ಬೆಂಗಳೂರು: ಖ್ಯಾತ ಚಿತ್ರ ನಟ ಪುನೀತ್ ರಾಜಕುಮಾರ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಅವರಿಗೆ ಹೃದಯಾಘಾತವಾಗಿದ್ದು, ಬೆಳಗ್ಗೆ ರಮಣಶ್ರೀ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಇವರಿಗೆ ಹೃದಯಾಘಾತವಾದ ಬಗ್ಗೆ ತಿಳಿದು ಬಂದಿದೆ.
ನಟಸಾರ್ವಭೌಮ, ದೊಡ್ಮನೆ ಹುಡುಗ, ಅಂಜನಿಪುತ್ರ, ರಾಜಕುಮಾರ, ನಮ್ಮಬಸವ, ಅಪ್ಪು, ವೀರಕನ್ನಡಿಗ, ಮಿಲನ, ಅಭಿ, ಯುವರತ್ನ, ಶೌರ್ಯ, ಕನ್ನಡಿಗ, ಅರಸು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು.