ಸುರಪುರ: ನಗರದ ವಿದ್ಯಾರ್ಥಿಗಳಲ್ಲಿ ಸುರಪುರ ಸಂಸ್ಥಾನದ ಸಮಗ್ರ ಇತಿಹಾಸದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸುರಪುರ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. ಕಾರ್ಯಕ್ರಮವನ್ನು ಸುರಪುರ ಅರಸು ಮನೆತನದ ಡಾ: ರಾಜಾ ಕೃಷ್ಣಪ್ಪ ನಾಯಕ ಬಲವಂತ ಬಹರಿ ಬಹದ್ದೂರ್ ಸುರಪುರ ಸಂಸ್ಥಾನ ಅವರು ಪರೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ದರಬಾರ ಹಾಲ್‌ನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರೀ ಪ್ರಭು ಮಹಾವಿದ್ಯಾಲಯ,ಡಾ:ಬಿ.ಆರ್.ಅಂಬೇಡ್ಕರ್ ಮಹಾವಿದ್ಯಾಲಯ, ಸರ್ಕಾರಿ ಬಾಲಕಿಯರ ಮಹಾವಿದ್ಯಾಲಯ,ಶರಣಬಸವೇಶ್ವರ ಮಹಾವಿದ್ಯಾಲಯ,ಅರುಂಧತಿ ಮಹಾವಿದ್ಯಾಲಯ,ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯ ಸೇರಿದಂತೆ ಅನೇಕ ಕಾಲೇಜಿನ ಒಟ್ಟು ೪ ನೂರಕ್ಕೂ ಅಧಿಕ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದರು.
ಇದೇ ಸಂದರ್ಭದಲ್ಲಿ ಪರೀಕ್ಷಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುರಪುರ ಪೊಲೀಸ್ ಉಪ ವಿಭಾಗದ ಉಪವಿಭಾಗಾಧಿಕಾರಿ ಡಾ:ದೇವರಾಜ್ ಬಿ.ಅವರಿಗೆ ಸಂಸ್ಥಾನದಿಂದ ಸನ್ಮಾನಿಸಿ ಗೌರವಿಸಲಾಯಿತು.
ರಾಜಾ ಸೀತಾರಾಮ ನಾಯಕ,ರಾಜಾ ವಾಸುದೇವ ನಾಯಕ,ರಾಜಾ ಲಕ್ಷ್ಮೀನಾರಾಯಣ ನಾಯಕ,ರಾಜಾ ಕೃಷ್ಣದೇವರಾಜ ನಾಯಕ,ರಾಜಾ ಪಿಡ್ಡನಾಯಕ,ರಾಘವೇಂದ್ರ ನಾಯಕ,ಕೇದಾರನಾಥ ಶಾಸ್ತ್ರಿ ಹಾಗು ಪಿಎಸ್‌ಐ ಕೃಷ್ಣಾ ಸುಬೇದಾರ,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಗಾಯಕ ಶ್ರೀಹರಿರಾವ್ ಅದ್ವಾನಿ,ಅನ್ವರ್ ಜಮಾದಾರ್,ಮಲ್ಲಿಕಾರ್ಜುನ ಬಾದ್ಯಾಪುರ,ರಾಘವೇಂದ್ರ ಭಕ್ರಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗು ರಾಜಾ ಕೃಷ್ಣಪ್ಪ ನಾಯಕ ಅವರ ಅಭಿಮಾನಿಗಳ ಸಂಘದ ಸದಸ್ಯರು ಭಾಗವಹಿಸಿದ್ದರು,ನಿವೃತ್ತ ಶಿಕ್ಷಕ ಶಿವಕುಮಾರ ಮಸ್ಕಿ ಕಾರ್ಯಕ್ರಮ ನಿರೂಪಿಸಿದರು,ಜಾವೀದ್ ಹವಲ್ದಾರ್ ವಂದಿಸಿದರು.