ಕಲಬುರಗಿ: ದಲಿತರು ಬಿಜೆಪಿಗೆ ಹೊಟ್ಟೆತುಂಬಿಸಿಕೊಳ್ಳಲು ಹೋಗಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ, ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಸರದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಲಾಯಿತು.
ಈ ಸಂದರ್ಭದಲ್ಲಿ ಶಿವರಾಜ ಪಾಟೀಲ ರದ್ದೆವಾಡಗಿ, ಅಂಬಾರಾಯ ಅಷ್ಟಗಿ, ದೇವಿಂದ್ರ ಸಿನ್ನೂರ, ದಿನೇಶ ದೊಡ್ಡಮನಿ, ಅಂಬಾದಾಸ್ ಕುಲಕರ್ಣಿ, ವಿಕಾಸ ಕಿರಣಕಿ, ಹಣಮಂತ ಮುತ್ಯಾ, ಪ್ರಲ್ಹಾದ ಹಡಗಿಲ, ದೀನೆಶ ನಾಯಕ ಬಿಜೆಪಿ ಕಾರ್ಯಕರ್ತರು ಇದ್ದರು.