ಶಹಾಬಾದ :ಬಿಜೆಪಿಯು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಹೇಳಿಕೆ ನೀಡುವುದರ ಮೂಲಕ ಅಪಪ್ರಚಾರ ಮಾಡುತ್ತಿದೆ ಎಂದು ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಬಸಪ್ಪ ಪಗಲಾಪೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಶನಿವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ದಲಿತ ವಿರೋಧಿ ಪಟ್ಟಕಟ್ಟುವ ಕೆಲಸ ಮಾಡುತ್ತಿದ್ದಾರೆ.ಅಸೂಯೆಯಿಂದ ಜಾತಿ ಜಾತಿಯನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಹಾತ್ಮರ ಬಗ್ಗೆಯೇ ಟೀಕೆ ಮಾಡುವ ಜಾಯಮಾನ ಹೊಂದಿರುವ ಬಿಜೆಪಿ ಈಗ ಸಿದ್ಧರಾಮಯ್ಯನವರ ವಿರುದ್ಧ ಬಗ್ಗೆ ಅಪಪ್ರಚಾರ ಮಾಡುವುದು ನೋಡಿದರೇ ಅಸೂಯೆ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ.
ದಲಿತರ, ಬಡವರ ಪರವಾಗಿರುವ ಏಕೈಕ ನಾಯಕ ಎಂದರೆ ಸಿದ್ಧರಾಮಯ್ಯನವರು.ಎಲ್ಲ ವರ್ಗದ ಏಳಿಗೆ ಬಯಸುವಂತಹ ನಾಯಕರು.ಅವರು ಯಾವ ಜಾತಿಗೂ ವಿರೋಧಿಯಲ್ಲ.ಅವರ ಜನಪ್ರೀಯತೆಯನ್ನು ನೋಡಿ ಮುಂದಿನ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭೀತಿಯಿಂದ ಇಂತಹ ಕೆಲಸ ಮಾಡುತ್ತಿದ್ದಾರೆ.
ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕೊಟ್ಟಂತಹ ಯೋಜನೆಗಳನ್ನು ಯಾರು ಕೊಟ್ಟಿಲ್ಲ.ಕೊಡುವುದು ಇಲ್ಲ.ಅಲ್ಲದೇ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಕೂಡಲೇ ಎಸ್‍ಸಿ,ಎಸ್‍ಟಿ, ಒಬಿಸಿ, ಅಲ್ಪಸಂಖ್ಯಾತ ಸಮುದಾಯದವರು ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳಲ್ಲಿ ಪಡೆದಿದ್ದ ಸಾಲಗಳನ್ನು ಮನ್ನಾ ಮಾಡಿದರು.
ಹೀಗಿರುವಾಗ ಅವರು ದಲಿತ ವಿರೋಧಿ ಹೇಗಾಗುತ್ತಾರೆ? ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂಬ ಹೇಳಿಕೆ ನೀಡಿದಾಗ ಅದರ ಬಗ್ಗೆ ಬಿಜೆಪಿಯ ಒಬ್ಬರು ಮಾತನಾಡಲಿಲ್ಲ.ಅಂತಹವರು ಇಂದು ಸಿದ್ಧರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.