ಶಹಾಬಾದ:ರೈತರ ಹೊಲದಲ್ಲಿ ಕಬ್ಬು ಕಟಾವು ಆದ ಹದಿನೈದು ದಿನಗಳ ಒಳಗಾಗಿ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುತ್ತೆವೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಚೌಡಾಪೂರ ಕೆಪಿಆರ್ ಸಕ್ಕರೆ ಕಾರ್ಖಾನೆಯ ಡಿಜಿಎಮ್ ರಾಜಶೇಖರ ಪಾಟೀಲ ಹೇಳಿದರು.
ಅವರು ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಚೌಡಾಪೂರ ಕೆಪಿಆರ್ ಸಕ್ಕರೆ ಕಾರ್ಖಾನೆಯ ವತಿಯಿಂದ ಕಬ್ಬು ಬೆಳೆದ ರೈತರೊಂದಿಗೆ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಒಂದು ಟನ್ ಕಬ್ಬಿಗೆ 2300 ರಿಂದ 2400ವರೆಗೆ ನಿಗದಿ ಮಾಡುವ ಮೂಲಕ ರೈತರ ಖಾತೆಗೆ ಹಣ ಸಂದಾಯ ಮಾಡುತ್ತೆವೆ. ನಮ್ಮ ಖಾರ್ಖಾನೆಯ ವತಿಯಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೆವೆ. ಅಲ್ಲದೇ ರೈತರಿಗೆ ಸ್ಪಂದಿಸುತ್ತೆವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಟಾವು ಮಾಡಿದ ಹದಿನೈದು ದಿನಗಳ ಒಳಗಾಗಿ ಹಣ ಸಂದಾಯ ಮಾಡುವುದಾದರೆ ಮಾತ್ರ ನಿಮಗೆ ಕಬ್ಬು ನೀಡುತ್ತೆವೆ.ಇಲ್ಲದಿದ್ದರೇ ಬೇರೆ ಕಾರ್ಖಾನೆಯವರಿಗೆ ನೀಡುತ್ತೆವೆ ಎಂದು ರೈತರು ಹೇಳಿದರು.
ಅದಕ್ಕೆ ಅಧಿಕಾರಿ ಹದಿನೈದು ದಿನಗಳ ಒಳಗಾಗಿ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುತ್ತೆವೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೇ ನೀಡಿದರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರೈತರು ಒಪ್ಪಿಗೆ ಸೂಚಿಸಿದರು.
ಕೆಪಿಆರ್ ಸಕ್ಕರೆ ಕಾರ್ಖಾನೆಯ ಸಂತೋಷ, ವೀರಪ್ಪ, ರೈತ ಮುಖಂಡರಾದ ಮಕದುಮ್ ಪಟೇಲ್, ಅಣಿರುದ್ರಗೌಡ, ಭೀಮುಗೌಡ ಖೇಣಿ, ಸಾಯಬಣ್ಣ ಕೊಲ್ಲೂರ್, ಹರ್ಷದ, ಶಿವಪ್ಪ ಕಂಟಿಕರ್,ಮಾರ್ಥಂಡ ಬುರ್ಲಿ, ಈರಣ್ಣ, ಕಾಲೀದ್ ಪಟೇಲ್, ಮಲ್ಲೇಶಪ್ಪ ಹೆಗ್ಗುಂಡಿ,ನಾಗೇಂದ್ರ ಟೆಂಗಳಿ, ಸಂಗಣ್ಣ ಬಾಗೋಡಿ,ಇಬ್ರಾಹಿಮ್,ಮೆಹಬೂಬಲಾಲ,ಶಿವಪ್ಪ ಹೆಗ್ಗುಂಡಿ, ಮಲ್ಲೇಶಿ, ಪ್ರಕಾಶಮ ರಾಮಣ್ಣ ಪೂಜಾರಿ, ಈರಣ್ಣ ಇತರರು ಇದ್ದರು.