ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಚುನಾವಣೆ ಕಲಬುರಗಿ ನಗರದ ಜ್ಞಾನ ಸಿಂಚನ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆಯಿತು. ಡಾ.ಎಸ್ ಎಸ್ ಪಾಟೀಲ್ ಪೆನಲ್ ನ ಹತ್ತು ಜನ ಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಡಾ. ಎಸ್. ಎಸ್. ಪಾಟೀಲ್, ಉಪಾಧ್ಯಕ್ಷರಾಗಿ ಸಿ. ಬಿ. ಪಾಟೀಲ ಮತ್ತು ರವೀಂದ್ರ ಮಾಳವತಕರ್, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್ ತಪಲಿ, ಖಜಾಂಚಿಯಾಗಿ ಚಂದ್ರಶೇಖರ್ ಪಾಟೀಲ್, ಸಹ ಕಾರ್ಯದರ್ಶಿಯಾಗಿ ಶಿವಶರಣಪ್ಪ ಉದನೂರ
ಸದಸ್ಯರಾಗಿ ಜಮುನಾಬಾಯಿ, .ಮಾಣಿಕ್ ರಾವ್ ಸಕ್ಪಾಲ್ ಪ್ರೀತಿ, ಅಬ್ಜಲ್ ಅಹಮದ್, ನಾಗರಾಜ ಕಾಮಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಶ್ರೀ ಸಂಗಮೇಶ್ವರ ಹಿರೇಮಠ ಹಾಗೂ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಅಶೋಕ ಜೀವಣಗಿ, ಎಚ್ . ಸಿ. ಪಾಟೀಲ್ ಡಾ.ಶ್ರೀಶೈಲ ಘೂಳಿ, ರಾಜ್ಯ ಅಧ್ಯಕ್ಷರಾದ ಗಿರೀಶ್ ಕಡ್ಲೆವಾಡ ವೇದಿಕೆ ಮೇಲೆ ಹಾಜರಿದ್ದರು .ಕರಾವಿಪ ಕೇಂದ್ರ ಕಚೇರಿಯಿಂದ ಮಹಾರುದ್ರಪ್ಪ ಆಣದೂರೆ ವೀಕ್ಷಕರಾಗಿ ಆಗಮಿಸಿದ್ದರು .
ಸಭೆಯಲ್ಲಿ ಸದಸ್ಯರಾದ ಚನ್ನಬಸಪ್ಪ ಮುಧೋಳ, ಸಿ ಜೆ ಹಳ್ಳದ ಅರುಣಕುಮಾರ್ ಪಾಟೀಲ್ ಕಿಶೋರ್ ಸಿಂಗ್ ಮಹೇಶ್ ಬಸರಕೋಡ್ ಸಂಜೀವ್ ಕುಮಾರ್ ಪಾಟೀಲ್ ಶ್ರೀಪಾಲ್ ಬೋಗಾರ ಶಿವಶರಣಪ್ಪ ಮೂಳೆಗಾಂವ, ಡಾ. ಶಿವರಂಜನ್ ಸತ್ಯಂಪೇಟೆ, ಬಿ.ಎಚ್. ನಿರಗುಡಿ, ವೀರಭದ್ರ ಸಿಂಪಿ, ಸಿದ್ಧರಾಮ ಬೇತಾಳೆ, ಎನ್. ಎಸ್. ಹಿರೇಮಠ, ಶರಣಗೌಡ ಪಾಳಾ, ಈಶ್ವರ ಕಟ್ಟಿಮನಿ, ಡಾ. ಚಿ.ಸಿ. ನಿಂಗಣ್ಣ ಸೇರಿದಂತೆ ಸುಮಾರು 400 ಕ್ಕಿಂತ ಹೆಚ್ಚಿನ ದಾನಿ ಸದಸ್ಯರು ಪಾಲ್ಗೊಂಡಿದ್ದರು.