ನಾನೆಂದೂ ಮರೆಯಲಾಗದ ನನ್ನ ಗೆಳೆಯ ವಿಜಯಕಾಂತ ಪಾಟೀಲ..!

0
34

ನನ್ನ ಗೆಳೆಯ ಧಾರವಾಡದಲ್ಲಿ ಮೋಹನ ನಾಗಮ್ಮನರಿಂದ ನನಗೆ ಪರಿಚವಾದ ಹಾನಗಲ್ಲ ತಾಲ್ಲೂಕಿನ ಭಾವಿ ರಾಜಕಾರ ಅಲ್ಲದೇ ಸಾಹಿತಿ ಮತ್ತು ಪತ್ರಕರ್ತ, ನ್ಯಾಯವಾದಿ ವಿಜಯಕಾಂತ ಪಾಟೀಲ ನನಗೆ ಮೊನ್ನೆ ಹಾನಗಲ್ಲನಲ್ಲಿನಲ್ಲಿ ಸಿಕ್ಕಿದ್ದನು. ನಾನು ಹಾನಗಲ್ಲ ಚುನಾವಣಾ ಸಮೀಕ್ಷೆಗೆಂದು ಹಾನಗಲ್ಲಗೆ ಹೋಗಿದ್ದೇನು. ಆಗ ಅವನು ಸಿಕ್ಕಿದ್ದ.

ನನ್ನ ಜೊತೆಗೆ ಒಂದಿಷ್ಟು ರಾಜಕಾರಣದ ವಿಷಯವಾಗಿ ಮಾತಾನಾಡಿದೆನು. ಆಗ ಅವನು ಒಂದಿಷ್ಟು ನನ್ನ ಸಮೀಕ್ಷೆಯು ವಿಷಯವಾಗಿ ನನ್ನ ಜೊತೆಗೆ ತಕರಾರು ತೆಗೆದ. ಅಲ್ಲಲೇ ಶಿವು ಲಕ್ಕಣ್ಣವರ ನೀನು ನಿನ್ನ ಸಮೀಕ್ಷೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಹೆಸರನ್ನೇ ಮರೆತಿರುವಿಯಲ್ಲ. ಅಲ್ಲಲೇ ಶಿವು ನೀನು ಸಮೀಕ್ಷೆಯನ್ನು ಮಾಡುದಾದರೆ ಪೂರ್ಣವಾಗಿ ಮತ್ತು ಸರಿಯಾಗಿ ಮಾಡು ಮಾರಾಯ ಅಂದನು.

Contact Your\'s Advertisement; 9902492681

ನಾನಾಗ ಹೌದು ಗೆಳೆಯ ಜೆಡಿಸ್ ಅಭ್ಯರ್ಥಿ ಇಲ್ಲಿ ನಗಣ್ಯ. ನಿಜ ಹೇಳು ನಿನ್ನ ಹಾನಗಲ್ಲನಲ್ಲಿ ನಿಜವಾಗಿಯೂ ಪೈಪೋಟಿ ಇರುವುದು ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಮತ್ತು ಬಿಜೆಪಿಯ ಶಿವರಾಜ ಸಜ್ಜನವರ ನಡುವೆಯೇ ಅಲ್ಲವೇ ಎಂದು ವಾದಕ್ಕೆ ಬಿದ್ದೇನು. ಹೀಗೆಯೇ ಹಾನಗಲ್ಲ ರಾಜಕಾರಣದ ಬಗೆಗೆ ಮಾತು ಹಂಚಿಕೊಂಡೆವೆ.

ಈ ವಿಷಯ ಒತ್ತಟ್ಟಿಗಿರಲಿ, ಆದರೆ ನನಗೆ ಒಂದು ದಿನ ಹಾನಗಲ್ಲನಲ್ಲಿಯೇ ಉಳಿದುಕೊಳ್ಳು ಪ್ರಸಂಗ ಬಂದಿತು. ಶ್ರೀನಿವಾಸ ಮಾನೆ ಮತ್ತು ಶಿವರಾಜ ಸಜ್ಜನವರನ್ನು ಭೇಟಿ ಆಗಿ ಒಂದು ಸಂದರ್ಶನ ತೆಗೆದುಕೊಳ್ಳಬೇಕೆಂದರೆ ಅವರು ಪೂರ್ಣ ಬಿಜಿ ಆಗಿದ್ದರು ತಮ್ಮ ಪ್ರಚಾರದಲ್ಲಿ. ಹಾಗಾಗಿ ನಾನು ಒಂದು ದಿನ ಉಳಿದುಕೊಳ್ಳುವ ಅನಿವಾರ್ಯತೆ ಉಂಟಾಯಿತು. ಇರಲಿ ಇಲ್ಲಿಯವರೆಗೂ ಬಂದಿದ್ದೇನೆ ಉಳಿದುಕೊಂಡು ಅವರನ್ನು ಮಾತನಾಡಿಸಿಯೇ ಹೋಗೋಣವೆಂದು, ಆ ಒಂದು ದಿನ ಹಾನಗಲ್ಲನಲ್ಕಿಯೇ ಉಳಿದುಕೊಂಡೆನು.

