ಇತಿಹಾಸದಲ್ಲಿ ವಲ್ಲಾಬಾಯಿ ಪಟೇಲ್,ಇಂದಿರಾಗಾಂಧಿ ಹೆಸರು ಅಜರಾಮರ

0
45

ಶಹಾಬಾದ: ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸರ್ದಾರ ವಲ್ಲಾಬಾಯಿ ಪಟೇಲ್ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರು ಭಾರತದ ಇತಿಹಾಸದಲ್ಲಿ ಎಂದೆಂದೂ ಅಜರಾಮರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು.

ಅವರು ರವಿವಾರ ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಇಂದಿರಾಗಾಂಧಿ ಪುಣ್ಯತಿಥಿ, ಸರ್ದಾರ ವಲ್ಲಾಬಾಯಿ ಪಟೇಲ್ ಜಯಂತಿ ಹಾಗೂ ಪುನೀತ್ ರಾಜಕುಮಾರ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ತಮ್ಮ ಜೀವನವನ್ನು ದೇಶಕ್ಕೆ ಸಮರ್ಪಿಸಿದ ಪಟೇಲರ್ ಕೊಡುಗೆಯನ್ನು ಎಂದಿಗೂ ಮರೆಯುವುದಿಲ್ಲ. ಹರಿದು ಹೋದ ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಿಸುವಲ್ಲಿ ಪಟೇಲರ ಪಾತ್ರ ಹಿರಿದು ಎಂದು ಬಣ್ಣಿಸಿದರು.

ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ,ಬಲಿ?,ಸ್ವಾಭಿಮಾನಿ, ಸ್ವಾವಲಂಬಿ ಭಾರತವನ್ನು ಇಡೀ ವಿಶ್ವ ತಲೆ ಎತ್ತಿನೋಡುವಂತೆ ಕಟ್ಟಿದವರು ಮಾಜಿ ಪ್ರಧಾನಿ ಇಂದಿರಾಗಾಂಧಿ. ಅವರ ಬಡವರ ಬಗೆಗಿನ ಕಾಳಜಿ, ದೇಶಪ್ರೇಮ, ದಿಟ್ಟನಿರ್ಧಾರ ಕೈಗೊಳ್ಳುವ ಆತ್ಮಶಕ್ತಿ ಎಲ್ಲ ಕಾಲದ ಆಡಳಿತಗಾರರಿಗೆ ಮಾದರಿ ಎಂದರು.

ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾಣೂರ ಮಾತನಾಡಿ, ಮನು?ತ್ವದ ಮೌಲ್ಯಗಳನ್ನು ಎತ್ತಿಹಿಡಿದ ಸರಳ ಸಜ್ಜನಿಕೆಯ ಯುಗಪುರು? ಸದಾ ಹಸನ್ಮುಖಿ ಪುನೀತ್ ರಾಜ್ ಕುಮಾರ್ ತಮ್ಮ ಜೀವನ ಸಾರ್ಥಕತೆ ಸರಳ ಆದರ್ಶ ವ್ಯಕ್ತಿ ಇಂದಿನ ಯುವ ಪೀಳಿಗೆ ಬೆಳವಣಿಗೆಗೆ ಸಾರ್ಥಕತೆ ಬದುಕನ್ನು ಹೇಗೆ ಸಾಧಿಸಬೇಕು ಯಾವ ರೀತಿ ಬದುಕಬೇಕು ಸ್ನೇಹ ಪ್ರೀತಿ ವಿಶ್ವಾಸ ಸರಳ ನಿ? ಪ್ರಾಮಾಣಿಕತೆ ಎಲ್ಲವನ್ನು ಆದರ್ಶವಾಗಿಟ್ಟುಕೊಂಡು ಯುವಕರಿಗೆ ಮಾದರಿಯಾಗಿದ್ದ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿರುವುದು ಚಿತ್ರರಂಗಕ್ಕೆ ತುಂಬಲಾರದ ನ?ವಾಗಿದ್ದರೆ ಕೋಟಿಕೋಟಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ದಂತಾಗಿದೆ ಎಂದರು.

ಕುಮಾರ ಚವ್ಹಾಣ, ಹಾಷಮ್ ಖಾನ, ಕಿರಣ ಚವ್ಹಾಣ, ದೇವರಾಜ ರಾಠೋಡ, ಬಾಬಾ, ಮುನ್ನಾ ಪಟೇಲ್, ರಫಿಕ್ ಕಾರೊಭಾರಿ, ಮೀರಾಜ ಸಾಹೇಬ, ಪಾಂಡು ಪವಾರ, ನಿಂಗಣ್ಣ ಸಂಗಾವಿಕರ್,ನಿಂಗಣ್ಣ ಪೂಜಾರಿ,ಅಜರೋದ್ದಿನ್, ಇಬ್ರಾಹಿಂ,ಶೇಖ ಚಾಂದ್ ವಾಹೀದಿ, ಅಜ್ಜು
ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here