ಜೆಒಸಿಯಿಂದ ಸಿಬ್ಬಂದಿಗಳ ಸೇವಾ ಭದ್ರತೆಗೆ ಒತ್ತಾಯಿಸಿ ಸಚಿವ ಬಿ.ಸಿ.ನಾಗೇಶ ಮನವಿ

0
58

ಕಲಬುರಗಿ: ಜೆಒಸಿಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಸೇವಾ ಭದ್ರತೆ ಪಿಂಚಣಿ ಹಾಗೂ ಕೆಲವು ಇಲಾಖೆಗಳ ತೊಂದರೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ವೃತ್ತಿ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಮಡ ನೌಕರರ ಸಂಘದ ಅಧ್ಯಕ್ಷ ಮಲ್ಲಿನಾಥ ಪಿ. ಕಳಸ್ಕರ್ ಅವರ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ ಸಚಿವ ಬಿ.ಸಿ.ನಾಗೇಶ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸರಕಾರದ ಅವಧಿಯಲ್ಲಿ ೨೦-೩೦ ವರ್ಷಗಳಿಂದ ಅಲ್ಪ ಸಂಭಾವನೆ ಪಡೆದು ನಿರಂತರ ಸೇವೆ ಸಲ್ಲಿಸಿದ ೩೩೦೦ ಸಿಬ್ಬಂದಿಯವರನ್ನು ಖಾಯಂಗೊಳಿಸಲಾಗಿದ್ದು, ಐದು ವರ್ಷ ಸೇವೆ ಪುರೈಸಿದ ೫೦೦ ಸಿಬ್ಬಂದಿಯನ್ನು ಖಾಯಂ ಮಾಡಲಾಗುತ್ತಿದ್ದು, ಮತ್ತು ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸೇವಾ ಭದ್ರತೆ ಪಿಂಚಣೆ ಸಲುವಾಗಿ ತುರ್ತಾಗಿ ಸಭೆ ಕರೆದು ಮಾಹಿತಿ ಸಹ ತರಿಸಿಕೊಂಡು ಎಲ್ಲಾ ಸಿಬ್ಬಂದಿಗಳ ಬದುಕಿಗೆ ಬೆಳಕು ನೀಡಿದಕ್ಕಾಗಿ ವಿವಿಧ ಇಲಾಖೆಯ ವಿಲಿನಗೊಂಡ ಸಿಬ್ಬಂದಿಯವರು ಸರಕಾರಕ್ಕೆ ಚಿರ ಋಣಿಯಾಗಿರುತ್ತಾರೆ ಎಂದು ಹೇಳಿದರು.

Contact Your\'s Advertisement; 9902492681

ಆದರೆ ಅನೇಕ ಸಿಬ್ಬಂದಿಯವರು ನಿವೃತ್ತಿ ಹೊಂದಿದ್ದಾರೆ ನಿವೃತ್ತಿ ಅಂಚಿನಲ್ಲಿದ್ದಾರೆ ಕೆಲವು ಸಿಬ್ಬಂದಿ ಕರೋನಾದಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದು ಮರಣ ಹೊಂದಿದವರು ಇದ್ದಾರೆ ನಮ್ಮೆಲ್ಲರ ಸಿಬ್ಬಂದಿಗಳ ಸ್ಥಿತಿ ಚಿಂತಾಚನಕ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿ ಸೇವಾ ಭದ್ರತೆ ಮತ್ತು ಪಿಂಚಣೆ ಮಾಡುವ ಕಾರ್ಯ ಮಾಡುತ್ತಿದ್ದಿರಿ ಇಷ್ಟೇಲ್ಲ ಕಾರ್ಯ ನಿರ್ವಹಿಸುತ್ತಿರುವ ಸರಕಾರ ಎಲ್ಲ ಸಚಿವರುಗಳು ಎಲ್ಲಾ ವಿಧಾನ ಪರಿಷತ್ ಸದಸ್ಯರು ಎಲ್ಲಾ ಶಾಸಕರು ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳು ನಮ್ಮ ಬೇಡಿಕೆಯನ್ನು ಆದಷ್ಟು ಬೇಗನೆ ಪೂರೈಸಬೇಕೆಂದು ಸಚಿವರಿಗೆ ಮನವಿ ಮಾಡಲಾಯಿತು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶಶೀಲ ಜಿ ನಮೋಶಿ, ಗೌರವಅಧ್ಯಕ್ಷ ಗುರುರಾಜ ಕುಲಕರ್ಣಿ, ಸಂಘದ ಕಾರ್ಯದರ್ಶಿ ಗಂಗಾಧರ ಜಾಲಾದಿ, ಜಗನಾಥ ಮೋದಿ, ಶರಣಬಸಪ್ಪ ಗುಡ್ಡಾ, ಶ್ರೀಮತಿ ಸಂಗೀತಾ, ಕಾಶಿಂ ಪಟೇಲ್, ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here