾಲಿ, ನಾಗರಾಜ ಪಾಳೇದಕೇರ,ಶರಣಪ್ಪ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here