ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಚಿಲಿಪಿಲಿ ಕಲರವರ ಶುರು

0
22

ಆಳಂದ: ಎಲ್‍ಕೆಜಿ, ಯುಕೆಜಿ ಹಾಗೂ ಅಂಗನವಾಡಿ ಶಾಲೆಗಳನ್ನು ಕೋವಿಡ್-19 ಮಾರ್ಗಸೂಚಿ ಅನ್ವಯ ಪುನರ ಪ್ರಾರಂಭಿಸುವಂತೆ ರಾಜ್ಯ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿಗಳು ಏಕಕಾಲಕ್ಕೆ ಆರಂಭಗೊಂಡು ಚಿಣ್ಣರ ಚಿಲಿಪಿಲಿ ಕಲರವ ಕೇಳಿಬಂದಿತು.

ಕೋವಿಡ್ ಹಿನ್ನೆಲೆಯಲ್ಲಿ ಸುಮಾರು 20 ತಿಂಗಳ ಬಳಿಕ ಅಂಗನವಾಡಿಗಳಲ್ಲಿ ಮಕ್ಕಳ ಚಿಲಿಪಿಲಿ ಸದ್ದು ಕೇಳಬಂದಿತ್ತು.
ಪಟ್ಟಣದ ಅಂಗನವಾಡಿ ಕೇಂದ್ರವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಹಾದೇವಿ ವಚ್ಛೆ ಅವರ ನೇತೃತ್ವದಲ್ಲಿ ಕಾರ್ಯಕರ್ತೆಯರು ಮಕ್ಕಳಿಗೆ ಆರತಿ ಬೆಳಗಿ ಗುಲಾಬಿ ಹೂಗಳನ್ನು ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಿಕೊಂಡ ದೃಶ್ಯ ಗಮನ ಸೆಳೆಯಿತು.

Contact Your\'s Advertisement; 9902492681

ಶಾಲೆಗೆ ಮಕ್ಕಳು ಹೋಗಿ ಬಂದರೆ ಖುಷಿಯಾಗಿ ಎಲ್ಲರೊಂದಿಗೆ ಬೆರೆತು ಆಟವಾಡುವುದರಿಂದ ಮಕ್ಕಳ ಮನಸ್ಸು ಸಂತಸದಿಂದ ಕೂಡಿರುತ್ತದೆ. ಅಂಗನವಾಡಿ ಪುನಾರಂಭದ ಸರ್ಕಾರದ ನಿರ್ಧಾರಕ್ಕೆ ಪೋಷಕರು ಸಂತಷ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ 39 ಹಾಗೂ ಗ್ರಾಮೀಣದಲ್ಲಿ 382 ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 40907 ಮಕ್ಕಳ ಕೇಂದ್ರಗಳಿಗೆ ಮೊದಲು ದಿನವೇ ಹಾಜರಾಗಿದ್ದಾರೆ. ಗ್ರಾಮ ಮಟ್ಟದಲ್ಲಿ ಬಾಲವಿಕಾಸ ಸಮಿತಿ ಹಾಗೂ ಗ್ರಾಪಂ ಸದಸ್ಯರ ಕೂಡಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಹೂಗಳನ್ನು ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here