ಶಹಾಬಾದ: ಸಮೀಪದ ನಂದೂರು (ಬಿ). ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್ ಗುಲಬರ್ಗಾ ನೃಪತುಂಗ ಲಯನ್ಸ್ ಕ್ಲಬ್ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಕಲಬುರಗಿ ಇಲಾಖೆಯ ಸಂಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಪಲ್ಲಾ ಅವರು ಮಾತನಾಡಿ, ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮ ಜೊತೆಗೆ ಆರೋಗ್ಯ ಇಲಾಖೆಯ ಜೊತೆಯಲ್ಲಿ ಕೈ ಜೊಡಿಸಿ ಗ್ರಾಮದ ಜನರಿಗೆ ಅವರ ಆರೋಗ್ಯದ ದೃಷ್ಟಿಯಿಂದ ಆರೋಗ್ಯವಂತ ಜೀವನ ನಡೆಸಲು ನಮಗೆ ಪೌಷ್ಟಿಕಾಹಾರ ಸೇವನೆ ಬಹಳ ಮುಖ್ಯ ಎಂದು ಹೇಳಿದರು. ವೈದ್ಯರಾದ ಡಾ. ಶ್ರೀ ನಿವಾಸ ಅವಂಟಿ ಅವರು ಮಕ್ಕಳ ಕ್ಯಾನ್ಸರ್ ಬಗ್ಗೆ ಮಾತನಾಡಿದರು.
ನಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರಿಜಾದೇವಿ ಅಧ್ಯಕ್ಷತೆ ವಹಿಸಿದ್ದರು. ಹಾಗೆ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛ ಭಾರತ ಅಂಗವಾಗಿ ಸುತ್ತಲಿನ ಗಿಡ ಗಂಟಿ ,ಕಸವನ್ನು ಸ್ವಚ್ಛ ಮಾಡಲಾಯಿತು ಮತ್ತು ಸಸಿಗಳನ್ನು ವಿತರಿಸಲಾಯಿತು.
ಕಲಬುರಗಿ ಆರೋಗ್ಯ ಇಲಾಖೆ ಸರ್ಕಾರಿ ನೌಕರರ ಸಂಘದ ಸಂತೋ? ಕುಡಳ್ಳಿ. ಜಿಲ್ಲಾ ಕ್ಷಯರೋಗ ನಿರ್ಮೂಲನ ಡಿಆರ್‌ಟಿಬಿ. ಟಿಐಎಸ್‌ಎಸ್ ಸಮಾಲೋಚಕ ಮಂಜುನಾಥ ಕಂಬಳಿಮಠ, ವಲಯ ಅಧ್ಯಕ್ಷರಾದ ಅರುಣಾ ಅವಂತಿ, ಲಯನ್ಸ್ ಕ್ಲಬ್‌ನ ಜಿಲ್ಲಾ ಅಧಿಕಾರಿ ಹಣಮಯ್ಯ ಬೇಲೂರೆ, ಮಾಜಿ ಅಧ್ಯಕ್ಷರಾದ ಡಾ. ಶರಣಮ್ಮ ಬಿರಾದಾರ, ಲಯನ್ಸ್ ಕ್ಲಬ್ ನ ಸದಸ್ಯೆ ಜೈ ಶೀಲಾ, ಕಾರ್ಯದರ್ಶಿ ಸುಗಣ್ಣ ಅವಂಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಾವೇದ್ ಆಲಿ ಮತ್ತು ಶಿವಶರಣಪ್ಪಾ, ರೇ?. ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.