ನಾನು ಹಾನಗಲ್ಲನಲ್ಲಿ ಉಳಿದುಕೊಂಡೆನು. ಆ ಸಂದರ್ಭದಲ್ಲಿ ಹಾನಗಲ್ಲ ವಸತಿಗೃಹಗಳು ತುಂಬಾ ಕಡಿಮೆ. ಹೋಗಲಿ ಮಾರಾಯ ನನ್ನ ಊರಿಗೇ ಬಾರಲೇ ಶಿವು ಎಂದ ವಿಜಯಕಾಂತ ಪಾಟೀಲ. ಆದರೆ ಅವನ ಊರಿಗೆ ಹೋಗಿ ಉಳಿದುಕೊಂಡರೆ ಎಲ್ಲಿ ಈ ರಾಜಕಾರಣಿಗಳು ತಪ್ಪುತ್ತಾರೆಯೇ ಎಂದು ಹಾನಗಲ್ಲನಲ್ಲಿಯೇ ಉಳಿದುಕೊಂಡೆನು. ಆ ಸಂದರ್ಭದಲ್ಲಿ ಹಾನಗಲ್ಲನಲ್ಲಿನ ಇರುವ ಎರಡೇ ವಸತಿಗೃಹಗಳ ರೂಮ್ ಬಾಡಿಗೆ ಹೇಳತೀರದು. ಒಂದೇ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ಎಂದು ಹೇಳಿದರು. ಆಯಿತು ಹೇಗೋ ಬಂದಿದ್ದೇನೆ. ಈ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಮಾತನಾಡಿಸಿಯೇ ಹೋಗೋಣವೆಂದು ಮಾಡಿದೆನು.

ಹಾಗಾಗಿ ಒಂದು ದಿನ ಉಳಿದುಕೊಂಡೆನು. ಆಗ ಒಂದು ಸಾವಿರ ರೂಪಾಯಿ ಕೊಟ್ಟು ವೃಂದಾವನ ಎಂಬ ವಸತಿಗೃಹದಲ್ಲಿ ಉಳಿದುಕೊಂಡೆನು. ಹಾಗಾಗಿ ನನ್ನಲ್ಲಿಯ ಇರುವ ಹಣವೂ ಊಟ ಮತ್ತು ಗೃಹಬಾಡಿಗೆಗೆ ಕಾಲಿ ಆಯಿತು.

ಹಾಗಾಗಿ ನಾನು ತಟ್ಟಂತೆ ವಿಜಯಕಾಂತ ಪಾಟೀಲನಿಗೆ ಫೋನ್ ಮಾಡಿದೆ. ಗೆಳೆಯ ನನಗೆ ಒಂದು ಸಾವಿರ ರೂಪಾಯಿ ಬೇಕು. ಕೊಡುತ್ತೀಯಾ ಎಂದು. ಅವನು ಏಕೋ ಆ ಅಭ್ಯರ್ಥಿಗಳಿಂದ ಇಸುದುಕೊಳ್ಳಬೇಗಾಗಿತ್ತು ಎಂದು ನಗಚಾಟಿ ಮಾಡಿದ. ಇಲ್ಲ ಮಾರಾಯ ನನಗದು ಆಗುವುದಿಲ್ಲ ಎಂದು ಹೇಳಿದೆ. ಅವನೂ ಸುದ್ದಹಸ್ತದವನು, ಸುಮ್ಮನೇ ಹಾಗೆ ನಗಚಾಟಿ ಮಾಡಿದ.

ಆಯಿತು ಮಾರಾಯ ನಾನು ಹಾನಗಲ್ಲಗೆ ಬರುತ್ತೇನೆ ಇರು ಎಂದು ಹೇಳಿದ ವಿಜಯಕಾಂತ ಪಾಟೀಲ. ಆಯಿತು ಮಾರಾಯ ಬಾ ಎಂದೆನು. ಒಟ್ಟಿನಲ್ಲಿ ನನಗೆ ಒಂದು ಸಾವಿರ ರೂಪಾಯಿ ಬೇಕು, ನೀನು ಕೊಡು ಎಂದು ಹೇಳಿದೆ.

ಅಂದಂತೆಯೇ ಹಾನಗಲ್ಲಗೆ ಬಂದ ನನ್ನ ಗೆಳೆಯ ವಿಜಯಕಾಂತ ಪಾಟೀಲ. ನನಗೆ ಆ ಒಂದು ಸಾವಿರ ರೂಪಾಯಿ ಕೊಟ್ಟ. ಆಗ ನಾನು ನಿರುಂಬಳವಾಗಿ ವಸತಿಗೃಹದ ಬಾಡಿಗೆ ಕೊಟ್ಟು ಸಂಬಂಧಿಸಿದ ರಾಜಕಾರಣಿಗಳ ಸಂದರ್ಶನ ತೆಗೆದುಕೊಂಡು, ನನ್ನ ಊರಿಗೆ ಮರಳಿದೆ. ಇಂತಹ ನಿಜ ಪ್ರೀತಿಯ ನನ್ನ ಗೆಳೆಯ ವಿಜಯಕಾಂತ ಪಾಟೀಲ.

ಹೀಗೆ ಹಾನಗಲ್ಲನಲ್ಲಿ ನನಗೆ ಸಹಾಯ ಮಾಡಿದ ವಿಜಯಕಾಂತ ಪಾಟೀಲ. ಇದು ಒಂದು ದಿನದ ಮಾತಲ್ಲ, ನಾಮ್ಮ ಧಾರವಾಡದ ಸಂದರ್ಭಗಳಲ್ಲೂ ಸಕಾಲಿಕಾಗಿ ಸಹಾಯ ಮಾಡಿದ್ದಾನೆ ವಿಜಯಕಾಂತ ಪಾಟೀಲ. ಇಂತಹ ಹಲವಾರು ಗೆಳೆಯರ ಋಣ ತೀರಿಸುವುದೆಂತು. ಈಗ ಹೇಳಿ ಗೆಳೆತನವೆಂದರೆ ಹೀಗಿರಬೇಕಲ್ಲವೇ..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here