ಚಿತ್ರಕಲೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ಡಾ.ನಿಷ್ಠಿ

0
13

ಕಲಬುರಗಿ: ಚಿತ್ರಕಲೆ ವಿಚಾರ ಶಕ್ತಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸಿಗೆ ಸಮಾಧಾನ ಮತ್ತು ನೆಮ್ಮದಿ ನೀಡುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ನಿರಂಜನ್. ವಿ.ನಿಷ್ಠಿ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯದ ಸಾತ್ನಕೋತ್ತರ ಚಿತ್ರಕಲಾ ವಿಭಾಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಚಿತ್ರಕಲಾ ಪ್ರದರ್ಶನವನ್ನು ಚಿತ್ರಕಲೆಗಳನ್ನು ವೀಕ್ಷಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಚಿತ್ರಕಲೆ ಮತ್ತು ಸಂಗೀತ ಅತೀ ಪ್ರೀಯವಾದ ವಿಷಯಗಳು, ಹೆಚ್ಚಾಗಿ ಇವುಗಳ ಬಗ್ಗೆ ಡಾ.ಅಪ್ಪಾಜಿ ಅವರು ಆಗಾಗ್ಗೆ ಪ್ರಸ್ತಾಪಿಸುತ್ತಿರುತ್ತಾರೆ. ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿ ಅವರ ಆಶೀರ್ವಾದದಿಂದ ಶರಣಬಸವ ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗ ಇಷ್ಟೊಂದು ಎತ್ತರಕ್ಕೆ ಬೆಳದಿದ್ದು ಶಾಘನೀಯ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಮ ಕುಲಪತಿ ಪ್ರೊ.ವಿ.ಡಿ.ಮೈತ್ರಿ ಮಾತನಾಡುತ್ತ ಚಿತ್ರಕಲೆ ಮತ್ತ ವಾಸ್ತು ಶಿಲ್ಪಕಲೆಗೆ ಅವಿನಾಭಾವ ಸಂಭಂಧವಿದೆ. ವಿದ್ಯಾರ್ಥಿಗಳು ಚಿತ್ರಕಲೆ ವಿಷಯ ಆಯ್ದುಕೊಳ್ಳುವುದರಿಂದ ಅವರಲ್ಲಿ ಸೃಜನಶೀಲತೆ ಬೆಳೆಯುತ್ತದೆ ಎಂದು ಹೇಳಿದರು.

ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಡೀನ್ ಡಾ.ಶಾಂತಲಾ ನಿಷ್ಠಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಬಹಳ ಮಹತ್ವವಿದೆ. ಚಿತ್ರಕಲೆಗಳ ಜೊತೆಗೆ ಕರಕುಶಲ ವಸ್ತುಗಳನ್ನು ತಯಾರಿಸುವ ಜಾಣ್ಮೆ ಹೊಂದಬೇಕು ಇದರಿಂದ ಕಲಿಕೆ ಜೊತೆ ಗಳಿಕೆ ಆಗುತ್ತದೆ ಎಂದು ತಿಳಿಸಿದರು.

ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಚೇರಪರ್ಸನ್ ಡಾ.ಸುಬ್ಬಯ್ಯ ಎಂ.ನೀಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಮಹಾಲಕ್ಷ್ಮೀ ಮತ್ತು ಅರ್ಪಿತ ನಿರೂಪಿಸಿದರು. ಪ್ರೋ.ಗಾಯಿತ್ರಿ ಕಲ್ಯಾಣಿ ಸ್ವಾಗತಿಸಿದರೆ ಪ್ರೊ.ಸರಸ್ವತಿ ರೆಶ್ಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಚಿತ್ರಕಲಾ ಪ್ರದರ್ಶನದಲ್ಲಿ ಬಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here