ಶಹಾಬಾದ: ಮಕ್ಕಳÀ ಸರ್ವಾಂಗೀಣ ವಿಕಾಸ ಕೇವಲ ಪಠ್ಯ ಪುಸ್ತಕದಿಂದಲ್ಲ. ಕಲೆ, ಚಿತ್ರಕಲೆ ಹಾಗೂ ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಗಳಿಂದ ಸಾಧ್ಯ ಎಂದು ಚಿತ್ರ ಕಲಾವಿದ ಮಹ್ಮದ್ ಖದೀರ್ ಹೇಳಿದರು.
ಅವರು ನಗರದ ಅಂಜುಮನ್ ಉರ್ದು ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಠ್ಯ ಪುಸ್ತಕದೊಂದಿಗೆ ಕಲೆ, ಚಿತ್ರಕಲೆ ಹಾಗೂ ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಸರ್ವಾಂಗೀಣ ವಿಕಾಸವಾಗಲು ಸಾಧ್ಯ. ಪಠ್ಯೇತರ ಚಟುವಟಿಕೆಗಳಿಂದ ಮಾನಸಿಕ ವಿಕಸನವಾಗಿ, ಜ್ಞಾನರ್ಜನೆಯಾದರೆ ಅದು ಪೂರ್ಣ ಶಿಕ್ಷಣ. ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಯ ಸವಾರ್ಂಗೀಣ ಬೆಳವಣಿಗೆಯಾಗಲು ಸಾಧ್ಯವೆಂದರು.
ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಪೀರಪಾಶಾ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಕಲೆಯನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಚಿತ್ರ ಕಲಾವಿದ ಮಹ್ಮದ್ ಖದೀರ್ ಚಿತ್ರಕಲೆ ಸ್ಟರ್ಧೆ ಏರ್ಪಡಿಸಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.
ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ಚಟುವಟಿಕೆಗಳಿಂದ ದೇಹ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಇದರಿಂದ ಮಾನಸಿಕವಾಗಿ ಉಲ್ಲಾಸದಿಂದಿರಲು ಸಾಧ್ಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸೈಯಿದಾ ಪ್ರಥಮ ಬಹುಮಾನ, ಸಿಮ್ರಾ ಫಾತಿಮಾ ದ್ವಿತೀಯ ಬಹುಮಾನ, ಫರ್ದೋಸ್ ಬೆಗಂ ತೃತೀತ ಬಹುಮಾನ ಹಾಗೂ ಬುಶಿರಾ ಮದಿಹಾ, ಅಮೀನಾಬೇಗಂಗೆ ಸಮಾಧಾನಕರ ಬಹಮಾನವನ್ನು ಮುಖ್ಯಗುರುಗಳಾದ ಆಯಶಾಬೇಗಂ ಬಹುಮಾನ ವಿತರಣೆ ಮಾಡಿದರು.