ಆಳಂದ: ಪಟ್ಟಣದಲ್ಲಿನ ಹಜರತ್ ಲಾಡ್ಲೆ ಮಶಾಸಕ ದರ್ಗಾ ಪ್ರದೇಶದಲ್ಲಿನ ಶಿವಲಿಂಗ ಸ್ಥಳದಲ್ಲಿ ರವಿವಾರ ಹೆಸಿಗೆಯಿಂದ ಭಂಗಗೊಳಿಲಾಗಿದೆ ಎಂದು ಹಿಂದುಪರ ಸಂಘಟನೆಯ ಕಾರ್ಯಕರ್ತರಿಂದ ಸೋಮವಾರ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದರು.
ಪಟ್ಟಣದ ಬಸ್ ನಿಲ್ದಾಣ, ಶ್ರೀರಾಮ ಮಾರುಕಟ್ಟೆ, ಮುಖ್ಯ ರಸ್ತೆಯ ಮೂಲಕ ತಹಸೀಲ್ದಾರ ಕಚೇರಿಯ ವರೆಗೆ ಪ್ರತಿಭಟನೆ ಕೈಗೊಂಡ ಕಾರ್ಯಕರ್ತರು, ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲಿಸಿ ಕೂಡಲೇ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ದರ್ಗಾದಲ್ಲಿರುವ ಪುರಾತನ ಕಾಲದಿಂದಲೂ ಶಿವಲಿಂಗ ವಿರೋಪಗೊಳಿಸಿದವರ ಮೇಲೆ ಕ್ರಮಕೈಗೊಂಡು ಮುಂದಿನ ದಿನಗಳಲ್ಲಿ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇವಸ್ಥಾನ ಕಟ್ಟಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಘಟನೆ ಪಟ್ಟಣದಲ್ಲಿ ಸೌಹಾರ್ದತೆ ಹಾಳು ಮಾಡುವ ಕೆಲಸವನ್ನು ಮಾಡಿದ್ದು ಖಂಡನೀಯವಾಗಿದೆ. ಹಿಂದಿನಿಂದಲೂ ಸಹೋದರತ್ವದಿಂದ ನಡೆದಿದ್ದೇವೆ. ಆದರೆ ಮುಂದೆ ನಮ್ಮ ಧರ್ಮ, ದೇವರಗಳಿಗೆ ಅವಮಾನಿಸಿದರೆ ಸಹಿಸಲಾಗದು. ಹಿಂದು ಸಮಾಜ ಮುಖಂಡರ ಒತ್ತಾಯದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ಹೋರಾಟ ನಿಲಿಸುವುದಿಲ್ಲ ಎಂದು ಅವರು ಗುಡಗಿದರು.
ಈ ಹಿಂದೇಯೂ ಮೂರ್ನಾಲ್ಕು ಬಾರಿ ದರ್ಗಾದಲ್ಲಿನ ಲಿಂಗವನ್ನ ತೆಗೆದು ಹಾಕಲು ಪ್ರಯತ್ನಿಸಿದ್ದಾರೆ. ಇದು ಸರಿಯಲ್ಲ. ಇನ್ನೂ ಮುಂದೆ ಶಿವಲಿಂಗ ವಿರುವ ಸ್ಥಳವನ್ನು ಹಿಂದುಗಳಿಗೆ ಹಸ್ತಾಂತರಿಸಿ ದೇವಸ್ಥಾನ ಕಟ್ಟಲು ಅವಕಾಶ ಮಾಡಿಕೊಡಬೇಕು. ಈ ಪ್ರಕರಣದ ನ್ಯಾಯ ದೊರೆಯುವ ತನಕ ಹೋರಾಟ ನಿಲ್ಲದು ಎಂದು ಅವರು ಹೇಳಿದರು.
ಆನಂದ ಬಿರಾದಾರ ಕೊರಳ್ಳಿ, ಮಹೇಶ ಗೌಳಿ, ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಸಂಪತಕುಮಾರ ವೇದಪಾಠಕ ಮತ್ತಿತರು ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಮರಾಠ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಶರಣು ಕುಮಸಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಪುರಸಭೆ ಸದಸ್ಯ ಸಂತೋಷ ಹೂಗಾರ, ಪುರಸಭೆ ಮಾಜಿ ಸದಸ್ಯ ಲಿಂಗರಾಜ ಪಾಟೀಲ, ರಾಜು ಷಣ್ಮೂಖ ಸೇರಿದಂತೆ ಪಕ್ಷಭೇದ ಮರೆತು ಹಿಂದುಪರ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು, ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿ ಬಂದೋಬಸ್ತಿಗೆ ವ್ಯವಸ್ಥೆ ಕೈಗೊಳ್ಳಲಾಗುವುದು.
ಆರೋಪಿಗಳ ಬಂಧನಕ್ಕೆ ವಾರದ ಕಾಲಾವಕಾಶ ನೀಡಬೇಕು. ಶಾಂತಿಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಅವರು ಕೋರಿದರು. ಪಿಎಸ್‍ಐ ಮಹಾಂತೇಶ ಪಾಟೀಲ ಬೀಗಿ ಬಂದೋಬಸ್ತ್ ಒದಗಿಸಿದರು. ಪ್ರತಿಭಟನೆ ವೇಳೆ ಕೆಲಕಾಲ ಅಂಗಡಿ, ಮುಗ್ಗಂಟುಗಳು ಮುಚ್ಚಲ್ಪಟ್ಟಿದ್ದವು.
ದರ್ಗಾದಲ್ಲಿ ಲಿಂಗದ ಸ್ಥಳದಲ್ಲಿ ನಡೆದ ಘಟನೆ ಖಂಡನೀಯವಾಗಿದೆ. ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಯಾವುದೇ ಧರ್ಮ ಮತ್ತು ದೇವರನ್ನು ಅವಮಾನಿಸುವ ತಪ್ಪಿತಸ್ಥರು ಆರೇ ಆಗಿರಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. -ಮೌಲಾ ಮುಲ್ಲಾ ರೈತಪರ ಹೋರಾಟಗಾರ ಆಳಂದ.