ಬೀದರ್: ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನೇ ವ್ಯಕ್ತಿಯೊಬ್ಬ ಹೊಡೆದು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಬಸವಕಲ್ಯಾಣ್ ಪಟ್ಟಣದ ದೇಗಲೂರೆ ಗಲ್ಲಿಯಲ್ಲಿ ಶುಕ್ರವಾರ ವರದಿಯಾಗಿದೆ. ಮೃತಳನ್ನು ಶಿವಲೀಲಾ ಬಸವರಾಜ್ ಮಡ್ಡಿ ಇಲ್ಲಾಳ್ (35) ಎಂದು ಗುರುತಿಸಲಾಗಿದೆ.
ದಂಪತಿ ಮಧ್ಯೆ ಜಗಳವಾಗಿ ವಿಕೋಪಕ್ಕೆ ಹೋಗಿದ್ದರಿಂದ ಪತಿಯು ಸಿಟ್ಟಿನಲ್ಲಿ ಪತ್ನಿಗೆ ಹೊಡೆದ. ಪರಿಣಾಮ ಆಕೆ ಅಸುನೀಗಿದಳು ಎನ್ನಲಾಗಿದೆ. ಈ ಕುರಿತು ಬಸವಕಲ್ಯಾಣ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.