ಜೀವನದಲ್ಲಿ ಪರಿವರ್ತನೆ ಬರಲು ಅಕ್ಷರ ಜ್ಞಾನ ಅಗತ್ಯ-ನ್ಯಾ: ತಯ್ಯಬಾ ಸುಲ್ತಾನ

0
20

ಸುರಪುರ: ಕಾರಾಗೃಹಗಳಲ್ಲಿರುವ ಖೈದಿಗಳಿಗಾಗಿ ಸರಕಾರದಿಂದ ಅನುಷ್ಠಾನಗೊಳಿಸುತ್ತಿರುವ ಕಲಿಕೆಯಿಂದ ಬದಲಾವಣೆ ತುಂಬಾ ವಿಶಿಷ್ಠ ಕಾರ್ಯಕ್ರಮವಾಗಿದ್ದು ಬೇರೆ ಬೇರೆ ಅಪರಾಧಗಳಿಂದ ಕಾರಾಗೃಹಕ್ಕೆ ಬರುವ ವಿಚಾರಣಾಧೀನ ಬಂಧಿಗಳು ವಿಶೇಷವಾಗಿ ಅನಕ್ಷರಸ್ಥ ಬಂಧಿಗಳು ಜೈಲಿನಿಂದ ಬಿಡುಗಡೆ ಆಗುವದರೊಳಗಾಗಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡುವ ಉದ್ದೇಶ ಹೊಂದಿದ್ದು ಜೈಲಿನಿಂದ ಬಿಡುಗಡೆಗೊಂಡ ನಂತರ ಜೀವನದಲ್ಲಿ ಪರಿವರ್ತನೆಗೊಂಡು ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಅಕ್ಷರ ಜ್ಞಾನ ತುಂಬಾ ಅವಶ್ಯಕತೆ ಇದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ನೆರವು ಸಮಿತಿ ಅಧ್ಯಕ್ಷರಾದ ತಯ್ಯಬಾ ಸುಲ್ತಾನಾ ಹೇಳಿದರು.

ತಾಲೂಕು ಉಪ ಕಾರಾಗೃಹ,ಲೋಕ ಶಿಕ್ಷಣ ಸಮಿತಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ನಗರದ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಕಾರಾಗೃಹ ನಿವಾಸಿಗಳಿಗೆ ಸಾಕ್ಷರತಾ ಕಾರ್ಯಕ್ರಮ ಹಾಗೂ ಕಲಿಕಾ ಕೇಂದ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ ಕಲಿಕೆಯಿಂದ ಬದಲವಣೆ ಎಂಬ ಪ್ರಮುಖ ಉದ್ದೇಶವನ್ನು ಹೊಂದಿರುವ ಈ ಕಾರ್ಯಕ್ರಮವು ಕಾರಾಗೃಹದಲ್ಲಿರುವ ಅನಕ್ಷರಸ್ಥ ಬಂಧಿಗಳಿಗೆ ಅಕ್ಷರ ಜ್ಞಾನ ಕಲಿಯಲು ಒಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದು ಇದರ ಸದುಪಯೋಗಪಡೆದುಕೊಂಡು ಅಕ್ಷರ ಜ್ಞಾನ ಕಲಿತು ಬದಲಾವಣೆಯಾಗುವ ಮೂಲಕ ಮುಂದೆ ತಮ್ಮ ಬದುಕಿಗೆ ದಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ನೆರವು ಸಮಿತಿಯ ಸದಸ್ಯ ಕಾರ್ಯದರ್ಶಿ ಚಿದಾನಂದ ಬಡಿಗೇರ,ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅಜಿತ ನಾಯಕ, ಬಿಇಓ ಮಹದೇವರೆಡ್ಡಿ ಮಾತನಾಡಿದರು.

ವಜ್ಜಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಗುರುನಾಥ ನಾವದಗಿರವರು ” ಬಂಧಿಗಳ ಅಕ್ಷರ ಅಭ್ಯಾಸ ಕುರಿತು” ವಿಶೇಷ ಉಪನ್ಯಾಸ ನೀಡಿದರು,ಕಾರಾಗೃಹ ಅಧೀಕ್ಷಕರಾದ ವಿಜಯಲಕ್ಷ್ಕೀ ಹಾದಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು,ಕಾರಾಗೃಹ ವೀಕ್ಷಕರಾದ ಬಸವರಾಜ ಹೆಚ್. ನಿರೂಪಿಸಿದರು ಬಿ.ಬಿ.ಗೋಡಿಹಾಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here