ಕಲಬುರಗಿ: ನಗರದ ಗೋದುತಾಯಿ ಕಾಲೋನಿಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ನಗರದ ಸಂಚಾರ ಉಪ ವಿಭಾಗ ಪೊಲೀಸ್ ಠಾಣೆ-೦೧ ವತಿಯಿಂದ ಸಂಚಾರ ಕಾನೂನು ಅರಿವು ಕಾರ್ಯಕ್ರಮ – ೨೦೨೧ ರ ಅಡಿಯಲ್ಲಿ ಈ ಕಾರ್ಯಕ್ರಮದಲ್ಲಿ ಸಂಚಾರ ಉಪ ವಿಭಾಗ ಪೊಲೀಸ್ ಠಾಣೆ ಪಿಐ ಶಾಂತಿನಾಥ ಬಿ.ಪಿ ಇವರು ಮಾತನಾಡುತ್ತಾ ಮಕ್ಕಳಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಹಾಗೂ ಹೇಗೆ ರಸ್ತೆ ಅಫಘಾತಗಳ ತಡೆಗಟ್ಟುವದು, ವಾಹನ ಚಲಾಹಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಹಾಗೂ ದ್ವಿ ಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಪ್ರಾಣಾಪಾಯದಿಂದ ಪಾರಾಗುವ, ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುವ ಬಗ್ಗೆ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು, ಒಂದು ವೇಳೆ ಮೊಬೈಲ್ ಬಳಸಿದರೆ ಆಗುವ ಅನಾಹುತಗಳ ಕುರಿತು ಕುಲಂಕುಶವಾಗಿದೆ ಎಂದರು.
ಅತಿವೇಗ ಚಲಿಸುವುದರಿಂದ ಆಗುವ ಅಪಾಯ ಹಾಗೂ ಅವಸರವೇ ಅಪಘಾತಕ್ಕೆ ಕಾರಣವೆಂದು ಅರಿವು ಮೂಡಿಸುತ್ತ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ತಿಳುವಳಿಕೆ ಹೇಳಿದರು.
ಸಂಚಾರ ಉಪ ವಿಭಾಗ ಪೊಲೀಸ್ ಠಾಣೆ-೦೧ರ ಸಿಬ್ಬಂದಿ ನರಸಿಂಹಚಾರಿ ಅವರು ಮಾತನಾಡುತ್ತಾ, ಸಂಚಾರಿ ನಿಯಮಗಳು ಹಾಗೂ “ಸಿಗ್ನಲ್” ಕಡ್ಡಾಯವಾಗಿ ಪಾಲಿಸುವ ಕುರಿತು ತಿಳಿಸಿ ಹೇಳಿದರು.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಪೋಲಿಸ್ ಕಾನ್ಸಟೇಬಲ್ ಸಿದ್ದು ಪಾಟೀಲ್, ಹಾಗೂ ಶಶಿಕಾಂತ ಪಾಟೀಲ್, ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ, ಪ್ರಾಚಾರ್ಯರಾದ ನಾಗೇಂದ್ರ ಬಡಿಗೇರ್, ಎಲ್ಲ ಶಿಕ್ಷಕರು, ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.